Film News

ಅನಿಮಲ್ ಸಿನೆಮಾದ ಬಳಿಕ ಮತ್ತೊಮ್ಮೆ ರೆನ್ಯುಮರೇಷನ್ ಏರಿಸಿದ ರಶ್ಮಿಕಾ, ವೈರಲ್ ಆದ ಹಾಟ್ ಟಾಪಿಕ್…..!

ಕಿರಿಕ್ ಪಾರ್ಟಿ ಎಂಬ ಕನ್ನಡದ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ರಶ್ಮಿಕಾ ಮಂದಣ್ಣ ಸದ್ಯ ಸೌತ್ ಅಂಡ್ ನಾರ್ತ್ ನಲ್ಲಿ ಬಹುಬೇಡಿಕೆಯುಳ್ಳ ನಟಿಯಾಗಿದ್ದಾರೆ. ಕಿರಿಕ್ ಪಾರ್ಟಿ ಸಿನೆಮಾದ ಮೂಲಕ ಫೇಂ ಪಡೆದುಕೊಂಡ ರಶ್ಮಿಕಾ ಕಡಿಮೆ ಸಮಯದಲ್ಲೇ ಸ್ಟಾರ್‍ ಡಂ ಗಿಟ್ಟಿಸಿಕೊಂಡರು. ತೆಲುಗು ಸಿನೆಮಾಗಳ ಜೊತೆಗೆ ತಮಿಳು ಹಾಗೂ ಹಿಂದಿ ಸಿನೆಮಾಗಳಲ್ಲೂ ನಟಿಸುತ್ತಾ ಬ್ಯುಸಿಯಾಗಿದ್ದಾರೆ. ಕೊನೆಯದಾಗಿ ಆಕೆ ಅನಿಮಲ್ ಸಿನೆಮಾದ ಮೂಲಕ ಬ್ಲಾಕ್ ಬ್ಲಸ್ಟರ್‍ ಹಿಟ್ ಪಡೆದುಕೊಂಡರು. ಇದೀಗ ಆಕೆ ತನ್ನ ರೆನ್ಯುಮರೇಷನ್ ಏರಿಸಿಕೊಂಡಿದ್ದಾರೆ. ಸದ್ಯ ಈ ಸುದ್ದಿ ಸಿನಿವಲಯದಲ್ಲಿ ಹಾಟ್ ಟಾಪಿಕ್ ಆಗಿದೆ.

ನ್ಯಾಷನಲ್ ಕ್ರಷ್ ಎಂದೇ ಕರೆಯಲಾಗುವ ರಶ್ಮಿಕಾ ಮಂದಣ್ಣ, ಸದ್ಯ ಸೌತ್ ಅಂಡ್ ನಾರ್ತ್ ಸಿನೆಮಾಗಳಲ್ಲಿ ಪುಲ್ ಬ್ಯುಸಿಯಾಗಿದ್ದಾರೆ. ಬಾಲಿವುಡ್ ನ ಅನಿಮಲ್ ಸಿನೆಮಾದ ಮೂಲಕ ಮೊದಲ ಹಿಟ್ ಪಡೆದುಕೊಂಡಿದ್ದಾರೆ. ಈ ಸಿನೆಮಾದ ಬಳಿಕ ರಶ್ಮಿಕಾ ಕ್ರೇಜ್ ಮತಷ್ಟು ಹೆಚ್ಚಾಗಿದೆ ಎಂದೇ ಹೇಳಲಾಗುತ್ತಿದೆ. ಜೊತೆಗೆ ಬಾಲಿವುಡ್ ನಲ್ಲಿ ಮತಷ್ಟು ಅವಕಾಶಗಳೂ ಸಹ ಹರಿದುಬರುತ್ತಿವೆ. ಇದೀಗ ಆಕೆ ತನ್ನ ರೆನ್ಯುಮರೇಷನ್ ಸಹ ಏರಿಸಿದ್ದಾರೆ ಎನ್ನಲಾಗುತ್ತಿದೆ. ಸದ್ಯ ಆಕೆ ಪಡೆಯುತ್ತಿರುವ ಸಂಭಾವನೆಗೆ ಶೇ. 25 ರಷ್ಟು ಏರಿಸಿದ್ದಾರೆ ಎನ್ನಲಾಗುತ್ತಿದೆ. ಸದ್ಯ ರಶ್ಮಿಕಾ ಮಂದಣ್ಣ ಒಂದು ಸಿನೆಮಾಗೆ ಮೂರು ಕೋಟಿ ಸಂಭಾವನೆ ಪಡೆದುಕೊಳ್ಳುತ್ತಿದ್ದಾರೆ. ಇದೀಗ ಆಕೆ ಶೇ.25 ರಷ್ಟು ಸಂಭಾವನೆಯನ್ನು ಏರಿಸಿದ್ದಾರೆ ಎಂಬ ಸುದ್ದಿಯೊಂದು ವೈರಲ್ ಆಗುತ್ತಿದೆ.

