Film News

ಪ್ರಿನ್ಸ್ ಮಹೇಶ್ ಬಾಬು ರವರನ್ನೇ ಇಂಪ್ರೆಸ್ ಮಾಡಿದ ಸಿತಾರಾ ನೃತ್ಯ, ಮಹೇಶ್ ಬಾಬು ರವರೇ ವಿಡಿಯೋ ಶೇರ್ ಮಾಡಿ ಪ್ರಶಂಸೆ…!

ಟಾಲಿವುಡ್ ಸ್ಟಾರ್‍ ನಟ ಪ್ರಿನ್ಸ್ ಮಹೇಶ್ ಬಾಬು ರವರ ಪುತ್ರಿ ಸಿತಾರಾ ಈಗಾಗಲೇ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಫೇಮಸ್ ಆಗಿದ್ದಾರೆ. ಸಿತಾರಾ ಗೆ ದೊಡ್ಡದಾದ ಅಭಿಮಾನಿ ಬಳಗವೇ ಸೋಷಿಯಲ್ ಮಿಡಿಯಾದಲ್ಲಿದೆ. ಆಕೆಯ ಪೋಸ್ಟ್ ಗಳು ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೆಂಡ್ ಆಗುತ್ತಿರುತ್ತವೆ. ಇದೀಗ ಸಿತಾರಾ ನೃತ್ಯ ಮಾಡುತ್ತಿರುವ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ಸ್ವತಃ ಮಹೇಶ್ ಬಾಬು ಶೇರ್‍ ಮಾಡಿ ಪ್ರಶಂಸೆ ಮಾಡಿದ್ದಾರೆ.

ಮಹೇಶ್ ಬಾಬು ಪುತ್ರಿ ಸಿತಾರಾ ಈಗಾಗಲೇ ಸಿನೆಮಾಗಳಲ್ಲೂ ಸಹ ಎಂಟ್ರಿ ಕೊಟ್ಟಿದ್ದಾರೆ. ಮಹೇಶ್ ಬಾಬು ರವರ ಸರ್ಕಾರು ವಾರಿ ಪಾಠ ಸಿನೆಮಾದಲ್ಲಿ ಹಾಡೊಂದಕ್ಕೆ ನೃತ್ಯ ಮಾಡಿದ್ದಾರೆ. ಇದೀಗ ಸಿತಾರಾ ನೃತ್ಯ ಮಾಡುವ ವಿಡಿಯೋ ಒಂದು ಪೋಸ್ಟ್ ಮಾಡಿದ್ದಾರೆ. ಮಹೇಶ್ ಬಾಬು ಅಭಿನಯದ ಅತಡು ಸಿನೆಮಾದಲ್ಲಿನ ಪಿಲ್ಲಗಾಲಿ ಅಲ್ಲರಿ ಎಂಬ ಹಾಡಿಗೆ ಸಿತಾರಾ ಮಾಡಿರುವ ನೃತ್ಯ ಎಲ್ಲರನ್ನೂ ಫಿದಾ ಆಗುವಂತೆ ಮಾಡಿದೆ. ಅತಡು ಸಿನೆಮಾದಲ್ಲಿ ತ್ರಿಷಾ ಈ ಹಾಡಿಗೆ ಸ್ಟೆಪ್ಸ್ ಹಾಕಿದ್ದಾರೆ. ಇದೀಗ ಸಿತಾರಾ ಸಹ ಥೇಟ್ ಅದೇ ತರಹ ಡ್ಯಾನ್ಸ್ ಮಾಡಿದ್ದಾರೆ. ಅವರಂತೆ ಎಕ್ಸ್‌ ಪ್ರೆಷನ್ಸ್ ನೀಡುತ್ತಾ ನೃತ್ಯ ಮಾಡಿದ್ದಾರೆ. ಕ್ಯೂಟ್ ಸ್ಮೈಲ್ ಕೊಡುತ್ತಾ ಆಕೆ ಹಾಕಿರುವ ಸ್ಟೆಪ್ಸ್ ಗಳು ಎಲ್ಲರನ್ನೂ ಆಕರ್ಷಣೆ ಮಾಡುತ್ತಿವೆ. ಇನ್ನೂ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರೂ ಮೆಚ್ಚುಗೆಯ ಕಾಮೆಂಟ್ ಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಇನ್ನೂ ಮಗಳ ನೃತ್ಯಕ್ಕೆ ಮಹೇಶ್ ಬಾಬು ಹಾಗೂ ನಮ್ರತಾ ಸಹ ಫಿದಾ ಆಗಿದ್ದಾರೆ. ಅವರು ತಮ್ಮ ಇನ್ಸ್ಟಾ ಗ್ರಾಂ ನಲ್ಲಿ ಈ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಇನ್ನೂ ನಮ್ರತಾ ಈ ವಿಡಿಯೋ ಶೇರ್‍ ಮಾಡಿ ನಿನ್ನ ಕಣ್ಣಿನಲ್ಲಿ ಇರುವ ತುಂಟತನ, ನಿನ್ನ ಕ್ಯೂಟ್ ನೃತ್ಯ ಎಲ್ಲರನ್ನೂ ಮೆಚ್ಚುವಂತೆ ಮಾಡುತ್ತಿದೆ ಎಂಬ ಅರ್ಥ ಬರುವಂತೆ ಕ್ಯಾಪ್ಷನ್ ಹಾಕಿದ್ದಾರೆ. ಇನ್ನೂ ಸಿತಾರಾ ಮಾಡಿದ ಈ ನೃತ್ಯಕ್ಕೆ ಯಾನಿ ಮಾಸ್ಟರ್‍ ಕೊರಿಯೋಗ್ರಫಿ ಮಾಡಿದ್ದಾರೆ. ಇನ್ನೂ ಸಿತಾರಾ ಈ ಹಿಂದೆ ಸಹ ಅನೇಕ ವಿಡಿಯೋಗಳನ್ನು ಶೇರ್‍ ಮಾಡಿದ್ದರು. ಈ ಹಿಂದೆ ಸರ್ಕಾರು ವಾರಿ ಪಾಠ ಸಿನೆಮಾದ ಕಳಾವತಿ ಹಾಡಿಗೂ ಸಹ  ನೃತ್ಯ ಮಾಡಿ ವಿಡಿಯೋ ಹಂಚಿಕೊಂಡಿದ್ದರು.

ಇನ್ನೂ ಸರ್ಕಾರಿ ವಾರಿ ಪಾಠ ಸಿನೆಮಾದ ಪೆನ್ನಿ ಪೆನ್ನಿ ಲಿರಿಕಲ್ ವಿಡಿಯೋ ಸಾಂಗ್ ನಲ್ಲೂ ಸಹ ಸಿತಾರಾ ನೃತ್ಯ ಮಾಡಿದ್ದು, ಈ ವಿಡಿಯೋ ಯೂಟೂಬ್ ನಲ್ಲಿ ರೆಕಾರ್ಡ್ ಕ್ರಿಯೇಟ್ ಮಾಡಿತ್ತು. ಇನ್ನೂ ಸಿತಾರ ನಟಿಯಾಗುವುದಕ್ಕೂ ಮುಂಚೆಯೇ ಸ್ಟಾರ್‍ ನಟಿಯರಂತೆ ಫ್ಯಾನ್ ಫಾಲೋಯಿಂಗ್ ಪಡೆದುಕೊಂಡಿದ್ದಾರೆ ಎನ್ನಬಹುದಾಗಿದೆ.

Most Popular

To Top