Film News

ಜಿಮ್ ನಲ್ಲಿ ಹೆವಿ ವರ್ಕೌಟ್ ಮಾಡುತ್ತಿರುವ ಪ್ರಿನ್ಸ್ ಮಹೇಶ್ ಬಾಬು, ರಾಜಮೌಳಿ ಸಿನೆಮಾಗಾಗಿ ಹೆವಿ ವರ್ಕೌಟ್?

ಟಾಲಿವುಡ್ ನಲ್ಲಿ ಪ್ರಿನ್ಸ್ ಎಂತಲೇ ಖ್ಯಾತಿ ಪಡೆದುಕೊಂಡ ತೆಲುಗು ಸೂಪರ್‍ ಸ್ಟಾರ್‍ ಕೃಷ್ಣ ರವರ ಪುತ್ರನಾಗಿ ಸಿನಿರಂಗಕ್ಕೆ ಎಂಟ್ರಿ ಕೊಟ್ಟ, ತನ್ನದೇ ಆದ ಪ್ರತಿಭೆಯಿಂದ ಸ್ಟಾರ್‍ ಡಮ್ ಗಿಟ್ಟಿಸಿಕೊಂಡ ಮಹೇಶ್ ಬಾಬು ಗುಂಟೂರು ಖಾರಂ ಸಿನೆಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನೆಮಾದ ಬಳಿಕ ಮಹೇಶ್ ಬಾಬು ರಾಜಮೌಳಿಯವರ ಸಿನೆಮಾದಲ್ಲಿ ನಟಿಸಲಿದ್ದಾರೆ. ಇದೀಗ ಮಹೇಶ್ ಬಾಬು ಜಿಮ್ ನಲ್ಲಿ ವರ್ಕೌಟ್ ಮಾಡುವ ಪೊಟೋ ಒಂದು ಸೊಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

ರಾಜಮೌಳಿ ಸಿನೆಮಾಗಳು ಅಂದರೇ ತುಂಬಾ ನಿರೀಕ್ಷೆ ಇರುತ್ತದೆ. ಹಿರೋಗಳನ್ನು ಸಿಕ್ಸ್ ಪ್ಯಾಕ್ ನಲ್ಲಿ ಪ್ರೆಸೆಂಟ್ ಮಾಡುತ್ತಾರೆ. ರಾಜಮೌಳಿ ಈ ಟ್ರೆಂಡ್ ಫಾಲೋ ಆಗುತ್ತಿದ್ದಾರೆ. ಬಾಹುಬಲಿ ಸಿನೆಮಾದ ಬಳಿಕ ರಾಜಮೌಳಿ ಈ ಟ್ರೆಂಡ್ ಫಾಲೋ ಆಗುತ್ತಿದ್ದಾರೆ. ಬಾಹುಬಲಿ ಸಿನೆಮಾದಲ್ಲಿ ಪ್ರಭಾಸ್ ಹಾಗೂ ರಾಣಾ ರವರನ್ನು ಹೇಗೆ ಪ್ರೆಸೆಂಟ್ ಮಾಡಿದ್ದರು ತಿಳಿದೇ ಇದೆ. ಪರದೆಯ ಮೇಲೆ ಗಂಭೀರವಾಗಿ ಕಾಣಲು ದೇಹವನ್ನು ಸದೃಢವಾಗುವಂತೆ ತರಬೇತಿ ಸಹ ಕೊಡಿಸಿದರು. ಬಳಿಕ ಆರ್‍.ಆರ್‍.ಆರ್‍ ಸಿನೆಮಾದಲ್ಲೂ ಸಹ ರಾಮ್ ಚರಣ್ ಹಾಗೂ ಜೂನಿಯರ್‍ ಎನ್.ಟಿ.ಆರ್‍ ರವರನ್ನು ಸಿಕ್ಸ್ ಪ್ಯಾಕ್ ನಲ್ಲಿ ಪ್ರಸೆಂಟ್ ಮಾಡಿದ್ದರು. ಇದೀಗ ಮಹೇಶ್ ಬಾಬು ಜಿಮ್ ನಲ್ಲಿ ಹೆವಿ ವರ್ಕೌಟ್ ಮಾಡುತ್ತಿದ್ದು, ರಾಜಮೌಳಿ ಯವರ ಮುಂದಿನ ಸಿನೆಮಾಗಾಗಿ ಎಂದು ಹೇಳಲಾಗುತ್ತಿದೆ.

ಇನ್ನೂ ಮಹೇಶ್ ಬಾಬು ರವರು ಇತ್ತೀಚಿಗೆ ಹೆಚ್ಚಾಗಿ ಜಿಮ್ ನಲ್ಲಿ ಕಸರತ್ತುಗಳನ್ನು ಮಾಡುತ್ತಿದ್ದಾರೆ. ಮಾಂಸ ಖಂಡಗಳನ್ನು ಬೆಳೆಸಿಕೊಳ್ಳುತ್ತಿದ್ದಾರೆ. ಅದಕ್ಕಾಗಿ ಕಠಿಣ ಕಸರತ್ತುಗಳನ್ನು ಸಹ ಮಾಡುತ್ತಿದ್ದಾರಂತೆ. ಇದೆಲ್ಲವೂ ರಾಜಮೌಳಿ ರವರ ಮುಂದಿನ ಸಿನೆಮಾಗಾಗಿ ಎಂದೂ ಸುದ್ದಿ ವೈರಲ್ ಆಗುತ್ತಿದೆ. ಇದೀಗ ಮತ್ತೊಂದು ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿರುವ ಪೊಟೋ ವೈರಲ್ ಆಗುತ್ತಿದೆ. ಕೈಯಲ್ಲಿರುವ ಮಾಂಸಖಂಡಗಳನ್ನು ಬೆಳೆಸಿಕೊಳ್ಳುತ್ತಿದ್ದಾರೆ. ಬೆವರು ಸುರಿಸುತ್ತಿದ್ದರೇ ಬಲ ಬರುತ್ತಿರುವ ಭಾವನೆ ಬರುತ್ತಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಸದ್ಯ ಮಹೇಶ್ ಬಾಬು ರವರ ಹೊಸ ಲುಕ್ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಅಭಿಮಾನಿಗಳು ಸಹ ಪುಲ್ ಖುಷಿಯಾಗಿದ್ದಾರೆ.

ಇನ್ನೂ ಮಹೇಶ್ ಬಾಬು ರವರು ಗುಂಟೂರು ಖಾರಂ ಸಿನೆಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನೆಮಾದ ಶೂಟಿಂಗ್ ಕೆಲಸಗಳು ಬಹುತೇಕ ಪೂರ್ಣಗೊಂಡಿದೆ. ಈ ಸಿನೆಮಾದ ಬಳಿಕ ರಾಜಮೌಳಿಯವರ ಸಿನೆಮಾದಲ್ಲಿ ನಟಿಸಲಿದ್ದಾರೆ. ಈಗಾಗಲೇ ರಾಜಮೌಳಿ ಹಾಗೂ ವಿಜಯೇಂದ್ರ ಪ್ರಸಾದ್ ಸ್ಕ್ರಿಪ್ಟ್ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ ಎಂದೂ ಸಹ ಹೇಳಲಾಗಿದೆ. ಶೀಘ್ರದಲ್ಲೇ ಪ್ರಿ ಪ್ರೊಡಕ್ಷನ್ ಕೆಲಸಗಳೂ ಸಹ ಶುರುವಾಗಲಿದೆ ಎಂದು ತಿಳಿದುಬಂದಿದೆ.

Most Popular

To Top