ರಶ್ಮಿಕಾಗೆ ಎಂಗೇಜ್ಮೆಂಟ್ ಆಯ್ತಾ ?

Follow Us :

ನಟಿ ರಶ್ಮಿಕಾ ಮಂದಣ್ಣ ದಕ್ಷಿಣ ಭಾರತದ ಚಿತ್ರರಂಹದಲ್ಲಿ ಅತಿಹೆಚ್ಚು ಬೇಡಿಕೆಯಿರುವ ನಟಿಯರಲ್ಲಿ ಒಬ್ಬರು. ರಶ್ಮಿಕಾ ಅವರನ್ನು ” ನ್ಯಾಷನಲ್ ಕ್ರಶ್ “ಎಂದು ಕರೆಯುತ್ತಾರೆ. ರಶ್ಮಿಕಾ ದಕ್ಷಿಣ ಭಾರತದ ಚಲನಚಿತ್ರ ಜಗತ್ತಿನಲ್ಲಿ ಇವರಿಗೆ ಬಹುದೊಡ್ಡ ಅಭಿಮಾನಿ ಬಳಗ ಇದೆ. ಇತ್ತೀಚಿನ ದಿನಗಳಲ್ಲಿ ಅನೇಕ ಸಿನಿಮಾಗಳಲ್ಲಿ ರಶ್ಮಿಕಾ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.

ಇತ್ತೀಚೆಗೆ ನಟಿ ರಶ್ಮಿಕಾ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳ ಮನಸ್ಸಿಗೆ ಶಾಕ್ ಆಗುವಂತಹ ಫೋಟೋ ಒಂದನ್ನು ಹಂಚಿಕೊಂಡಿದ್ದಾರೆ. ನಟಿ ರಶ್ಮಿಕಾ ಆ ಫೋಟೋ ಶೇರ್ ಮಾಡಿದ ನಂತರ ಅವರಿಗೆ ನಿಶ್ಚಿತಾರ್ಥ ಆಗಿರಬಹುದು ಎಂದು ನೆಟ್ಟಿಗರು ಮತ್ತು ಅವರ ಅಭಿಮಾನಿಗಳು ಊಹೆ ಮಾಡಿದ್ದರು. ಇದಕ್ಕೆ ಕಾರಣ ರಶ್ಮಿಕಾ ತಮ್ಮ ಕೈಯಲ್ಲಿ ಉಂಗುರ ಇರುವ ಫೋಟೋವನ್ನು ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಶೇರ್ ಮಾಡಿದ್ದರು.

ತೆಲುಗು ಚಿತ್ರಗಳಲ್ಲಿ ಕೆಲಸ ಮಾಡಿರುವ ಈ ಕನ್ನಡ ನಟಿಯ ಇತ್ತೀಚಿನ ಇನ್ಸ್ಟಾಗ್ರಾಮ್ ಸ್ಟೋರಿಯಿಂದ  ನಿಶ್ಚಿತಾರ್ಥದ ಬಗ್ಗೆ ವದಂತಿಹಬ್ಬಿತ್ತು. ಆದರೆ ಇದಕ್ಕೆ ಸ್ಪಷ್ಟನೆ ನೀಡಿರುವ ನಟಿ ರಶ್ಮಿಕಾ, ಐ ಗಾಟ್ ಯೂ ಎಂದು ಬರೆದು,  “ಈ ಉಂಗುರವನ್ನು ಕಳಿಸಿದವರಿಗೆ ಉಂಗುರ ನನಗೆ ತಲುಪಿದೆ, ಅದರ ಜೊತೆ ಇದ್ದ ಸೀಕ್ರೆಟ್ ಮೆಸೇಜ್ ಅನ್ನು ಸಹ ಓದಿದ್ದೇನೆ. ಇದರ ಸೈಜ್ ಪರ್ಫೆಕ್ಟ್ ಆಗಿದೆ, ನನ್ನ ಕೈಗೆ ಸರಿಯಾಗಿ ಮ್ಯಾಚ್ ಆಗುತ್ತಿದೆ..” ಎಂದು ಬರೆದಿದ್ದಾರೆ ನಟಿ ರಶ್ಮಿಕಾ. ಈ ಮೂಲಕ ಎಂಗೇಜ್ಮೆಂಟ್ ವಿವಾದಕ್ಕೆ ತೆರೆ ಎಳೆದಿದ್ದಾರೆ.