Film News

ನಿಹಾರಿಕಾ ಕೊಣಿದೆಲಾ ಗರ್ಭಿಣಿಯೇ? ಮಾವಿನ ಹಣ್ಣು ತಿನ್ನುವ ಪೋಸ್ಟ್ ಹಂಚಿಕೊಂಡ ನಿಹಾರಿಕಾ, ಕ್ರೇಜಿ ಕಾಮೆಂಟ್ಸ್ ವೈರಲ್…..!

ಮೆಗಾ ಕುಟುಂಬದ ಏಕೈಕ ನಟಿ ನಿಹಾರಿಕಾ ಕೊಣಿದೆಲಾ ಇತ್ತೀಚಿಗೆ ಏನೇ ಪೋಸ್ಟ್ ಹಂಚಿಕೊಂಡರು ಕಡಿಮೆ ಸಮಯದಲ್ಲೇ ವೈರಲ್ ಆಗುತ್ತಿರುತ್ತದೆ. ನಿಹಾರಿಕಾ ಹಾಗೂ ಚೈತನ್ಯ ಜೊತೆಗಿನ ವಿಚ್ಚೇದನದ ರೂಮರ್‍ ಬಳಿಕ ಆಕೆಯ ಸೋಷಿಯಲ್ ಮಿಡಿಯಾ ಪೋಸ್ಟ್ ಗಳ ಮೇಲೆಯೇ ಎಲ್ಲರ ದೃಷ್ಟಿಯಿರುತ್ತದೆ. ಈ ಹಾದಿಯಲ್ಲೇ ಆಕೆ ಹಂಚಿಕೊಳ್ಳುವ ಪೊಸ್ಟ್ ಗಳು ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುತ್ತದೆ. ಇದೀಗ ಆಕೆಯ ಬಗ್ಗೆ ಮತ್ತೊಂದು ರೂಮರ್‍ ಕೇಳಿಬರುತ್ತಿದೆ. ನಿಹಾರಿಕಾ ಕೊಣಿದೆಲಾ ಗರ್ಭಿಣಿಯೆಂಬ ಸುದ್ದಿಗಳು ಜೋರಾಗಿಯೇ ಕೇಳಿಬರುತ್ತಿದೆ. ಇದಕ್ಕೆ ಹಂಚಿಕೊಂಡ ಲೇಟೆಸ್ಟ್ ಪೋಸ್ಟ್ ಒಂದು ಕಾರಣ ಎನ್ನಲಾಗುತ್ತಿದೆ.

ಮೆಗಾ ಕುಟುಂಬದಿಂದ ಸಿನಿರಂಗಕ್ಕೆ ಎಂಟ್ರಿ ಕೊಟ್ಟ ಏಕೈಕ ನಟಿ ನಿಹಾರಿಕಾ ಹಿರೋಯಿನ್ ಆಗಿ ಖ್ಯಾತಿ ಪಡೆದುಕೊಳ್ಳಲು ತುಂಬಾನೆ ಪ್ರಯತ್ನಗಳನ್ನು ನಡೆಸುತ್ತಿದ್ದಾರೆ. ಮದುವೆಗೂ ಮುಂಚೆಯೇ ಕೆಲವೊಂದು ಸಿನೆಮಾಗಳಲ್ಲಿ ನಟಿಸಿದ್ದರು. ಆದರೆ ಯಾವುದೇ ಸಿನೆಮಾ ಸಕ್ಸಸ್ ಕಾಣಲಿಲ್ಲ. ಸದ್ಯ ಆಕೆ ನಿರ್ಮಾಪಕಿಯಾಗಿ ಹಾಗೂ ವೆಬ್ ಸಿರೀಸ್ ಗಳತ್ತ ಮುಖ ಮಾಡಿದ್ದಾರೆ. ಜೊತೆಗೆ ಸಿನೆಮಾಗಳಲ್ಲೂ ಸಹ ಆಫರ್‍ ಗಳಿಗಾಗಿ ಪ್ರಯತ್ನಗಳನ್ನು ಮಾಡುತ್ತಿರುತ್ತಾರೆ. ಇನ್ನೂ ಕೆಲವು ದಿನಗಳಿಂದ ನಿಹಾರಿಕಾ ವೈಯುಕ್ತಿಕ ಕಾರಣಗಳಿಂದ ತುಂಬಾನೆ ಸುದ್ದಿಯಾಗುತ್ತಿದ್ದಾರೆ. ನಿಹಾರಿಕಾ ಹಾಗೂ ಚೈತನ್ಯ ಜೊನ್ನಲಗಡ್ಡ ನಡುವೆ ವಿಬೇದಗಳು ಉಂಟಾಗಿ ಇಬ್ಬರೂ ಬೇರೆಯಾಗುತ್ತಿದ್ದಾರೆ ಎಂಬ ರೂಮರ್‍ ಗಳು ಜೋರಾಗಿಯೇ ಹರಿದಾಡುತ್ತಿವೆ. ಈ ಬಗ್ಗೆ ಇನ್ನೂ ಮೆಗಾ ಕುಟುಂಬದಿಂದ ಯಾವುದೇ ಸ್ಪಷ್ಟನೆ ಬಾರದ ಕಾರಣ ರೂಮರ್‍ ಗಳು ಹರಿದಾಡುವುದು ನಿಂತಿಲ್ಲ.

