ಅಮೇರಿಕಾದಲ್ಲಿ ಅಭಿಮಾನಿಗಳೊಂದಿಗೆ ಎಮೋಷನಲ್ ಸ್ಪೀಚ್, ನಮ್ಮದು ರಕ್ತಸಂಬಂಧಕ್ಕಿಂತ ಮಿಗಿಲಾದ ಸಂಬಂಧ ಎಂದ ನಟ…!

Follow Us :

ಸೌತ್ ಸಿನಿರಂಗದಲ್ಲಿ ಭಾರಿ ಅಭಿಮಾನಿ ಬಳಗವನ್ನು ಪಡೆದುಕೊಂಡ ನಟರಲ್ಲಿ ನಂದಮೂರಿ ಕುಟುಂಬದ ಜೂನಿಯರ್‍ ಎನ್.ಟಿ.ಆರ್‍ ಸಹ ಒಬ್ಬರಾಗಿದ್ದಾರೆ. ಜೂನಿಯರ್‍ ಎನ್.ಟಿ.ಆರ್‍ ಅಂದರೇ ಅವರ ಅಭಿಮಾನಿಗಳಿಗೆ ತುಂಬಾನೆ ಪ್ರಾಣ ಎಂದೇ ಹೇಳಬಹುದು. ಅದೇ ರೀತಿ ಎನ್.ಟಿ.ಆರ್‍ ಸಹ ಅಭಿಮಾನಿಗಳ ಮೇಲೆ ಪ್ರೀತಿಯನ್ನು ತೋರಿಸುತ್ತಿರುತ್ತಾರೆ. ಇದೀಗ RRR ಸಿನೆಮಾದ ನಾಟು ನಾಟು ಹಾಡು ಆಸ್ಕರ್‍ ಅವಾರ್ಡ್‌ಗೆ ನಾಮಿನೇಟ್ ಆಗಿದ್ದು, ಈ ಸಂಬಂಧ ಅವರು ಅಮೇರಿಕಾಗೆ ಹೋಗಿದ್ದು, ಅಲ್ಲಿನ ಸಭೆಯೊಂದರಲ್ಲಿ ಜೂನಿಯರ್‍ ಎನ್.ಟಿ.ಆರ್‍ ಕೆಲವೊಂದು ಎಮೋಷನಲ್ ಕಾಮೆಂಟ್ಸ್ ಮಾಡಿದ್ದಾರೆ.

ನಟ ಜೂನಿಯರ್‍ ಎನ್.ಟಿ.ಆರ್‍ ಅಭಿನಯದ RRR ಸಿನೆಮಾ ಭಾರಿ ಸಕ್ಸಸ್ ಕಂಡುಕೊಂಡಿದೆ. ರಾಜಮೌಳಿ ನಿರ್ದೇಶನದಲ್ಲಿ ಮೂಡಿ ಬಂದ ಈ ಸಿನೆಮಾ ಭಾರಿ ಸಕ್ಸಸ್ ಕಂಡುಕೊಂಡು ಇಡೀ ವಿಶ್ವದಾದ್ಯಂತ ಅನೇಕ ಅವಾರ್ಡ್‌ಗಳನ್ನು ಸಹ ಪಡೆದುಕೊಂಡಿದೆ. ಇದೀಗ ಈ ಸಿನೆಮಾದ ಫೇಮಸ್ ನಾಟು ನಾಟು ಹಾಡು ಆಸ್ಕರ್‍ ಅವಾರ್ಡ್‌ಗೆ ನಾಮಿನೇಟ್ ಆಗಿದ್ದು, ತಾರಕ್ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು ಅಮೇರಿಕಾಗೆ ತೆರಳಿದ್ದಾರೆ. ಇನ್ನೂ ಅಲ್ಲಿನ ಅಭಿಮಾನಿಗಳೊಂದಿಗೆ ಸಮಾವೇಶವೊಂದನ್ನು ಏರ್ಪಡಿಸಿದ್ದು, ಈ ವೇಳೆ ತಾರಕ್ ಕೆಲವೊಂದು ಎಮೋಷನಲ್ ಹೇಳಿಕೆಗಳನ್ನು ನೀಡಿದ್ದಾರೆ. ಸದ್ಯ ಜೂನಿಯರ್‍ ಎನ್.ಟಿ.ಆರ್‍ ರವರ ಹೇಳಿಕೆಗಳು ವೈರಲ್ ಆಗುತ್ತಿವೆ.

