Film News

ತಾನು ಮದುವೆಯಾಗುವ ಹುಡುಗನಿಗೆ ಆ ಲಕ್ಷಣಗಳು ಇರಬೇಕಂತೆ, ಮದುವೆ ವಿಚಾರದಲ್ಲಿ ಭಾರಿ ಬಯಕೆಗಳನ್ನು ಹೊಂದಿದ್ದಾರೆ ಜಾನ್ವಿ….!

ಬಾಲಿವುಡ್ ಸಿನಿರಂಗದ ಸ್ಟಾರ್‍ ಕಿಡ್ ಜಾನ್ವಿ ಕಪೂರ್‍ ಸಿನೆಮಾಗಳಲ್ಲಿ ಅಷ್ಟೊಂದು ಸಕ್ಸಸ್ ಕಾಣದೇ ಇದ್ದರೂ ಸಹ ಸೋಷಿಯಲ್ ಮಿಡಿಯಾದಲ್ಲಂತೂ ಸ್ಟಾರ್‍ ನಟಿಯರಿಗಿಂತಲೂ ಹೆಚ್ಚಿನ ಪಾಪ್ಯುಲಾರಿಟಿ ಪಡೆದುಕೊಂಡಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ಸದಾ ಆಕ್ಟೀವ್ ಆಗಿರುವ ಈಕೆಯ ಅಪ್ಡೇಟ್ಸ್ ಗಾಗಿ ಅಭಿಮಾನಿಗಳು ಕಾಯುತ್ತಿರುತ್ತಾರೆ. ಇದೀಗ ಆಕೆ ತಾನು ಮದುವೆಯಾಗುವಂತಹ ವ್ಯಕ್ತಿಯಲ್ಲಿ ಏನೆಲ್ಲಾ ಲಕ್ಷಣಗಳು ಇರಬೇಕೆಂಬುದರ ಬಗ್ಗೆ ತನ್ನ ಮನಸ್ಸಿನಲ್ಲಿರುವ ಬಯಕೆಯನ್ನು ಹೊರಹಾಕಿದ್ದಾರೆ.

ಇನ್ನೂ ಜಾನ್ವಿ ಕಪೂರ್‍ ಇದೀಗ ತಾನು ಮದುವೆಯಾಗುವ ವ್ಯಕ್ತಿಗೆ ಇರಬೇಕಾದ ಲಕ್ಷಣಗಳ ಬಗ್ಗೆ ಕಾಮೆಂಟ್ಸ್ ಮಾಡಿದ್ದಾರೆ. ಜಾನ್ವಿ ಕಪೂರ್‍ ರವರನ್ನು ಮದುವೆಯಾಗುವಂತಹ ಹುಡುಗ ಆಕೆಯ ವೃತ್ತಿಯನ್ನು ಗೌರವಿಸಬೇಕಂತೆ. ಆತನ ಒಳ್ಳೆಯ ಸೆನ್ಸ್ ಆಫ್ ಹ್ಯೂಮರ್‍ ಇರಬೇಕಂತೆ. ತಿಳಿಯದ ವಿಚಾರಗಳನ್ನು ತಿಳಿಸುವಂತಹ, ಉತ್ಸಾಹದಿಂದ ತಿಳಿಯದ ವಿಚಾರಗಳನ್ನು ಕಲಿಸುವಂತಹ ವ್ಯಕ್ತಿ ತನಗೆ ಗಂಡನಾಗಿ ಬೆಕಂತೆ. ಇದರ ಜೊತೆಗೆ ಆಕೆಯನ್ನು ತುಂಬಾ ಕಾಳಜಿಯಿಂದ ನೋಡಿಕೊಳ್ಳಬೇಕಂತೆ. ಅಷ್ಟೇಅಲ್ಲದೇ ತನ್ನ ತಂದೆಗಿಂತ ಹೆಚ್ಚು ಎತ್ತರವಿರಬೇಕು ಎಂದು ಜಾನ್ವಿ ಕಪೂರ್‍ ತಾನು ಮದುವೆಯಾಗವಂತಹ ವ್ಯಕ್ತಿಗೆ ಇರಬೇಕಾದಂತಹ ಲಕ್ಷಣಗಳ ಬಗ್ಗೆ ತಿಳಿಸಿದ್ದಾರೆ.