ಇನ್ನೂ ನಿಹಾರಿಕಾ ವಿಚ್ಚೇದನದ ರೂಮರ್‍ ಹರಿದಾಡಿದ ಬಳಿಕ ಆಕೆ ಏನೆ ಮಾಡಿದರೂ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ನಿಹಾರಿಕಾ ಸಮ್ಮರ್‍ ಸ್ಪೇಷಲ್ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಆಕೆ ಮಾವಿನ ಹಣ್ಣನ್ನು ತಿನ್ನುತ್ತಾ ಕಾಣಿಸಿಕೊಂಡಿದ್ದಾರೆ. ಪಿಂಕ್ ಸೀರೆಯಲ್ಲಿ, ಸ್ಲೀವ್ ಲೆಸ್ ಬ್ಲೌಜ್ ನಲ್ಲಿ ನಿಹಾರಿಕಾ ಫನ್ನಿಯಾಗಿ, ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಪೋಸ್ಟ್ ಗೆ ನಿಹಾರಿಕಾ ಸಮ್ಮರ್‍ ನಲ್ಲಿ ಮಾವಿನ ಹಣ್ಣುಗಳು ಇಲ್ಲದೇ ಇದ್ದರೇ ಪರಿಸ್ಥಿತಿ ಏನು ಎಂದು ಫನ್ನಿಯಾಗಿ ಕ್ಯಾಪ್ಷನ್ ಹಾಕಿದ್ದಾರೆ. ಇನ್ನೂ ಆಕೆಯ ಪೋಸ್ಟ್ ಸಖತ್ ವೈರಲ್ ಆಗುತ್ತಿದೆ. ವಿವಿಧ ರೀತಿಯ ಕಾಮೆಂಟ್ ಗಳು ಹರಿದಾಡುತ್ತಿವೆ. ಅಕ್ಕಾ ಏನಾದರೂ ವಿಶೇಷತೆ ಇದೆಯಾ, ಗರ್ಭಿಣಿಯಾಗಿದ್ದೀಯಾ ಎಂದು ಕಾಮೆಂಟ್ ಗಳ ಮೂಲಕ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ.

ಇನ್ನೂ ಕೆಲವರಂತೂ ನಿಮ್ಮ ವಿಚ್ಚೇದನದ ಬಗ್ಗೆ ಹರಿದಾಡುತ್ತಿರುವ ಸುದ್ದಿಗಳ ಬಗ್ಗೆ ಕಾಮೆಂಟ್ಸ್ ಗಳ ಬಗ್ಗೆ ಮಾತನಾಡಿದ್ದಾರೆ. ಜೊತೆಗೆ ನೀವಿಬ್ಬರೂ ಬೇರೆಯಾಗಬೇಡಿ ಎಂಬ ರಿಕ್ವೆಸ್ಟ್ ಸಹ ಮಾಡುತ್ತಿದ್ದಾರೆ. ಮತ್ತೆ ಕೆಲವರು ನಿಹಾರಿಕಾ ಸಮ್ಮರ್‍ ಕಾರಣದಿಂದ ಮಾವಿನ ಹಣ್ಣನ್ನು ತಿನ್ನುತ್ತಾ ಸಾಮಾನ್ಯವಾಗಿ ಪೋಸ್ಟ್ ಹಂಚಿಕೊಂಡಿದ್ದಾರೆ. ಇದರಲ್ಲಿ ಬೇರೆ ರೀತಿಯ ಯೋಚನೆಗಳು ಬೇಡ ಎಂದು ಸಹ ಕಾಮೆಂಟ್ ಗಳನ್ನು ಹಂಚಿಕೊಂಡಿದ್ದಾರೆ. ಸದ್ಯ ನಿಹಾರಿಕಾರವರ ಈ ಪೋಸ್ಟ್ ಸಖತ್ ವೈರಲ್ ಆಗುತ್ತಿದೆ.

Most Popular

To Top