7ನೇ ವೇತನ ಆಯೋಗ ಜಾರಿ, ನೌಕರರಿಗೆ ಸಿಕ್ಕಿದ್ದು ಭರವಸೆ ಮಾತ್ರ….!

Follow Us :

ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ರಾಜ್ಯ ಮಟ್ಟದ ಸರ್ಕಾರಿ ನೌಕರರ ಸಮ್ಮೇಳನ ನಡೆದಿದ್ದು, ಈ ಸಮ್ಮೇಳನದಲ್ಲಿ ರಾಜ್ಯದ ನೌಕರರು 7ನೇ ವೇತನ ಆಯೋಗ ಘೋಷಣೆ ಮಾಡುತ್ತಾರೆ ಎಂದು ಕಾತುರದಿಂದ ಕಾಯುತ್ತಿದ್ದರು. ಆದರೆ ರಾಜ್ಯ ಕಾಂಗ್ರೆಸ್ ಸರ್ಕಾರ ಮತ್ತೆ ನೌಕರರಿಗೆ ನಿರಾಸೆ ಮೂಡಿಸಿದೆ. ಬಜೆಟ್ ನಲ್ಲಿ ವೇತನ ಆಯೋಗ ಜಾರಿ ಬಗ್ಗೆ ಘೋಷಣೆಯಿಲ್ಲ, ಸಮಾವೇಶದಲ್ಲೂ ಘೋಷಣೆಯಿಲ್ಲ, ಬರೀ ಭರವಸೆ ಮಾತ್ರ ಸಿಕ್ಕಿದೆ.

ರಾಜ್ಯದಲ್ಲಿ 7ನೇ ವೇತನ ಆಯೋಗ ಜಾರಿಗಾಗಿ ಸರ್ಕಾರಿ ನೌಕರರು ಸರ್ಕಾರದಲ್ಲಿ ಒತ್ತಡ ಹೇರಿದ್ದರು. ಈ ನಿಟ್ಟಿನಲ್ಲೇ ಬೆಂಗಳೂರಿನ ಅರಮನೆ ಮೈದಾನದಲ್ಲಿ ಬೃಹತ್ ರಾಜ್ಯ ಸರ್ಕಾರಿ ನೌಕರರ ಸಮ್ಮೇಳನವನ್ನು ಸಹ ಆಯೋಜಿಸಿ ದೊಡ್ಡ ಮಟ್ಟದಲ್ಲಿ ನೌಕರರನ್ನು ಸೇರಿಸಿದ್ದರು. ಈ ವೇಳೆ ಸಿಎಂ ಸಿದ್ದರಾಮಯ್ಯ ಮಾತನಾಡಿ ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿ ಉಂಟಾಗಿರುವ ಆರ್ಥಿಕ ಹೊರೆಯ ನಡುವೆ 7ನೇ ವೇತನ ಆಯೋಗದ ಅಂತಿಮ ವರದಿ ಬಂದ ನಂತರ ಸರ್ಕಾರಿ ನೌಕರರ ಬಗ್ಗೆ ರಾಜ್ಯ ಸರ್ಕಾರ ಸಕಾರಾತ್ಮಕ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಹೇಳಿದ್ದರು. ಇದೀಗ ಸಮಾವೇಶದಲ್ಲಿ ಸ್ಪಷ್ಟವಾಗಿ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದ ಘೋಷಣೆಯ ಬದಲಿಗೆ ಬರೀ ಭರವಸೆ ಸಿಕ್ಕಂತಾಗಿದೆ.

7ನೇ ವೇತನ ಆಯೋಗದ ವರದಿ ಅನುಷ್ಟಾನ ಹಾಗೂ ಹಳೇ ಪಿಂಚಣಿ ಯೋಜನೆ ಮರುಸ್ಥಾಪನೆ ಕುರಿತು 2024-25ನೇ ಸಾಲಿನ ಬಜೆಟ್ ನಲ್ಲಿ ಘೋಷಣೆ ಮಾಡುವ ನಿರೀಕ್ಷೆ ಸರ್ಕಾರಿ ನೌಕರರಿಗಿತ್ತು. ಆದರೆ ಘೋಷಣೆಯಾಗಿಲ್ಲ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರಿ ನೌಕರರ ಬೃಹತ್ ಸಮ್ಮೇಳನವನ್ನು ಆಯೋಜನೆ ಮಾಡಿ ಒತ್ತಾಯ ಮಾಡಲಾಗಿತ್ತು. ಆದರೂ ಸಹ ರಾಜ್ಯ ಸರ್ಕಾರ ಸದ್ಯ ಸರ್ಕಾರಿ ನೌಕರರಿಗೆ ಭರವಸೆ ಮಾತ್ರ ನೀಡಿದ್ದಾರೆ.