ಎಮೋಷನಲ್ ಆದ ರಶ್ಮಿಕಾ ಮಂದಣ್ಣ, ನನ್ನ ಪೇರೆಂಟ್ಸ್ ನನ್ನ ನೋಡಿ ಗರ್ವಿಸುತ್ತಿಲ್ಲ ಎಂದ್ರು…..!

Follow Us :

ಸಿನಿರಂಗದಲ್ಲಿ ಸ್ಟಾರ್‍ ಗಳಾಗಲು ಪ್ರತಿಭೆ, ಶ್ರಮದ  ಜೊತೆಗೆ ಅದೃಷ್ಟ ಸಹ ಇರಬೇಕು. ಆಗ ಮಾತ್ರ ಸ್ಟಾರ್‍ ಗಳಾಗಲು ಸಾಧ್ಯ. ಮೊದಲನೇ ಸಿನೆಮಾದ ಮೂಲಕವೇ ಭಾರಿ ಕ್ರೇಜ್ ಪಡೆದುಕೊಂಡ ನಟಿಯರಲ್ಲಿ ಸ್ಯಾಂಡಲ್ ವುಡ್ ನ ರಶ್ಮಿಕಾ ಮಂದಣ್ಣ ಸಹ ಸೇರುತ್ತಾರೆ. ಕಿರಿಕ್ ಪಾರ್ಟಿ ಎಂಬ ಕನ್ನಡ ಸಿನೆಮಾದ ಮೂಲಕ ಎಂಟ್ರಿ ಕೊಟ್ಟ ಈಕೆ ಕಡಿಮೆ ಸಮಯದಲ್ಲೇ ಸ್ಟಾರ್‍ ಡಮ್ ಗಿಟ್ಟಿಸಿಕೊಂಡರು. ಬಳಿಕ ಟಾಲಿವುಡ್, ಕಾಲಿವುಡ್ ಬಳಿಕ ಬಾಲಿವುಡ್ ನಲ್ಲೂ ಸಹ ಭಾರಿ ಆಫರ್‍ ಗಳನ್ನು ಪಡೆದುಕೊಳ್ಳುತ್ತಾ ಬಹುಬೇಡಿಕೆ ನಟಿಯಾಗಿದ್ದಾರೆ. ಇದೀಗ ಆಕೆ ಕೆಲವೊಂದು ಎಮೋಷನಲ್ ಹೇಳಿಕೆಗಳನ್ನು ನೀಡಿದ್ದು ವೈರಲ್ ಆಗುತ್ತಿವೆ.

ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ಸೌತ್ ಅಂಡ್ ನಾರ್ತ್ ನಲ್ಲೂ ಬಹುಬೇಡಿಕೆ ನಟಿಯಾಗಿದ್ದಾರೆ. ಸ್ಯಾಂಡಲ್ ವುಡ್ ನಲ್ಲಿ ಕಿರಿಕ್ ಪಾರ್ಟಿ ಸಿನೆಮಾದ ಮೂಲಕ ಫೇಂ ಪಡೆದುಕೊಂಡ ಈಕೆ ಬಳಿಕ ಚಲೋ ಎಂಬ ಸಿನೆಮಾದ ಮೂಲಕ ತೆಲುಗು ರಂಗಕ್ಕೆ ಎಂಟ್ರಿ ಕೊಟ್ಟರು. ಬಳಿಕ ಬ್ಯಾಕ್ ಟು ಬ್ಯಾಕ್ ಆಫರ್‍ ಗಳನ್ನು ಪಡೆದುಕೊಳ್ಳುತ್ತಾ ಸಕ್ಸಸ್ ಪುಲ್ ನಟಿಯಾದರು. ಅದರಲ್ಲೂ ಆಕೆಗೆ ಪುಷ್ಪಾ ಸಿನೆಮಾ ಭಾರಿ ಕ್ರೇಜ್ ತಂದುಕೊಟ್ಟಿತ್ತು. ಈ ಸಿನೆಮಾದ ಬಳಿಕ ಆಕೆ ಪ್ಯಾನ್ ಇಂಡಿಯಾ ಸ್ಟಾರ್‍ ಆದರು. ಜೊತೆಗೆ ವಿಜಯ್ ಜೊತೆಗೆ ತಮಿಳಿನಲ್ಲೂ ಸಹ ಎಂಟ್ರಿ ಕೊಟ್ಟರು. ವಾರಸುಡು ಎಂಬ ಸಿನೆಮಾದ ಮೂಲಕ ತಮಿಳು ರಂಗಕ್ಕೆ ಎಂಟ್ರಿ ಕೊಟ್ಟರು. ಈ ಸಿನೆಮಾ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಜೊತೆಗೆ ಬಾಲಿವುಡ್ ನಲ್ಲೂ ಸಹ ಆಕೆ ಅವಕಾಶಗಳನ್ನು ಪಡೆದುಕೊಳ್ಳುತ್ತಾ ಕೆರಿಯರ್‍ ಸಾಗಿಸುತ್ತಿದ್ದಾರೆ.

