ಅರೆಸ್ಟ್ ಆಗ್ತಾರಾ ಇಂದ್ರಜಿತ್ ಲಂಕೇಶ್?

Follow Us :

ದರ್ಶನ್ ಮೇಲೆ ಮಾಡಿರುವ ಆರೋಪಗಳಿಂದ ಕೇಂದ್ರ ಬಿಂದು ಆಗಿರುವ ಇಂದ್ರಜೀತ್ ಲಂಕೇಶ್ ಅವರಿಗೆ ಆರೋಪಗಳ ಸುರಿಮಳೆ ಕೇಳಿಬರುತ್ತಿದೆ.ದರ್ಶನ್ ಅವರನ್ನು ವೈಯಕ್ತಿಕವಾಗಿ ತೇಜೋಹನೆ ಮಾಡಲಾಗುತ್ತಿದೆ ಸುಳ್ಳು ಆರೋಪಗಳನ್ನು ಹೊರಿಸಲಾಗುತ್ತಿದೆ.

ಇಂದ್ರಜೀತ್ ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಪೊಲೀಸರ ಮೊರೆ ಹೋಗಿದ್ದಾರೆ ಅಭಿಮಾನಿಗಳು.
ದರ್ಶನ್ ಅವರು ಹಲ್ಲೆ ಮಾಡಿದ್ದಾರೆ ಎಂದು ಯಾರು ದೂರು ನೀಡಿಲ್ಲ ಆದರೂ ಇಂದ್ರಜೀತ್ ಲಂಕೇಶ್ ಅವರು ಆರೋಪ ಮಾಡುತ್ತಿದ್ದಾರೆ.

ಇದಕ್ಕೆ ದಾಖಲೆ ಮತ್ತು ಸಾಕ್ಷಿಗಳನ್ನು ಸಹ ಒದಗಿಸುತ್ತಿಲ್ಲ. ಹೋಟೆಲ್ ಸಪ್ಲೈಯರ್ ದಲಿತ ಎಂದು ಪದೇ ಪದೇ ಹೇಳುವ ಮೂಲಕ ಕೋಮೊದ್ವೇಷ ಅರಡಿಸುವ ಪ್ರಯತ್ನ ನಡೆದಿದೆ. ಇಂದ್ರಜೀತ್ ಲಂಕೇಶ್ ಅವರ ವಿರುದ್ಧ ಕಾನೂನಿನ ಕ್ರಮ ತೆಗೆದುಕೊಳ್ಳಬೇಕೆಂದು ಧೂರಿನಲ್ಲಿ ಪ್ರಸ್ತಾಪಿಸಿದ್ದಾರೆ.

ಲಂಕೇಶ್ ಅವರ ವಿರುದ್ಧ ಇದೀಗ ದೊಡ್ಡಬಳಾಪುರದಲ್ಲಿ ದೂರು ದಾಖಲಾಗಿದೆ. ದರ್ಶನ್ ಅವರ ವಿರುದ್ಧ ಅವಹೇಳನ ಮಾಡಿ ದಲಿತರ ಮೇಲೆ ಹಲ್ಲೆ ಎಂದು ಸುಳ್ಳು ಆರೋಪಮಾಡಿದ್ದಾರೆ ಎಂದು ಉಲ್ಲೇಖಿಸಿ ದೊಡ್ಡಬಳ್ಳಾಪುರ ಪೊಲೀಸ್ ಠಾಣೆಯಲ್ಲಿ ಚಾಲೆಂಜಿಗ್ ಸ್ಟಾರ್ ಅಭಿಮಾನಿಗಳ ಸಂಗದ ವತಿಯಿಂದ ದೂರು ದಾಖಲಿಸಿದ್ದಾರೆ.