Film News

ರಶ್ಮಿಕಾ ಯಾರು ಅಂತಾ ಗೊತ್ತಿಲ್ಲ ಎಂದ ಕ್ರಿಕೆಟರ್ ಶುಭಮನ್ ಗಿಲ್….!

ಕಡಿಮೆ ಸಮಯದಲ್ಲೇ ಸೌತ್ ಅಂಡ್ ನಾರ್ತ್‌ನಲ್ಲೂ ಅವಕಾಶಗಳನ್ನು ಪಡೆದುಕೊಂಡು ಬಹುಬೇಡಿಕೆ ಸೃಷ್ಟಿಸಿಕೊಂಡ ನಟಿಯರ ಸಾಲಿಗೆ ರಶ್ಮಿಕಾ ಮಂದಣ್ಣ ಸೇರುತ್ತಾರೆ. ಕನ್ನಡದ ಸಿನೆಮಾದ ಮೂಲಕ ಸ್ಟಾರ್‍ ಆದ ರಶ್ಮಿಕಾ ಮಂದಣ್ಣ ಪುಷ್ಪಾ ಸಿನೆಮಾದ ಬಳಿಕ ಮತಷ್ಟು ಕ್ರೇಜ್ ಪಡೆದುಕೊಂಡರು. ಇನ್ನೂ ಅನೇಕರಿಗೆ ಕ್ರಷ್ ಸಹ ಆಗಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೆ ಕ್ರಿಕೆಟರ್‍ ಶುಭಮನ್ ಗಿಲ್ ರಶ್ಮಿಕಾ ನನ್ನ ಕ್ರಷ್ ಎಂದು ಹೇಳಿದ್ದಾಗಿ ಸುದ್ದಿಯೊಂದು ಕೇಳಿಬಂದಿದ್ದು, ಇದೀಗ ಅದಕ್ಕೆ ಶುಭಮನ್ ಗಿಲ್ ಶಾಕಿಂಗ್ ಹೇಳಿಕೆಯೊಂದನ್ನು ನೀಡಿದ್ದಾರೆ.

ಅದೃಷ್ಟ ಎಂಬುದು ಒಲಿದರೇ ಪ್ರತಿಯೊಬ್ಬರೂ ಕಡಿಮೆ ಸಮಯದಲ್ಲೇ ದೊಡ್ಡ ಫೇಂ ಸಂಪಾದಿಸಿಕೊಂಡಿದ್ದಾರೆ. ಈ ಸಾಲಿಗೆ ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ಸಹ ಸೇರುತ್ತಾರೆ. ಕನ್ನಡದ ಕಿರಿಕ್ ಪಾರ್ಟಿ ಎಂಬ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಈಕೆ ಕಡಿಮೆ ಸಮಯದಲ್ಲೇ ಸ್ಟಾರ್‍ ಆಗಿಬಿಟ್ಟರು. ಇನ್ನೂ ಬಾಲಿವುಡ್ ಗೂ ಸಹ ಹಾರಿದ ರಶ್ಮಿಕಾ ತುಂಬಾನೆ ಫೇಮಸ್ ಆಗಿದ್ದಾರೆ. ಬಾಲಿವುಡ್ ಸಿನೆಮಾಗಳಲ್ಲಿ ಅವಕಾಶಗಳನ್ನು ಗಿಟ್ಟಿಸಿಕೊಂಡ ಬಳಿಕವಂತೂ ಆಕೆ ಮತಷ್ಟು ಹಾಟ್ ಪೊಟೋಗಳ ಮೂಲಕ ಸಖತ್ ಸದ್ದು ಮಾಡುತ್ತಿದ್ದಾರೆ. ಅನೇಕ ನಟರು ರಶ್ಮಿಕಾ ಮೇಲಿನ ಕ್ರಷ್ ಅನ್ನು ಹೊರಹಾಕಿದ್ದರು. ಕೆಲವು ದಿನಗಳ ಹಿಂದೆಯಷ್ಟೆ ಟೀಂ ಇಂಡಿಯಾ ಆಟಗಾರ ಖ್ಯಾತ ಕ್ರಿಕೆಟಿಗ ಶುಭಮನ್ ಗಿಲ್ ರಶ್ಮಿಕಾ ನನ್ನ ಮೊದಲ ಕ್ರಷ್ ಎಂದು ಹೇಳಿದ್ದಾಗಿ ಸುದ್ದಿಯೊಂದನ್ನು ಖಾಸಗಿ ಮಿಡಿಯಾ ಒಂದು ಪ್ರಸಾರ ಮಾಡಿತ್ತು.