ಅಭಿಮಾನಿಗಳ ಸಮಾವೇಶದಲ್ಲಿ ತಾರಕ್ ಮಾತನಾಡುತ್ತಾ ಅಭಿಮಾನಿಗಳ ಬಗ್ಗೆ ಮಾತನಾಡಿದ್ದಾರೆ. ನೀವು ನನ್ನ ಮೇಲೆ ತೋರಿಸುತ್ತಿರುವ ಪ್ರೀತಿಯನ್ನು ವರ್ಣನೆ ಮಾಡಲು ಸಾಧ್ಯವಿಲ್ಲ. ನೀವು ತೋರಿಸುವಂತಹ ಅಭಿಮಾನಕ್ಕೆ ನೂರು ಪಟ್ಟು ಜಾಸ್ತಿ ನನ್ನ ಹೃದಯದಲ್ಲಿ ನಿಮ್ಮ ಮೇಲೆ ಅಭಿಮಾನವಿದೆ. ನಮ್ಮ ಮಧ್ಯೆ ಯಾವುದೇ ರೀತಿಯ ರಕ್ತ ಸಂಬಂಧ ಇಲ್ಲದೇ ಇದ್ದರೂ ಸಹ ಅದಕ್ಕಿಂತ ಮಿಗಿಲಾದ ದೊಡ್ಡ ಸಂಬಂಧವಿದೆ.  ನಾನು ಏನು ಮಾಡಿ ನಿಮಗೆ ಹತ್ತಿರವಾಗಿದ್ದೀನಿ ಎಂಬುದು ತಿಳಿಯುತ್ತಿಲ್ಲ. ನೀವು ನನಗೆ ಸ್ವಂತ ಅಣ್ಣಂದಂತೆ. ಹೇಳಬೇಕೆಂದರೇ ಅವರಿಗಿಂತ ಹೆಚ್ಚು. ನಿಮ್ಮ ಈ ಪ್ರೀತಿಗೆ ನಾನು ಶಿರಭಾಗಿ ವಂದನೆ ಮಾಡುತ್ತಿದ್ದೇನೆ. ಇನ್ನೊಂದು ಜನ್ಮ ಇದ್ದರೇ ನಿಮ್ಮ ಈ ಅಭಿಮಾನಕ್ಕಾಗಿ ಹುಟ್ಟಬೇಕು ಎಂದು ಕೋರುತ್ತಿದ್ದೇನೆ ಎಂದು ಎಮೋಷನಲ್ ಆಗಿ ಮಾತನಾಡಿದ್ದಾರೆ.

ಇನ್ನೂ ಜೂನಿಯರ್‍ ಎನ್.ಟಿ.ಆರ್‍ ರವರ ಈ ಹೇಳಿಕೆಗಳು ಸೋಷಿಯಲ್  ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಅವರ ಅಭಿಮಾನಿಗಳು ಸಹ ವಿವಿಧ ರೀತಿಯ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ. ಅಭಿಮಾನಿಗಳಿಗೇ ಅಭಿಮಾನಿಯಾಗಿರುವ ಏಕೈಕ ಹಿರೋ ಜೂನಿಯರ್‍ ಎನ್.ಟಿ.ಆರ್‍ ಮಾತ್ರ ಎಂದು ಕಾಮೆಂಟ್ ಗಳ ಮೂಲಕ ಎನ್.ಟಿ.ಆರ್‍ ರವರನ್ನು ಹೊಗಳುತ್ತಿದ್ದಾರೆ. ಇನ್ನೂ ಈಗಾಗಲೇ ಆಸ್ಕರ್‍ ಅವಾರ್ಡ್ ಗಾಗಿ RRR ತಂಡ ಅಮೇರಿಕಾದಲ್ಲಿ ಮೊಕ್ಕಾ ಹೂಡಿದೆ. ಇನ್ನೂ ಜೂನಿಯರ್‍ ಎನ್.ಟಿ.ಆರ್‍ ಕೆಲವೊಂದು ವೈಯುಕ್ತಿಕ ಕಾರಣಗಳಿಂದ ತಡವಾಗಿ ಅಮೇರಿಕಾಗೆ ಹೋದರು. ಸದ್ಯ ಎನ್.ಟಿ.ಆರ್‍ ಆಸ್ಕರ್‍ ಅವಾರ್ಡ್ ಗೆ ಸಂಬಂಧಿಸಿದ ಪ್ರಮೋಷನ್ ಕಾರ್ಯಕ್ರಮಗಳಲ್ಲಿ ಪುಲ್ ಬ್ಯುಸಿಯಾಗಿದ್ದಾರೆ.