Cinema

ಪ್ರಭಾಸ್ ಅವರ ಸಾಲಾರ್ ಚಿತ್ರವೇ ಕೇಜಿಫ್ ಚಾಪ್ಟರ್ 3? ಕೊನೆಗೂ ಅಭಿಮಾನಿಗಳೇ ಹುಡುಕಿದ ಸೀಕ್ರೆಟ್

ಈಗಂತೂ ಎಲ್ಲಿ ನೋಡಿದರೂ ಕೇಜಿಫ್೨ ಚಿತ್ರದ್ದ ಹವಾ ಎಂದರೆ ತಪ್ಪಾಗಲಾರದು. ವಿಶ್ವದಾದ್ಯಂತ ಸುಮಾರು ೧೬೦೦೦ ಕ್ಕೂ ಹೆಚ್ಚು ಥಿಯೇಟರ್ ಗಳಲ್ಲಿ ಕೇಜಿಫ್೨ ಚಿತ್ರ ಬಿಡುಗಡೆಯಾಗಿ ಎಲ್ಲೆಡೆ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಎಲ್ಲಾ ಕಡೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಈಗಾಗಲೇ ಕೇಜಿಫ್೨ ಚಿತ್ರದ ಕಲೆಕ್ಷನ್ ೫೦೦ ಕೋಟಿಗೂ ಹೆಚ್ಚಾಗಿದೆ ಎಂದು ಮೂಲಗಳ ಪ್ರಕಾರ ತಿಳಿದು ಬಂದಿದೆ.

ಪ್ರಶಾಂತ್ ನೀಲ್ ನಿರ್ದೇಶನದ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೇಜಿಫ್೨ ಚಿತ್ರ ಬಿಡುಗಡೆಯಾಗಿ ಕೇವಲ ಮೂರೇ ಮೂರು ದಿನಗಳು ಆಗಿದ್ದು,ಈಗಲೇ ಬೆಂಗಳೂರು ಸೇರಿದಂತೆ ಚೆನ್ನೈ, ಹೈದೆರಾಬಾದ್ ಹಾಗು ಮುಂಬೈ ನಲ್ಲಿ ಕೇಜಿಫ್೨ ಚಿತ್ರದ ಮಧ್ಯ ರಾತ್ರಿ ಶೋಗಳು ಹೌಸ್ ಫುಲ್ ಆಗುತ್ತಿದ್ದು, ಇದು ಕನ್ನಡಿಗರು ನಿಜಕ್ಕೂ ಹೆಮ್ಮೆ ಪಡುವ ವಿಚಾರ.

ಕೇಜಿಫ್೨ ಕನ್ನಡ ಅಲ್ಲದೆ ತೆಲುಗು, ತಮಿಳು, ಮಲಯಾಳಂ ಹಾಗು ಹಿಂದಿ ಭಾಷೆಯಲ್ಲಿ ಬಿಡುಗಡೆಯಾಗಿದ್ದು, ವಿದೇಶದಲ್ಲಿ ಕೂಡ ಕೇಜಿಫ್೨ ಚಿತ್ರ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಅಮೇರಿಕ ಅಂತಹ ದೇಶಗಳಲ್ಲಿ ಮಧ್ಯ ರಾತ್ರಿ ಶೋಗಳು ಹೌಸ್ ಫುಲ್ ಆಗಿದ್ದು, ಅಲ್ಲಿರುವ ಭಾರತೀಯರ ಜೊತೆ ವಿದೇಶದ ಜನರು ಕೂಡ ಕೇಜಿಫ್೨ ಚಿತ್ರವನ್ನು ನೋಡುತ್ತಿದ್ದಾರೆ.

ಇಷ್ಟು ವರ್ಷಗಳ ಕಾಲ ಯಾವ ಕನ್ನಡ ಹೀರೋಗಳು ಮಾಡಿರುವ ಸಾಧನೆಯನ್ನು ನಮ್ಮ ರಾಕಿಂಗ್ ಸ್ಟಾರ್ ಯಶ್ ಅವರು ಮಾಡಿದ್ದು, ಈಗ ಇಡೀ ದೇಶವೇ ನಮ್ಮ ಕನ್ನಡದ ಕಡೆಗೆ, ಕನ್ನಡ ಚಿತ್ರರಂಗದ ಕಡೆಗೆ ತಿರುಗಿ ನೋಡುವಂತೆ ಮಾಡಿದೆ. ಇನ್ನೂ ನೀವು ಕೇಜಿಫ್೨ ಚಿತ್ರವನ್ನು ನೋಡಿದರೆ ಚಿತ್ರದ ಕ್ಲಿಮ್ಯಾಕ್ಸ್ ನಲ್ಲಿ ಕೇಜಿಫ್ ಚಾಪ್ಟರ್ 3 ಬಗ್ಗೆ ಒಂದು ಝಲಕ್ ಕೂಡ ಬರುತ್ತದೆ. ಈಗಾಗಲೇ ಕೇಜಿಫ್ ಚಾಪ್ಟರ್ 3 ಗಾಗಿ ಪ್ರೇಕ್ಷಕರು ಕಾಯುತ್ತಿದ್ದಾರೆ.

