ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ, ಪೊಲೀಸರಿಂದ ಸುಮೊಟೋ ಕೇಸ್ ದಾಖಲು

Follow Us :

ರಾಜ್ಯದ ವಿಧಾನಸೌಧದಲ್ಲಿ ವೈರಿ ರಾಷ್ಟ್ರ ಪಾಕಿಸ್ತಾನ ಪರ ಘೋಷಣೆ ಕೂಗಲಾಗಿತ್ತು. ಕಾಂಗ್ರೇಸ್ ನಿಂದ ರಾಜ್ಯ ಸಭೆಗೆ ಆಯ್ಕೆಯಾದ ಸೈಯದ್ ನಾಸೀರ್‍ ಹುಸೇನ್ ಬೆಂಬಲಿಗರು ಪಾಕಿಸ್ತಾನದ ಪರ ಘೋಷಣೆ ಕೂಗಿದ್ದರು. ರಾಜ್ಯಸಭಾ ಸದಸ್ಯನಾಗಿ ನಾಸೀರ್‍ ಹುಸೇನ್ ಗೆದ್ದು ಹೊರಗೆ ಬರುವಾಗ ನಾಸೀರ್‍ ಹುಸೇನ್ ಜಿಂದಾಬಾದ್, ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಾಲಾಗಿತ್ತು. ಈ ಬಗ್ಗೆ ಭಾರಿ ವಿರೋಧ ವ್ಯಕ್ತವಾಗಿದ್ದು, ಇದೀಗ ಈ ಪ್ರಕರಣದ ಬಗ್ಗೆ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಸುಮೊಟೋ ಪ್ರಕರಣ ದಾಖಲು ಮಾಡಿಕೊಳಲಾಗಿದೆ.

ಪಾಕಿಸ್ತಾನದ ಪರ ಘೋಷನೆ ಕೂಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 153ಬಿ (ರಾಷ್ಟ್ರೀಯ ಸಮಗ್ರತೆ ಧಕ್ಕೆ ನೀಡಿದ ಹೇಳಿಕೆ) 505 ಅಡಿಯಲ್ಲಿ ಅಪರಿಚಿತ ವ್ಯಕ್ತಿಗಳ ಮೇಲೆ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ. ಈ ಪ್ರಕರಣದ ಕುರಿತಂತೆ ವಿಪಕ್ಷಗಳು ಭಾರಿ ವಿರೋಧ ಮಾಡಿ ಪ್ರತಿಭಟನೆಗೆ ಸಹ ಮುಂದಾಗಿತ್ತು. ಕೂಡಲೇ ಎಚ್ಚೆತ್ತುಕೊಂಡ ಸರ್ಕಾರ ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿದ ಕಿಡಿಗೇಡಿಗಳ ವಿರುದ್ದ ಕ್ರಮಕ್ಕೆ ಮುಂದಾಗಿದೆ. ಇನ್ನೂ ಬುಧವಾರ ರಾಜ್ಯ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ಹಾಗೂ ಕಾಂಗ್ರೇಸ್ ಕಚೇರಿಗಳಿಗೆ ಮುತ್ತಿಗೆ ಹಾಕಲು ಬಿಜೆಪಿ ಕರೆ ನೀಡಿದೆ.

ಇನ್ನೂ ಈ ಘಟನೆಯ ಬಗ್ಗೆ ರಾಜ್ಯಸಭಾ ಸದಸ್ಯ ನಾಸೀರ್‍ ಹುಸೇನ್ ರವರನ್ನು ಪ್ರತಿಕ್ರಿಯೆ ಕೇಳಿದಾಗ ಮಾದ್ಯಮದವರ ವಿರುದ್ದ ಆಕ್ರೋಷ ಹೊರಹಾಕಿ ಏಕವಚನದಲ್ಲಿ ಮಾತನಾಡಿದ್ದರು. ಇದೀಗ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಅಲ್ಲಿ ಹುಸೇನ್ ಜಿಂದಾಬಾಂದ್ ಎನ್ನಲಾಗುತ್ತಿತ್ತು. ನಾನು ಅಲ್ಲಿರುವಾಗ ಬೇರೆ ರೀತಿಯ ಘೋಷಣೆಗಳು ನನಗೆ ಕೇಳಿಸಲಿಲ್ಲ. ನಾನು ಅಲ್ಲಿಂದ ಹೋದಮೇಲೆ ಯಾರಾದರೂ ಕೂಗಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ನಾನು ಸಹ ಆ ವಿಡಿಯೋಗಳನ್ನು ನೋಡಿದ್ದೇನೆ. ಅಲ್ಲಿ ಯಾರಾದರೂ ಅಂತಹ ಘೋಷಣೆ ಕೂಗಿದ್ದರೇ ಕಾನೂನು ರೀತಿ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ಯಾರು ಎಲ್ಲಿದ್ದ ಬಂದರು ಇದರ ಹಿಂದೆ ಏನಿದೆ ಎಂಬ ಬಗ್ಗೆ ತನಿಖೆ ನಡೆಯಬೇಕು ಎಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.