ನ್ಯೂಡ್ ಆಗಿ ಕಾಣಿಸಿಕೊಂಡ ಕಿರುತೆರೆ ನಟಿ ವನಿತ, ಸ್ನೇಹಿತನ ಕಾಮೆಂಟ್ ಬಗ್ಗೆ ಶಾಕಿಂಗ್ ರಿಯಾಕ್ಷನ್…..!

ಮರಾಠಿ ಮೂಲದ ನಟಿ ವನಿತಾ ಅನೇಕ ಸೀರಿಯಲ್ ಗಳು ಹಾಗೂ ಟಿವ ಶೋಗಳ ಮೂಲಕ ಭಾರಿ ಕ್ರೇಜ್ ಪಡೆದುಕೊಂಡಿದ್ದಾರೆ. ನೋಡಲು ಚಬ್ಬಿಯಾಗಿ ಕಾಣಿಸಿಕೊಂಡರೂ ಸಹ ಬಾಡಿ ಶೇಮಿಂಗ್ ಬಗ್ಗೆ ಸಂಚಲನಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ.  ಇತ್ತಿಚಿಗೆ…

ಮರಾಠಿ ಮೂಲದ ನಟಿ ವನಿತಾ ಅನೇಕ ಸೀರಿಯಲ್ ಗಳು ಹಾಗೂ ಟಿವ ಶೋಗಳ ಮೂಲಕ ಭಾರಿ ಕ್ರೇಜ್ ಪಡೆದುಕೊಂಡಿದ್ದಾರೆ. ನೋಡಲು ಚಬ್ಬಿಯಾಗಿ ಕಾಣಿಸಿಕೊಂಡರೂ ಸಹ ಬಾಡಿ ಶೇಮಿಂಗ್ ಬಗ್ಗೆ ಸಂಚಲನಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ.  ಇತ್ತಿಚಿಗೆ ಅನೇಕ ನಟಿಯರು ಸಂದರ್ಶನಗಳಲ್ಲಿ ನ್ಯೂಡಿಟಿ, ಶೃಂಗಾರದ ಬಗ್ಗೆ ಬಹಿರಂಗ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅಂತಹ ಹೇಳಿಕೆಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿರುತ್ತದೆ. ಇದೀಗ ನಟಿ ವನಿತಾ ನ್ಯೂಡ್ ಪೊಟೋ ಒಂದು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಮರಾಠಿ ಕಿರುತೆರೆ ನಟಿ ವನಿತಾ ಕಾರತ್ ನ್ಯೂಡಿಟಿ ಬಗ್ಗೆ ಕೆಲವೊಂದು ಸಂಚಲನಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ. ಕಿರುತೆರೆ ಟಿವಿ ಶೋಗಳ ಮೂಲಕ ಖ್ಯಾತಿ ಪಡೆದುಕೊಂಡ ಈಕೆ ನೋಡಲು ತುಂಬಾ ದಪ್ಪ ಕಾಣಿಸುತ್ತಿದ್ದಾರೆ. ಇದೀಗ ಶರೀರದ ಬಗ್ಗೆ ಕೆಲವೊಂದು ಹೇಳಿಕೆಗಳನ್ನು ನೀಡಿದ್ದಾರೆ. ಈ ಹಿಂದೆ ವನಿತ ನ್ಯೂಡ್ ಪೊಟೋ ಹಂಚಿಕೊಂಡಿದ್ದರು. ಈ ಪೊಟೋ ಮರಾಠಿ ಸಿನಿರಂಗದಲ್ಲಿ ಭಾರಿ ಸಂಚಲನ ಉಂಟು ಮಾಡಿತ್ತು. ಇನ್ನೂ ಈ ಪೊಟೋ ಗೂ ಮುಂಚೆ ನಟಿ ವನಿತಾ ಮಾಡ್ರನ್ ಡ್ರೆಸ್ ಗಳಾಗಲಿ ಅಥವಾ ಸ್ಲೀವ್ ಲೆಸ್ ಡ್ರೆಸ್ ಸಹ ಹಾಕುತ್ತಿರಲಿಲ್ಲವಂತೆ. ಬಳಿಕ ನನ್ನ ಶರೀರವನ್ನು ನಾನು ಪ್ರೀತಿಸಬೇಕು ಎಂಬುದು ಅರ್ಥವಾದ ಬಳಿಕ ಈ ನ್ಯೂಡ್ ಪೊಟೋಶೂಟ್ಸ್ ಮಾಡಬೇಕೆಂದು ಆಕೆ ಡಿಸೈಡ್ ಮಾಡಿದ್ದರಂತೆ.