ಒಂದು ಕಡೆ ಕೇಜಿಫ್ ಚಾಪ್ಟರ್ 3 ಅಂದರೆ ಅದು ಪ್ರಭಾಸ್ ಅವರ ಸಾಲಾರ್ ಚಿತ್ರ, ಸಾಲಾರ್ ಚಿತ್ರದಲ್ಲಿ ಪ್ರಭಾಸ್ ಅವರ ಜೊತೆ ರಾಕಿಂಗ್ ಸ್ಟಾರ್ ಯಶ್ ಅವರು ಇರುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಕೇಜಿಫ್೨ ಚಿತ್ರದ ಬಗ್ಗೆ ಕರ್ನಾಟಕದಲ್ಲಿ ಅಂದ್ರ, ತಮಿಳು ನಾಡಿನ ನ್ಯೂಸ್ ಚಾನಲ್ ಗಲ್ಲಿ ಕೂಡ ನ್ಯೂಸ್ ಗಳನ್ನೂ, ಕಲೆಕ್ಷನ್ ಬಗ್ಗೆ ವಿಚಾರಗಳನ್ನು ಹಾಕುತ್ತಿದ್ದಾರೆ.

ಇನ್ನೂ ಈಗಾಗಲೇ ಅಭಿಮಾನಿಗಳು ಹುಡುಕಿರುವ ಒಂದು ಸೀಕ್ರೆಟ್ ವಿಚಾರ ಏನಪ್ಪಾ ಏನಂದ್ರೆ, ಕೇಜಿಫ್ ಚಾಪ್ಟರ್ 3 ಅಂದರೆ ಅದು ಪ್ರಭಾಸ್ ಅವರ ಸಾಲಾರ್ ಚಿತ್ರ ಎಂಬುದು! ಇದು ಎಷ್ಟು ನಿಜ ಎಂದು ನಮಗೂ ತಿಳಿದಿಲ್ಲ, ಆದರೆ ಇದರ ಕ್ರೇಜಿ ಎಷ್ಟರ ಮಟ್ಟಿಗೆ ಇದೇ ಎಂದರೆ, ಅಭಿಮಾನಿಗಳೇ ಈ ಸೀಕ್ರೆಟ್ ಗಳನ್ನೂ ಹುಡುಕಿದ್ದಾರೆ! ಅದು ನಿಜಕ್ಕೂ ಏನು ಗೊತ್ತಾ, ಈ ಕೆಳಗಿನ ವಿಡಿಯೋ ನೋಡಿ

ಇನ್ನೂ ಕೇಜಿಫ್೨ ಚಿತ್ರದ ಈಗಿನ ಕಲೆಕ್ಷನ್ ಬರೋಬ್ಬರಿ ೫೦೦ ಕೋಟಿಗೂ ಹೆಚ್ಚಾಗಿದ್ದು, ಇನ್ನೊಂದು ವಾರದಲ್ಲಿ ಕೇಜಿಫ್೨ ಚಿತ್ರದ ಕಲೆಕ್ಷನ್ ಬರೋಬ್ಬರಿ ೧೦೦೦ ಕೋಟಿ ದಾಟಲಿದೆ ಎಂದು ಹಲವಾರು ನ್ಯೂಸ್ ಮಾಧ್ಯಮಗಳು ಹೇಳುತ್ತಿವೆ. ಕೇಜಿಫ್೨ ಚಿತ್ರದಿಂದ ಕನ್ನಡ ಇಂಡಸ್ಟ್ರಿಯ ಲೆವೆಲ್ ಈಗ ಒಂದು ಹೆಜ್ಜೆ ಜಾಸ್ತಿಯಾಗಿದ್ದು, ಇಂತಹ ಸಾಧನೆಯನ್ನು ಮಾಡಿರುವ ರಾಕಿಂಗ್ ಸ್ಟಾರ್ ಯಶ್, ನಿರ್ದೇಶಕ ಪ್ರಶಾಂತ್ ನೀಲ್ ಅವರಿಗೆ ಕೋಟಿ ನಮನಗಳು.

ಸದ್ಯ ಇನ್ನೂ ಮೂರು ದಿನಗಳ ಕಾಲ ಕೇಜಿಫ್೨ ಚಿತ್ರದ ಟಿಕೆಟ್ ಬುಕಿಂಗ್ ಗಳು ಎಲ್ಲಾ ಕಡೆ ಸೋಲ್ಡ್ ಔಟ್ ಆಗಿದ್ದು, ಇದು ನಿಜಕ್ಕೂ ಕನ್ನಡ ಸಿನಿಮಾಗಳ, ಕನ್ನಡಿಗರ ತಾಕತ್ತು ಎಂದು ಜನರು ಹೇಳುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಎಲ್ಲಿ ನೋಡಿದರೂ ಕೇಜಿಫ್೨ ಚಿತ್ರದ್ದೇ ಹವಾ ಎಂದು ಹೇಳಿದರೆ ತಪ್ಪಾಗಲಾರದು.

Most Popular

To Top