ಇನ್ನೂ ಇತ್ತೀಚಿಗೆ ರಶ್ಮಿಕಾ ಸಂದರ್ಶನವೊಂದರಲ್ಲಿ ಎಮೋಷನಲ್ ಕಾಮೆಂಟ್ಸ್ ಮಾಡಿದ್ದಾರೆ. ನಾನು ಹಿರೋಯಿನ್ ಆಗಿ ಒಂದು ಸ್ಥಾನ ಪಡೆದುಕೊಂಡಿದ್ದೇನೆ. ಅನೇಕ ಅವಾರ್ಡ್‌ಗಳನ್ನು ಸಹ ಪಡೆದುಕೊಂಡಿದ್ದೇನೆ. ಆದರೆ ನನ್ನ ಪೇರೆಂಟ್ಸ್ ಈ ಬಗ್ಗೆ ಗರ್ವ ಪಡುತ್ತಿಲ್ಲ. ಅದಕ್ಕೆ ಕಾರಣ ಸಿನಿರಂಗದ ಬಗ್ಗೆ ಅವರಿಗೆ ಏನು ತಿಳಿದಿಲ್ಲ. ನನ್ನ ವೃತ್ತಿಯ ಬಗ್ಗೆ ಅವರಿಗೆ ಸಂಪೂರ್ಣವಾಗಿ ಅವಗಾಹನೆ ಇಲ್ಲದೇ ಇದ್ದರೂ ಸಹ ನನಗೆ ಬೇಕಾದಂತಹ ಪ್ರೋತ್ಸಾಹ ನೀಡುತ್ತಿದ್ದಾರೆ. ಇನ್ನೂ ಕೆರಿಯರ್‍ ಆರಂಭದಲ್ಲೂ ನನ್ನ ತಂದೆ ತಾಯಿ ಕೆಲವೊಂದು ಆರ್ಥಿಕ ಸಮಸ್ಯೆಗಳನ್ನು ಎದುರಿಸಿದ್ದರು. ಅವರ ಪಟ್ಟಂತಹ ಕಷ್ಟಗಳನ್ನು ನೆನಪಿಸಿಕೊಂಡು ಎಮೋಷನಲ್ ಸಹ ಆಗಿದ್ದಾರೆ. ಈ ಕಾರಣದಿಂದ ನಮ್ಮ ಪೇರೆಂಟ್ಸ್ ಮತಷ್ಟು ಗರ್ವ ಪಡುವಂತೆ ಮತಷ್ಟು ಸಾಧನೆ ಮಾಡುತ್ತೇನೆ ಎಂದು ಹೇಳಿದ್ದಾರೆ.

ಸದ್ಯ ಆಕೆಯ ಹೇಳಿಕೆಗಳು ಇದೀಗ ಸೊಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಇನ್ನೂ ಆಕೆ ಪುಷ್ಪಾ-2 ಹಾಗೂ ಯಾನಿಮಲ್ ಎಂಬ ಭಾರಿ ಪ್ರಾಜೆಕ್ಟ್ ಗಳಿವೆ. ಜೊತೆಗೆ ಯಂಗ್ ಹಿರೋ ನಿತಿನ್ ಜೊತೆಗೆ ಒಂದು ಸಿನೆಮಾ ಹಾಗೂ ರೈನ್ ಬೋ ಎಂಬ ಮಹಿಳಾ ಪ್ರಧಾನ ಸಿನೆಮಾದಲ್ಲಿ ಸಹ ನಟಿಸಲಿದ್ದಾರೆ.