ಮೊದಲ ಮಗುವಿನ ನಿರೀಕ್ಷೆಯಲ್ಲಿ ದೀಪಿಕಾ ರಣವೀರ್ ?

Follow Us :

ಬಾಲಿವುಡ್ ನಲ್ಲಿ ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಕುರಿತು ಗಾಸಿಪ್ ಗಳು ಆಗಾಗ ಹರಿದಾಡುತ್ತಲೇ ಇರುತ್ತವೆ.ಆದರೆ ಈ ಬಾರಿ ದೀಪ್ ವೀರ್ ದಂಪತಿ ಮಗುವಿನ ನಿರೀಕ್ಷೆ ಕುರಿತು ಸುದ್ದಿಯಾಗಿದ್ದಾರೆ.ಹೌದು ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಬಾರಿ ಚರ್ಚೆ ನಡೆಯುತ್ತಿದ್ದು, ದೀಪ್ ವೀರ್ ದಂಪಟಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ನೆಟ್ಟಿಗರು ಕೇಳುತ್ತಿದ್ದಾರೆ.

ಇನ್ಸ್ಟಾಗ್ರಾಮ್ ನಲ್ಲಿ ಪರಿಣಿತಿ ಚೋಪ್ರಾ ಅವರು ಅಸ್ಕ್ ಮೀ ಎನಿಥಿಂಗ್ ಸೆಸ್ಶನ್ ನಡೆಸಿದ್ದು ಇವರ ಅಭಿಮಾನಿ ಒಬ್ಬರು ಈ ವಿಚಾರ ಹೇಳಿದ್ದಾರೆ. ರಣವೀರ್ ಸಿಂಗ್ ಪಾಪ ಬಂಗಾಯ ಅಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಪರಿಣಿತಿ ಚೋಪ್ರಾ ದಯವಿಟ್ಟು ಖಚಿತ ಪಡಿಸಿ ಎಂದು ರಣವೀರ್ ಸಿಂಗ್ ಅನ್ನ ಟ್ಯಾಗ್ ಮಾಡಿದ್ದಾರೆ.

ಪರಿಣಿತಿ ಅವರ ಪ್ರಶ್ನೆಗೆ ರಣವೀರ್ ಸಿಂಗ್ ಇನ್ನು ಉತ್ತರಿಸಲಿಲ್ಲ. ಆದರೆ ಈ ಬಗ್ಗೆ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. ಈ ಬಗ್ಗೆ ರಣವೀರ್ ಸಿಂಗ್ ಅವರೇ ಖಚಿತ ಪಡೆಸಬೇಕಿದೆ.ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಅವರು 2013ರಲ್ಲಿ ಡೇಟಿಂಗ್ ಆರಂಭಿಸಿ 2018 ರಲ್ಲಿ ವಿವಾಹ ಜೀವನಕ್ಕೆ ಕಾಲಿಟ್ಟಿದ್ದರು, ಆದರೆ ಈ ವರೆಗೂ ಮಕ್ಕಳ ವಿಚಾರದಲ್ಲಿ ಈ ಜೋಡಿ ಅಷ್ಟೇನು ಸುದ್ದಿಯಾಗಿರಲಿಲ್ಲ ಆದರೆ ಈಗ ಪರಿಣಿತಿ ಚೋಪ್ರಾ ಗೆ ಅಭಿಮಾನಿಯೊಬ್ಬರು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.