ಇನ್ನೂ ಈ ಸುದ್ದಿ ವೈರಲ್ ಆಗುತ್ತಿದ್ದಂತೆ. ಶುಭಮನ್ ಗಿಲ್ ರಿಯಾಕ್ಟ್ ಆಗಿದ್ದಾರೆ. ನಾನು ಯಾವ ಮಿಡಿಯಾದ ಜೊತೆಗೆ ರಶ್ಮಿಕಾ ನನ್ನ ಕ್ರಷ್ ಎಂದು ಹೇಳಿದ್ದೀನಿ, ನಾನು ಯಾರೊಂದಿಗೂ ಆ ರೀತಿ ಹೇಳಿದಂತೆ ನನಗೆ ನೆನಪಿಲ್ಲ. ಆಕೆ ಯಾರೂ ಎಂದೂ ಸಹ ನನಗೆ ತಿಳಿದಿಲ್ಲ ಎಂದು ಸೋಷಿಯಲ್ ಮಿಡಿಯಾದಲ್ಲಿ ಕಾಮೆಂಟ್ ಮಾಡಿದ್ದಾರೆ. ಇನ್ನೂ ಶುಭಮನ್ ಗಿಲ್ ಪೋಸ್ಟ್ ಇದೀಗ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಇನ್ನೂ ಸಚಿನ್ ಪುತ್ರಿ ಸಾರಾ ತೆಂಡೂಲ್ಕರ್‍ ಹಾಗೂ ಬಾಲಿವುಡ್ ಸ್ಟಾರ್‍ ಕಿಡ್ ಸಾರಾ ಅಲಿ ಖಾನ್ ಜೊತೆಗೂ ಶುಭಮನ್ ಗಿಲ್ ಡೇಟಿಂಗ್ ನಲ್ಲಿದ್ದರು ಎಂದು ಸುದ್ದಿಗಳು ಕೇಳಿಬಂದಿತ್ತು. ಸಾರಾ ತೆಂಡೂಲ್ಕರ್‍ ಜೊತೆಗೆ ಬ್ರೇಕಪ್ ಬಳಿಕ ಆಕೆ ಬಾಲಿವುಡ್ ನಟಿ ಸಾರಾ ಅಲಿ ಖಾನ್ ಜೊತೆಗೆ ಪ್ರೇಮ ಪಯಣ ಸಾಗಿಸುತ್ತಿದ್ದಾರೆ ಎಂಬ ಸುದ್ದಿ ಕೇಳಿಬಂದಿತ್ತು.

ಇನ್ನೂ ರಶ್ಮಿಕಾ ಮಂದಣ್ಣ ತನ್ನ ಮೊದಲ ಕ್ರಷ್ ಎಂದು ಶುಭಮನ್ ಗಿಲ್ ಹೇಳಿದ್ದಾಗಿ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿತ್ತು. ಈ ಬಗ್ಗೆ ಸೋಷಿಯಲ್ ಮಿಡಿಯಾದಲ್ಲಿ ಸಖತ್ ಟ್ರೆಂಡ್ ಮಾಡಲಾಗಿತ್ತು. ಇದೀಗ ಶುಭಮನ್ ರಶ್ಮಿಕಾ ಯಾರು ಎಂದು ತಿಳಿದಿಲ್ಲ ಎಂದು ಹೇಳುವ ಮೂಲಕ ಮತ್ತೊಂದು ಸುದ್ದಿ ಇದೀಗ ಟ್ರೆಂಡಿಂಗ್ ಆಗುತ್ತಿದೆ. ಇನ್ನೂ ರಶ್ಮಿಕಾ ಮಂದಣ್ಣ ಈ ಬಗ್ಗೆ ರಿಯಾಕ್ಟ್ ಆಗಿಲ್ಲ. ಸದ್ಯ ಆಕೆ ಸಾಲು ಸಾಲು ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

Most Popular

To Top