gossip

ದಿವ್ಯ ಉರುಡುಗ ಬಗ್ಗೆ ಹೊಟ್ಟೆ ಕಿಚ್ಚು ಪಡುತ್ತಿರುವ ದಿವ್ಯ ಸುರೇಶ್ ! ಕಾರಣ ಏನು ?

ಬಿಗ್ ಬಾಸ್ ಕನ್ನಡ ಸೀಸನ್ 8 ರಿಯಾಲಿಟಿ ಶೋ ಶುರುವಾಗಿ 25 ದಿನಗಳು ಸಮೀಪಿಸುತ್ತಿದೆ. ಮೂರು ವಾರಗಳಲ್ಲಿ ಬಿಗ್ ಮನೆಯಲ್ಲಿ ಸಾಕಷ್ಟು ವಿಷಯಗಳು ನಡೆದಿವೆ. ಬಿಗ್ ಬಾಸ್ ಮನೆಯ ಲವ್ ಗಾಸಿಪ್ ವಿಷಯಕ್ಕೆ ಬಂದರೆ ದಿವ್ಯ ಸುರೇಶ್ ಮತ್ತು ಮಂಜು ಪಾವಗಡ ಹೆಸರು ಮನೆಯ ಹಾಟ್ ಟಾಪಿಕ್ ಆಗಿತ್ತು. ಆದರೆ ಕಳೆದ ವಾರ ಬಿಗ್ ಬಾಸ್ ನೀಡಿದ್ದ ಜೋಡಿ ಟಾಸ್ಕ್ ನಲ್ಲಿ ಜಾಸ್ತಿ ಸೌಂಡ್ ಮಾಡಿದ್ದು ದಿವ್ಯ ಉರುಡುಗ ಮತ್ತು ಅರವಿಂದ್ ಕೆಪಿ.

ಜೋಡಿ ಟಾಸ್ಕ್ ನಲ್ಲಿ ದಿವ್ಯ ಮತ್ತು ಅರವಿಂದ್ ಅತ್ಯುತ್ತಮವಾದ ಪ್ರದರ್ಶನ ನೀಡಿ ಒಳ್ಳೆಯ ಪ್ರಶಂಸೆ ಪಡೆದರು. ಟಾಸ್ಕ್ ನಡುವೆ ದಿವ್ಯ  ಅರವಿಂದ್ ನಡುವೆ ಒಳ್ಳೆಯ ಸ್ನೇಹ ಕೂಡ ಬೆಳೆದಿದೆ. ಟಾಸ್ಕ್ ಮುಗಿದ ನಂತರ ಕೂಡ ಇವರಿಬ್ಬರು ಜೊತೆಯಲ್ಲಿ ಇರುವುದು ಮಾತನಾಡುವುದು ಕಡಿಮೆ ಮಾಡಿಲ್ಲ. ಜೋಡಿ ಟಾಸ್ಕ್ ನಂತರ ಮನೆಯ ಎಲ್ಲ ಸದಸ್ಯರ ಬಾಯಲ್ಲು ದಿವ್ಯ ಉರುಡುಗ ಮತ್ತು ಅರವಿಂದ್ ಹೆಸರು ಕೇಳಿಬರುತ್ತಿದೆ.

ಇದರಿಂದಾಗಿ ದಿವ್ಯ ಸುರೇಶ್ ಅವರಿಗೆ ಬಹಳ ಬೇಸರವಾಗಿದೆ. ಮೊದಲ ಎರಡು ವಾರಗಳ ಕಾಲ ಮನೆಯಲ್ಲಿ ಮಂಜು ದಿವ್ಯ ಸುರೇಶ್ ಹೆಸರು ಹೆಚ್ಚಾಗಿ ಕೇಳಲ್ಪಟ್ಟಿತ್ತು ಅದರೆ ಈಗ ದಿವ್ಯ ಉರುಡುಗ ಮತ್ತು ಅರವಿಂದ್ ಹೆಸರು ಕೇಳಿಬರುತ್ತಿರುವುದು ದಿವ್ಯ ಸುರೇಶ್ ಅವರ ಹೊಟ್ಟೆಕಿಚ್ಚಿಗೆ ಕಾರಣವಾಗಿದೆ. ಇದರ ಬಗ್ಗೆ ಶುಭಾ ಪೂಂಜಾ ಜೊತೆ ಹೇಳಿಕೊಂಡಿದ್ದಾರೆ. ಈ ವಿಷಯದ ಕುರಿತು ಶುಭಾ ಪೂಂಜಾ ನಿಧಿ ಸುಬ್ಬಯ್ಯ ಜೊತೆ ಮಾತನಾಡಿದ್ದಾರೆ.

Most Popular

To Top