Film News

ಕಾಜಲ್ ಬಗ್ಗೆ ನನ್ನ ಬಳಿ ಮಾತನಾಡಬೇಡಿ ಎಂದು ಪರೋಕ್ಷವಾಗಿ ಹೇಳಿದ್ರಾ ಉಪಾಸನಾ? ಆ ರೀತಿ ಹೇಳಿದ್ದಾದರು ಏಕೆ?

ಟಾಲಿವುಡ್ ಮೆಗಾ ಕುಟುಂಬದ ಸೊಸೆ ಉಪಾಸನಾ ಕೊಣಿದೆಲಾ ವಿವಿಧ ರೀತಿಯ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುತ್ತಾರೆ. ಗ್ಲೋಬಲ್ ಸ್ಟಾರ್‍ ರಾಮ್ ಚರಣ್ ಪತ್ನಿ ಉಪಾಸನಾ ಸಹ ದೊಡ್ಡ ಮಟ್ಟದಲ್ಲೇ ಖ್ಯಾತಿ ಪಡೆದುಕೊಂಡಿದ್ದಾರೆ. ಈಗಾಗಲೆ ಉಪಾಸನಾ ವಿವಿಧ ರೀತಿಯ ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಒಳ್ಳೆಯ ಮನಸ್ಸನ್ನು ಸಾರುತ್ತಿದ್ದಾರೆ. ರಾಮ್ ಚರಣ್ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದರೇ, ಉಪಾಸನಾ ವ್ಯಾಪಾರದಲ್ಲಿ ಬ್ಯುಸಿಯಾಗಿರುತ್ತಾರೆ. ಇದೀಗ ಆಕೆ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದು, ಈ ವೇಳೆ ಆಕೆ ನೀಡಿದ ಕಾಮೆಂಟ್ ಗಳು ವೈರಲ್ ಆಗಿದೆ.

ಗ್ಲೋಬಲ್ ಸ್ಟಾರ್‍ ರಾಮ್ ಚರಣ್ ಹಾಗೂ ಉಪಾಸನಾ ಪ್ರೀತಿಸಿ ದೊಡ್ಡವರ ಸಮಕ್ಷಮದಲ್ಲಿ ಮದುವೆಯಾಗಿದರು. ಮದುವೆಯಾದ ಬಳಿಕ ಕುಟುಂಬದ ನಿರ್ವಹಣೆಯ ಜೊತೆಗೆ ಆಕೆ ವ್ಯಾಪಾರದಲ್ಲೂ ಸಹ ಮುಂದುವರೆಯುತ್ತಿದ್ದಾರೆ. ಈ ಹಿಂದೆ ಉಪಾಸನಾ ಹಾಗೂ ರಾಮ್ ಚರಣ್ ನಡುವೆ ಓರ್ವ ನಟಿಯ ಕಾರಣದಿಂದ ಗಲಾಟೆ ನಡೆದಿದೆ ಎಂಬ ಸುದ್ದಿ ಜೋರಾಗಿಯೇ ಕೇಳಿಬಂದಿತ್ತು. ಆದರೆ ಆ ಸುದ್ದಿಯ ಬಗ್ಗೆ ಯಾವುದೇ ರೀತಿಯ ಕ್ಲಾರಿಟಿ ಇಲ್ಲ. ಕೆಲವೊಂದು ನಿರ್ದೇಶಕರು ಅವಶ್ಯಕತೆಯಿಲ್ಲವಾದರೂ ರೊಮ್ಯಾಂಟಿಕ್ ಸನ್ನಿವೇಶಗಳನ್ನು ಚಿತ್ರೀಕರಿಸುತ್ತಿದ್ದಾರೆ. ಗೋವಿಂದುಡು ಅಂದರಿವಾಡೆ ಎಂಬ ಸಿನೆಮಾದಲ್ಲಿ ಕಾಜಲ್ ಹಾಗೂ ರಾಮ್ ಚರಣ್ ನಡುವಣ ಕೆಲವೊಂದು ರೊಮ್ಯಾಂಟಿಕ್ ದೃಶ್ಯಗಳು ಉಪಾಸನಾ ಗೆ ಇಷ್ಟವಾಗಿರಲಿಲ್ಲವಂತೆ. ಕಾಜಲ್ ಹಾಗೂ ರಾಮ್ ಚರಣ್ ಕಾಂಬಿನೇಷನ್ ನಲ್ಲಿ ಬಂದಂತಹ ಮಗಧೀರ, ಗೋವಿಂದುಡು ಅಂದರಿವಾಡೆ, ನಾಯಕ್, ಎವಡು ಸಿನೆಮಾಗಳು ತೆರೆಗೆ ಬಂದಿತ್ತು. ಈ ಸಮಯದಲ್ಲಿ ಉಪಾಸನಾ ಹಾಗೂ ರಾಮ್ ಚರಣ್ ನಡುವೆ ಕೊಂಚ ಗಲಾಟೆ ನಡೆದಿತ್ತು ಎಂಬ ರೂಮರ್‍ ಕೇಳಿಬಂದಿತ್ತು.

ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ರಾಮ್ ಚರಣ್ ಪತ್ನಿ ಉಪಾಸನಾಗೆ ಇಂಟ್ರಸ್ಟಿಂಗ್ ಪ್ರಶ್ನೆಯೊಂದು ಎದುರಾಗಿದೆ. ಆನ್ ಸ್ಕ್ರೀನ್ ಮೇಲೆ ರಾಮ್ ಚರಣ್ ರವರಿಗೆ ಸರಿಯಾದ ಜೋಡಿ ಯಾರು, ನೀವು ಯಾರನ್ನು ಅಂದುಕೊಳ್ಳುತ್ತೀರಾ ಎಂಬ ಪ್ರಶ್ನೆಯೊಂದು ಎದುರಾಗಿತ್ತು. ಈ ಪ್ರಶ್ನೆಗೆ ಉಪಾಸನಾ ಉತ್ತರ ನೀಡಿ, ಆತನಿಗೆ ಪರ್ಫೆಕ್ಟ್ ಜೋಡಿ ಯಾರು ಎಂಬುದು ನೀವೆ ಹೇಳಬೇಕು ಎಂದು ಹೇಳಿದ್ದಾರೆ. ಆಂಕರ್‍ ಕಾಜಲ್ ಎಂದು ಹೇಳಿದ ಕೂಡಲೇ ಉಪಾಸನಾ ಕಿಯಾರಾ ಅಡ್ವಾನಿ, ಪ್ರಿಯಾಂಕಾ ಚೋಪ್ರಾ, ತಮನ್ನಾ ರವರುಗಳು ಏಕೆ ಆಗಬಾರದು ಎಂದು ಉತ್ತರ ನೀಡಿದ್ದಾರೆ. ಕಾಜಲ್ ಹೆಸರು ಹೇಳಿದ ಕೂಡಲೇ ಉಪಾಸನಾ ನೀಡಿದ ಉತ್ತರವನ್ನು ಗಮನಿಸಿದಾಗ ಕಾಜಲ್ ಅಂದರೇ ಉಪಾಸನಾಗೆ ಇಷ್ಟವಾಗಲ್ಲ ಎಂದು, ರಾಮ್ ಚರಣ್ ಹಾಗೂ ಉಪಾಸನಾ ನಡುವೆ ಗಲಾಟೆ ಬಂದಿದ್ದು ಸಹ ನಿಜವಿರಬಹುದು ಎಂದು ಅನೇಕರು ಅಭಿಪ್ರಾಯಪಡುತ್ತಿದ್ದಾರೆ.

Most Popular

To Top