News

ಸೋಷಿಯಲ್ ಮಿಡಿಯಾ ಸ್ಟಾರ್ ಆಗಿದ್ದ ಪತ್ನಿಯನ್ನು ಗುಂಡಿಟ್ಟು ಕೊಂದ ಪತಿ, ಬೆಚ್ಚಿ ಬೀಳಿಸಿದ ಸಿಸಿ ಟಿವಿ ದೃಶ್ಯಾವಳಿ ವೈರಲ್ .…!

ಸೋಷಿಯಲ್ ಮಿಡಿಯಾದಿಂದ ಅನೇಕರು ಸಿನೆಮಾ ಸ್ಟಾರ್‍ ಗಳಾಗಿದ್ದಾರೆ. ಇದರಿಂದ ಕೆಲವರು ಬೀದಿಪಾಲಾಗಿದ್ದಾರೆ, ಮತ್ತೆ ಕೆಲವರು ಕೊಲೆ ಸಹ ಆಗಿದ್ದಾರೆ. ಈ ಹಾದಿಯಲ್ಲೇ ರಾಜಸ್ಥಾನದ ಫಲೋಡಿ ಎಂಬ ನಿವಾಸಿಯಾಗಿದ್ದ ಅನಾಮಿಕಾ ಬಿಷ್ಣೋಯ್ ಎಂಬಾಕೆ ಸೋಷಿಯಲ್ ಮಿಡಿಯಾದಲ್ಲಿ ಸ್ಟಾರ್‍ ಆಗಿದ್ದು, ಆಕೆಯನ್ನು ಪತಿಯೇ ಗುಂಡಿಕ್ಕಿ ಕೊಲೆ ಮಾಡಿದ್ದಾರೆ. ಈ ಘಟನೆ ಸಿಸಿಟಿವಿ ದೃಶ್ಯಾವಳಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ರಾಜಸ್ಥಾನದ ಫಲೋಡಿಯ ನಿವಾಸಿಯಾಗಿದ್ದ ಅನಾಮಿಕಾ ಬಿಷ್ಣೋಯ್ ಸೋಷಿಯಲ್ ಮಿಡಿಯಾದಲ್ಲಿ ಸ್ಟಾರ್‍ ಆಗಿದ್ದರು. ಆಕೆಯ ಇನ್ಸ್ಟಾ ಗ್ರಾಂ ಖಾತೆಯಲ್ಲಿ ಒಂದು ಲಕ್ಷಕ್ಕೂ ಅಧಿಕ ಫಾಲೋವರ್ಸ್ ಹೊಂದಿದ್ದಾರೆ. ಅನಾಮಿಕಾ ಬಿಷ್ಣೋಯ್ ಸೋಷಿಯಲ್ ಮಿಡಿಯಾದಲ್ಲಿ ಸ್ಟಾರ್‍ ಆಗಿದ್ದರು. ಈ ಹಿಂದೆ ಪತಿ ಹಾಗೂ ಪತ್ನಿಯ ನಡುವೆ ಗಲಾಟೆಯಾಗಿತ್ತಂತೆ. ಇದರಿಂದ ಪತಿಯಿಂದ ಆಕೆ ದೂರವಾಗಿ ವಾಸ ಮಾಡುತ್ತಿದ್ದರಂತೆ. ಅನಾಮಿಕಾ ರಾಜಸ್ತಾನದ ಫಲೋಡಿಯಲ್ಲಿ ಮಹಿಳೆಯರಿಗೆ ಸಂಬಂಧಿಸಿದ ಶಾಪಿಂಗ್ ಸೆಂಟರ್‍ ನಡೆಸುತ್ತಿದ್ದರು. ಶಾಪ್ ನಲ್ಲಿ ಆಕೆ ಕುಳಿತಿದ್ದಾಗ ಪತಿ ಮಹಿರಾಮ್ ಏಕಾಏಕಿ ಧಾವಿಸಿ ಸಮೀಪದಿಂದಲೇ 3-4 ಬಾರಿ ಗುಂಡು ಹಾರಿಸಿದ್ದಾರೆ. ಗುಂಡಿನ ದಾಳಿಯಲ್ಲಿ ಆಕೆಯ ಕುತ್ತಿಗೆ, ಸೊಂಟ ಹಾಗೂ ತಲೆಗೆ ಗಂಭೀರ ಗಾಯವಾಗಿದೆ. ಈ ದೃಶ್ಯಗಳು ಸಿಸಿಟಿವಿ ಯಲ್ಲಿ ಸೆರೆಯಾಗಿದೆ.

ಇನ್ನೂ ಮಹಿರಾಮ್ ಶಾಪ್ ಗೆ ಬಂದ ಕೂಡಲೇ ಆಕೆಯೊಂದಿಗೆ ವಾಗ್ವಾದಕ್ಕೆ ಇಳಿದಿದ್ದಾನೆ. ಮಹಿಳೆ ಅಲ್ಲಿಂದ ಹೊರಟು ಹೋಗುವಂತೆ ಸನ್ನೆ ಮೂಲಕ ಹೇಳುತ್ತಿರುತ್ತಾಳೆ. ಇದರಿಂದ ಕೋಪಗೊಂಡ ಆತ ಆಕೆಯ ಮೇಲೆ ಗುಂಡು ಹಾರಿಸಿದ್ದಾನೆ ಇದು ಸಿಸಿಟಿವಿ ವಿಡಿಯೋದಲ್ಲಿ ಸೆರೆಯಾಗಿದೆ. ಇನ್ನೂ ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಪತಿ-ಪತ್ನಿ ನಡುವೆ ಕೌಟುಂಬಕ ಕಲಹವಿದ್ದು, ಪತ್ನಿ ದಾಖಲಿಸಿದ ವರದಕ್ಷಿಣೆ ಕೇಸ್ ವಿಚಾರಣೆ ಸಹ ಕೋರ್ಟ್‌ನಲ್ಲಿ ನಡೆಯುತ್ತಿದೆ ಎನ್ನಲಾಗಿದೆ. ಈ ಕಾರಣದಿಂದಲೂ ಕೊಲೆ ನಡೆದಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

Most Popular

To Top