Film News

ಅಮೇರಿಕಾದಲ್ಲಿ ರಾಮ್ ಚರಣ್ ಅಂಡ್ ಉಪಾಸನಾ, ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆದ ಪೊಟೋಗಳು….!

ಮೆಗಾ ಕುಟುಂಬದ ಯಂಗ್ ಹಿರೋ ರಾಮ್ ಚರಣ್ ಸಿನೆಮಾಗಳ ಮೂಲಕ ಸಿನಿರಸಿಕರನ್ನು ರಂಜಿಸುತ್ತಿರುತ್ತಾರೆ. ಮೆಗಾ ಕುಟುಂಬದ ಸೊಸೆಯಾಗಿ ಉಪಾಸನಾ ಅಪೊಲೋ ಆಸ್ಪತ್ರೆಯ ಜವಾಬ್ದಾರಿಯನ್ನು ನೋಡಿಕೊಳ್ಳುತ್ತಾ ಅನೇಕ ಸಾಮಾಜಿಕ ಕಾರ್ಯಕ್ರಮಗಳನ್ನು ಮಾಡುತ್ತಾ ಎಲ್ಲರ ಮನದಲ್ಲಿ ಮನೆ ಮಾಡಿದ್ದಾರೆ. ಇನ್ನೂ ಉಪಾಸನಾ ಗರ್ಭಿಣಿಯಾಗಿದ್ದು ಶೀಘ್ರದಲ್ಲೇ ಮಗುವಿಗೆ ಜನ್ಮ ನೀಡಲಿದ್ದಾರೆ. ಸದ್ಯ ಉಪಾಸನಾ ರಾಮ್ ಚರಣ್ ಜೊತೆಗೆ ಅಮೇರಿಕಾದಲ್ಲಿದ್ದು, ಅಲ್ಲಿ ಕೆಲವೊಂದು ಪೊಟೋಗಳನ್ನು ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

ಮೆಗಾ ಕುಟುಂಬದ ಸ್ಟಾರ್‍ ನಟ ರಾಮ್ ಚರಣ್ ಅಭಿನಯದ RRR ಸಿನೆಮಾದ ನಾಟು ನಾಟು ಹಾಡು ಆಸ್ಕರ್‍ ಅವಾರ್ಡ್‌ಗೆ ನಾಮಿನೇಟ್ ಆಗಿರುವ ವಿಚಾರ ತಿಳಿದೇ ಇದೆ. ಈ ಸಂಬಂಧ ಪ್ರಮೋಷನ್ ಸಹ ಜೋರಾಗಿಯೇ ನಡೆಯುತ್ತಿದೆ. ಇನ್ನೂ ಅಮೇರಿಕಾದ ಗುಡ್ ಮಾರ್ನಿಂಗ್ ಎಂಬ ಶೋ ನಲ್ಲೂ ಸಹ ಚರಣ್ ಭಾಗಿಯಾಗಿದ್ದರು. ಇನ್ನೂ ಉಪಾಸನಾ ಸಹ ಸಾಮಾಜಿಕ ಕಾರ್ಯಕ್ರಮಗಳ ಜೊತೆಗೆ ಅನೇಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಿರುತ್ತಾರೆ. ಸೋಷಿಯಲ್ ಮಡಿಯಾದಲ್ಲೂ ಸಹ ಉಪಾಸನಾ ಪುಲ್ ಬ್ಯುಸಿಯಾಗಿರುತ್ತಾರೆ. ಇನ್ನೂ ಆಕೆ ತಾಯಿಯಾಗುತ್ತಿರುವ ಬಗ್ಗೆ ಇತ್ತೀಚಿಗಷ್ಟೆ ತಿಳಿಸಿದ್ದರು. ಇದೀಗ ಉಪಾಸನಾ ರಾಮ್ ಚರಣ್ ಜೊತೆಗೆ ಅಮೇರಿಕಾದಲ್ಲಿ ಸದ್ದು ಮಾಡುತ್ತಿದ್ದಾರೆ.

ಇನ್ನೂ ಈಗಾಗಲೇ ಉಪಾಸನಾ ಹಾಗೂ ರಾಮ್ ಚರಣ್ ಅಮೇರಿಕಾದಲ್ಲಿ ಬೀಡು ಬಿಟ್ಟಿದ್ದಾರೆ. ಅಲ್ಲಿನ ಸುಂದರ ತಾಣಗಳಲ್ಲಿ ಈ ಜೋಡಿ ಸಖತ್ ಎಂಜಾಯ್ ಮಾಡುತ್ತಿರುತ್ತಾರೆ. ಈ ಸಂಬಂಧ ಕೆಲವೊಂದು ಪೊಟೋಗಳನ್ನು ಹಾಗೂ ವಿಡಿಯೋಗಳನ್ನು ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇನ್ನೂ ರಾಮ್ ಚರಣ್ ತನ್ನ ಬ್ಯುಸಿ ಶೆಡೂಲ್ಡ್ ನಲ್ಲೂ ಸಹ ಪತ್ನಿಯೊಂದಿಗೆ ಅಮೇರಿಕಾದಲ್ಲಿ ಎಂಜಾಯ್ ಮಾಡುತ್ತಿದ್ದಾರೆ. ಅಮೇರಿಕಾದಲ್ಲಿ ಶಾಪಿಂಗ್ ಮಾಡುತ್ತಾ, ಸಮುದ್ರದ ಬಳಿ ವಿಹರಿಸುತ್ತಾ ಎಂಜಾಯ್ ಮಾಡಿದ್ದಾರೆ. ಇನ್ನೂ ಈ ಸಂಬಂಧ ವಿಡಿಯೋ ಒಂದನ್ನು  ಉಪಾಸನಾ ತನ್ನ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಸಹ ಆಗುತ್ತಿದೆ.

ಇನ್ನೂ ಇನ್ಸ್ಟಾಗ್ರಾಂ ನಲ್ಲಿ ಈ ವಿಡಿಯೋ ಶೇರ್‍ ಮಾಡಿದ ಉಪಾಸನಾ ಅಷ್ಟೊಂದು ಬ್ಯುಸಿಯಾಗಿದ್ದರೂ ಸಹ ನಮಗಾಗಿ ರಾಮ್ ಚರಣ್ ಗೆ ಸಮಯ ಸಿಕ್ಕಿದೆ. ಡಾಲ್ಫಿನ್, ಶಾರ್ಕ್ ಗಳನ್ನು ತೋರಿಸಲು ನನ್ನನ್ನು ಕರೆದುಕೊಂಡು ಹೋಗಿದ್ದಕ್ಕೆ ಧನ್ಯವಾದಗಳು ಎಂದು ಹೇಳುತ್ತಾ ವಿಡಿಯೋ ಶೇರ್‍ ಮಾಡಿದ್ದಾರೆ. ಇನ್ನೂ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಸಹ ಆಗುತ್ತಿದೆ. ಅವರ ಅಭಿಮಾನಿಗಳೂ ಸಹ ಹಾಟ್ ಕಾಮೆಂಟ್ ಗಳ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದಾರೆ.

Most Popular

To Top