ಮಹೇಶ್ ಬಾಬು ಸಿನೆಮಾದ ಬಗ್ಗೆ ಶಾಕಿಂಗ್ ಕಾಮೆಂಟ್ಸ್ ಮಾಡಿದ ಆರ್.ಪಿ., ಮಹೇಶ್ ಬಾಬು ರವರಿಗೆ ಹಾಡುಗಳನ್ನು ಆಡಿ ತಪ್ಪು ಮಾಡಿದೆ ಎಂದ ಗಾಯಕ…..!

Follow Us :

ಸುಮಾರು ವರ್ಷಗಳ ಕಾಲ ಸೌತ್ ಸಿನೆಮಾಗಳಿಗೆ ಮ್ಯೂಸಿಕ್ ಕಂಪೋಸ್ ಮಾಡಿ ಬ್ಯಾಕ್ ಟು ಬ್ಯಾಕ್ ಹಿಟ್ ಪಡೆದುಕೊಂಡ ಆರ್‍.ಪಿ. ಪಟ್ನಾಯಕ್ ಜಯಂ, ಮನಸಂತಾ ನುವ್ವೆ, ದಿಲ್, ಸಂಬಂರಂ, ಸಂತೋಷಂ ಸೇರಿದಂತೆ ಅನೇಕ ಸಿನೆಮಾಗಳಲ್ಲಿ ಮ್ಯೂಸಿಕ್ ಮೂಲಕ ಹಿಟ್ ಪಡೆದುಕೊಂಡಿದ್ದಾರೆ. 2016 ರವರೆಗೂ ಸಿನೆಮಾಗಳಿಗೆ ಮ್ಯೂಸಿಕ್ ಕಂಪೋಸ್ ಮಾಡಿದ ಪಟ್ನಾಯಕ್ ಬಳಿಕ ಸಿನೆಮಾಗಳಿಂದ ದೂರವೇ ಉಳಿದಿದ್ದಾರೆ. ಇದೀಗ ಅವರು ತೆಲುಗು ಸಿನಿರಂಗದ ಸ್ಟಾರ್‍ ನಟ ಸೂಪರ್‍ ಸ್ಟಾರ್‍ ಮಹೇಶ್ ಬಾಬು ರವರ ಸಿನೆಮಾದ ಬಗ್ಗೆ ಖ್ಯಾತ ಮ್ಯೂಸಿಕ್ ಡೈರೆಕ್ಟರ್‍ ಆರ್‍.ಪಿ.ಪಟ್ನಾಯಕ್ ಸಂಚಲನಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ.

ಸುಮಾರು ವರ್ಷಗಳ ಕಾಲ ಯಂಗ್ ಹಿರೋಗಳ ಸಿನೆಮಾಗಳಿಗೆ ಸಂಗೀತ ನೀಡಿದಂತಹ ಆರ್‍.ಪಿ. ಪಟ್ನಾಯಕ್ ಸದ್ಯ ಸಿನೆಮಾಗಳಿಂದ ದೂರವೇ ಉಳಿದಿದ್ದಾರೆ. ಆದರೆ ಆಗಾಗ ಕೆಲವೊಂದು ಸಿನೆಮಾ ಈವೆಂಟ್ ಗಳಲ್ಲಿ ಭಾಗಿಯಾಗುತ್ತಿರುತ್ತಾರೆ. ಜೊತೆಗೆ ಕೆಲವೊಂದು ಸಂದರ್ಶನಗಳಲ್ಲೂ ಸಹ ಕಾಣಿಸಿಕೊಳ್ಳುತ್ತಿರುತ್ತಾರೆ. ಸಂದರ್ಶನಗಳಲ್ಲಿ ಅವರು ಅನೇಕ ವಿಚಾರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇತ್ತೀಚಿಗೆ ನಡೆದ ಸಂದರ್ಶನದಲ್ಲಿ ಪಟ್ನಾಯಕ್ ಕೆಲವೊಂದು ಸಂಚಲನಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ. ಈ ಹಿಂದೆ ಆತ ಭಾಗಿಯಾದ ಸಂದರ್ಶನದಲ್ಲಿ ಬೇಸರ ವ್ಯಕ್ತಪಡಿಸಿದ್ದು ತುಂಬಾನೆ ಕಡಿಮೆ ಎನ್ನಲಾಗಿದೆ. ಇದೀಗ ಮಹೇಶ್ ಬಾಬು ರವರ ಸಿನೆಮಾದಲ್ಲಿ ಹಾಡುಗಳನ್ನು ಹಾಡಿ ತಪ್ಪು ಮಾಡಿದ್ದೇನೆ ಎಂದು ಶಾಕಿಂಗ್ ಕಾಮೆಂಟ್ಸ್ ಮಾಡಿದ್ದಾರೆ.