ಈ ಬಗ್ಗೆ ವನಿತಾ ಮಾತನಾಡಿದ್ದಾರೆ. ನಾನು ನಟಿಯಾಗಿ ದೊಡ್ಡ ಮಟ್ಟದ ಖ್ಯಾತಿ ಪಡೆದುಕೊಂಡರೂ ಸಹ ನಾನು ಸರಳವಾಗಿ ಜೀವಿಸಲು ಇಷ್ಟಪಡುತ್ತೇನೆ. ಇಂದಿಗೂ ಸಹ ನಾನು ರೈಲಿನಲ್ಲೇ ಪ್ರಯಾಣ ಮಾಡುತ್ತೇನೆ. ಇನ್ನೂ ಸೋಷಿಯಲ್ ಮಿಡಿಯಾದಲ್ಲಿ ಬರುವಂತ ಕಾಮೆಂಟ್ ಗಳ ಬಗ್ಗೆ ನಾನು ಕಿವಿಗೆ ಹಾಕಿಕೊಳ್ಳುವುದಿಲ್ಲ. ಜೊತೆಗೆ ಸೋಷಿಯಲ್ ಮಿಡಿಯಾ ನೋಡುವುದನ್ನೇ ಬಿಟ್ಟಿದ್ದೇನೆ. ನಮ್ಮ ಜೀವನದ ಬಗ್ಗೆ ಏನು ತಿಳಿಯದವರು ಆ ರೀತಿಯ ಕಾಮೆಂಟ್ ಗಳನ್ನು ಮಾಡುತ್ತಿರುತ್ತಾರೆ. ಇನ್ನೂ ನನ್ನ ನ್ಯೂಡ್ ಪೊಟೋಶೂಟ್ಸ್ ಮಾಡಿದಾಗ ಅನೇಕ ವಿಮರ್ಶೆಗಳು ಕೇಳಿಬಂದವು. ಆದರೆ ವಿಮರ್ಶೆಗಳಿಗಿಂತ ಹೊಗಳಿದವರೇ ಜಾಸ್ತಿ. ನನ್ನ ಸ್ನೇಹಿತರಿಂದ ನ್ಯೂಡ್ ಪೊಟೋಗಳ ಮೇಲೆ ಬಂದಂತಹ ಹೊಗಳಿಕೆಯನ್ನು ನಾನು ಎಂದೂ ಮರೆಯುವುದಿಲ್ಲ. ಆ ನ್ಯೂಡ್ ಪೊಟೋಶೂಟ್ಸ್ ಮಾಡುವದಕ್ಕೂ ಮುಂಚೆ ನನ್ನನ್ನು ದಪ್ಪ ಇದ್ದೀಯಾ ಎಂದು ಎಲ್ಲರೂ ಟ್ರೋಲ್ ಮಾಡುತ್ತಿದ್ದರು.

ಆದರೆ ನ್ಯೂಡ್ ಪೊಟೋಶೂಟ್ಸ್ ಬಳಿಕ ನನ್ನ ಸ್ನೇಹಿತ ಒಬ್ಬ ನೀನು ತುಂಬಾ ಸುಂದರವಾಗಿದ್ದೀಯಾ, ಆ ಪೊಟೋಗಳನ್ನು ನನ್ನ ರೂಂ ನಲ್ಲಿಟ್ಟುಕೊಳ್ಳುತ್ತೇನೆ ಎಂದು ಕಾಮೆಂಟ್ ಮಾಡಿದ್ದ. ಆ ಮಾತುಗಳು ನನ್ನಲ್ಲಿ ಭಾವೋದ್ವೇಗವನ್ನು ಉಂಟು ಮಾಡಿತ್ತು. ಮೊದಲು ನಮ್ಮನ್ನು ನಾವು ಪ್ರೀತಿಸಿಕೊಳ್ಳಬೇಕು. ಬಳಿಕ ಬೇರೆಯವರು ನಮ್ಮನ್ನು ಪ್ರೀತಿಸುತ್ತಾರೆ ಎಂದು ಶಾಕಿಂಗ್ ಕಾಮೆಂಟ್ ಮಾಡಿದ್ದಾರೆ. ಇನ್ನೂ ಆಕೆಯ ಈ ಕಾಮೆಂಟ್ ಗಳು ವೈರಲ್ ಆಗುತ್ತಿವೆ.