ಇನ್ನೂ ಆಕೆಗೆ ಸ್ಟ್ರೀಟ್ ಪುಡ್ ಎಂದರೇ ತುಂಬಾ ಇಷ್ಟವಂತೆ. ಮುಂಬೈ ಬೀದಿಗಳಲ್ಲಿ ಇಷ್ಟವಾದಂತಹ ತಿಂಡಿ ತಿನ್ನುತ್ತೇನೆ ಎಂದು ಜಾನ್ವಿ ಕಪೂರ್‍ ತಮ್ಮ ವೈಯುಕ್ತಿಕ ಜೀವನದ ಬಗ್ಗೆ ಕೆಲವೊಂದು ಕಾಮೆಂಟ್ ಗಳನ್ನು ಮಾಡಿದ್ದಾರೆ. ಸದ್ಯ ಆಕೆ ಕಾಮೆಂಟ್ ಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಇನ್ನೂ ಜಾನ್ವಿ ಕಪೂರ್‍ ಸೋಷಿಯಲ್ ಮಿಡಿಯಾದಲ್ಲಿ ಸದಾ ಹಾಟ್ ಪೊಟೋಶೂಟ್ಸ್ ಮೂಲಕ ಸಖತ್ ಸದ್ದು ಮಾಡುತ್ತಾ ಸೋಷಿಯಲ್ ಮಿಡಿಯಾ ಸೆನ್ಷೇಷನ್ ಆಗಿದ್ದಾರೆ. ಇನ್ನೂ ಈಗಾಗಲೇ ಆಕೆ ಬಾಲಿವುಡ್ ನಲ್ಲಿ ಅನೇಕ ಸಿನೆಮಾಗಳಲ್ಲಿ ನಟಿಸಿದ್ದಾರೆ. ಆದರೆ ಆಕೆಯ ಸಿನೆಮಾಗಳು ಅಷ್ಟೊಂದು ಸಕ್ಸಸ್ ಕಾಣಲಿಲ್ಲ.

ಇನ್ನೂ ಜಾನ್ವಿ ಕಪೂರ್‍ ರವರನ್ನು ಸೌತ್ ಸಿನೆಮಾಗಳಲ್ಲಿ ಕಾಣಲು ಶ್ರೀದೆವಿ ಅಭಿಮಾನಿಗಳು ಕಾಯುತ್ತಿದ್ದರು. ಇದೀಗ ಅವರ ಆಸೆ ಈಡೇರಿದೆ. ಟಾಲಿವುಡ್ ನ ಸಿನೆಮಾದಲ್ಲಿ ಜಾನ್ವಿ ನಟಿಸುತ್ತಿದ್ದಾರೆ. ಜೂನಿಯರ್‍ ಎನ್.ಟಿ.ಆರ್‍ ಹಾಗೂ ಕೊರಟಾಲ ಶಿವ ಕಾಂಬಿನೇಷನ್ ನಲ್ಲಿ ಸೆಟ್ಟೇರಿರುವಂತಹ NTR30 ಸಿನೆಮಾದಲ್ಲಿ ಜಾನ್ವಿ ಕಪೂರ್‍ ನಟಿಸುತ್ತಿದ್ದಾರೆ. ಈ ಸಿನೆಮಾದಲ್ಲಿ ಮತ್ಸ್ಯಕಾರನ ಮಗಳಾಗಿ ಜಾನ್ವಿ ಕಪೂರ್‍ ಕಾಣಿಸಿಕೊಳ್ಳಲಿದ್ದಾರಂತೆ. ಇದರ ಜೊತೆಗೆ ಗ್ಲೋಬಲ್ ಸ್ಟಾರ್‍ ರಾಮ್ ಚರಣ್ ರವರ ಸಿನೆಮಾದಲ್ಲೂ ಸಹ ಜಾನ್ವಿ ಕಪೂರ್‍ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಇಲ್ಲ.

Most Popular

To Top