ಮಹೇಶ್ ಬಾಬು ರವರ ನಿಜಂ ಸಿನೆಮಾಗೆ ಮ್ಯೂಸಿಕ್ ಕಂಪೋಸ್ ಮಾಡುವ ಸಮಯದಲ್ಲಿ ಕೆಲವೊಂದು ಪರಿಸ್ಥಿತಿಗಳ ಕಾರಣದಿಂದ ಸಿಂಗರ್‍ ಉಷಾ ಜೊತೆಗೆ ತುಂಬಾ ಹಾಡುಗಳನ್ನು ಹಾಡಿದೆ. ಮಹೇಶ್ ಬಾಬು ರವರ ವಾಯ್ಸ್ ಗೆ ನನ್ನ ವಾಯ್ಸ್ ಸೆಟ್ ಆಗಲಿಲ್ಲ. ನನ್ನ ಕಂಠ ಯಂಗ್ ಹಿರೋಗಳಿಗೆ ಮಾತ್ರ ಸರಿಹೋಗುತ್ತದೆ. ಚಿಕ್ಕವನ ಕಂಠದಂತೆ ನನ್ನ ಕಂಠ ಇರುತ್ತದೆ. ಆದರೆ ಸ್ಟಾರ್‍ ಹಿರೋ ಗಾಗಿ ಹಾಡಬೇಕಾದರೇ ನನ್ನ ವಾಯ್ಸ್ ಸೆಟ್ ಆಗುವುದಿಲ್ಲ. ಆದ್ದರಿಂದ ನಿಜಂ ಸಿನೆಮಾಗೆ ನಾನು ಹಾಡುಗಳನ್ನು ಹಾಡಬಾರದಾಗಿತ್ತು. ಜೊತೆಗೆ ಅನೇಕರು ನಿಜಂ ಸಿನೆಮಾದ ಸಮಯದಲ್ಲಿ ಪೋನ್ ಮಾಡಿ ಇದೇ ವಿಚಾರವನ್ನು ಹಂಚಿಕೊಂಡರು. ಅಷ್ಟೇ ಅಲ್ಲ ಅವಕಾಶ ಬಂತೆಂದು ಹೇಗೆ ಸಿಕ್ಕರೇ ಹಾಗೆ ಹಾಡುತ್ತೀಯಾ ಎಂದು ಮುಖದ ಮೇಲೆಯೇ ಅನೇಕರು ಹೇಳಿದ್ದರಂತೆ. ಈ ವಿಚಾರ ಆಗಾಗ ನಾನು ನೆನಪಿಸಿಕೊಂಡು ರಿಗ್ರೇಟ್ ಆಗುತ್ತಿರುತ್ತೇನೆ ಎಂದು ಆರ್‍.ಪಿ. ಪಟ್ನಾಯಕ್ ತಿಳಿಸಿದ್ದಾರೆ.

ಖ್ಯಾತ ಮ್ಯೂಸಿಕ್ ಡೈರೆಕ್ಟರ್‍ ಕಂ ಸಿಂಗರ್‍ ಆರ್‍.ಪಿ. ಪಟ್ನಾಯಕ್ ರವರ ಮ್ಯೂಸಿಕ್ ಗೆ ಅನೇಕರು ಫ್ಯಾನ್ಸ್ ಆಗಿದ್ದಾರೆ. ಅವರು ಹಾಡುಗಳು ಇಂದಿಗೂ ಸಹ ತುಂಬಾನೆ ಫೇಮಸ್ ಆಗಿದೆ. ಲವ್ ಸ್ಟೋರಿಯುಳ್ಳ ಸಿನೆಮಾಗಳಿಗೆ ಆರ್‍.ಪಿ. ಪಟ್ನಾಯಕ್ ತುಂಬಾನೆ ಅದ್ಬುತವಾಗಿ, ಎಲ್ಲರನ್ನೂ ರಂಜಿಸುವಂತಹ ಹಾಡುಗಳನ್ನು ಹಾಡಿದ್ದಾರೆ. ಆದರೆ ಅವರು 2016 ರಿಂದ ಸಿನೆಮಾಗಳಿಂದ ದೂರವೇ ಇದ್ದಾರೆ.