ಇನ್ನೂ ಇತ್ತೀಚಿಗೆ ಆಕೆ ಒಪ್ಪಿಕೊಂಡ ಸಿನೆಮಾಗೆ ಬರೊಬ್ಬರಿ 4 ಕೋಟಿ ವರೆಗೂ ಡಿಮ್ಯಾಂಡ್ ಮಾಡಿದ್ದಾರೆ ಎನ್ನಲಾಗುತ್ತಿದೆ. ಹೆಚ್ಚು ಸಂಭಾವನೆ ಪಡೆಯುವಂತಹ ನಟಿಯರಲ್ಲಿ ಸಹ ಆಕೆ ಒಬ್ಬರಾಗುತ್ತಿದ್ದಾರೆ. ಪೂಜಾಹೆಗ್ಡೆ, ಅನುಷ್ಕಾ, ಸಮಂತಾ ಮೊದಲಾದ ಸ್ಟಾರ್‍ ನಟಿಯರು ಸಿನೆಮಾಗೆ ಮೂರು ಕೋಟಿ ಪಡೆದುಕೊಳ್ಳುತ್ತಿದ್ದಾರೆ. ಇದೀಗ ರಶ್ಮಿಕಾ ಮಂದಣ್ಣ ಮಾತ್ರ ಸಿನೆಮಾಗೆ 4 ಕೋಟಿ ಸಂಭಾವನೆ ಡಿಮ್ಯಾಂಡ್ ಮಾಡುತ್ತಿದ್ದಾರೆ ಎಂಬ ಸುದ್ದಿ ಇದೀಗ ಸಿನಿವಲಯದಲ್ಲಿ ಹಾಟ್ ಟಾಪಿಕ್ ಆಗಿದೆ. ಸದ್ಯ ರಶ್ಮಿಕಾ ಪುಷ್ಪಾ-2, ರೈನ್ ಬೋ, ದಿ ಗರ್ಲ್ ಫ್ರೆಂಡ್ ಮೊದಲಾದ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅದರಲ್ಲೂ ರಶ್ಮಿಕಾ ಬಾಲಿವುಡ್ ಗೆ ಹಾರಿದ ಬಳಿಕ ತುಂಬಾನೆ ಬೋಲ್ಡ್ ಆಗಿ ಪೊಟೋಶೂಟ್ಸ್ ಹಂಚಿಕೊಳ್ಳುತ್ತಿರುತ್ತಾರೆ ಜೊತೆಗೆ ಬಾಲಿವುಡ್ ಸಿನೆಮಾಗಳಲ್ಲಿ ಪಾರ್ಟಿಗಳಲ್ಲೂ ಸಹ ಬೋಲ್ಡ್ ಆಗಿಯೇ ಕಾಣಿಸಿಕೊಳ್ಳುತ್ತಿದ್ದಾರೆ.

Most Popular

To Top