ತಿರುಪತಿ ತಿಮ್ಮಪ್ಪನ ದರ್ಶನ ಪಡೆದುಕೊಂಡ ಕಾಜಲ್ ಅಗರ್ವಾಲ್, ಮಗನೊಂದಿಗೆ ಮೊದಲ ಬಾರಿಗೆ ದೇವಾಲಯಕ್ಕೆ ಭೇಟಿ…..!

Follow Us :

ದಕ್ಷಿಣ ಭಾರತದ ಬಹುಬೇಡಿಕೆ ನಟಿ ಹಾಗೂ ಸ್ಟಾರ್‍ ನಟಿ ಕಾಜಲ್ ಅಗರ್ವಾಲ್ ಸಿನೆಮಾಗಳಿಂದ ದೂರ ವುಳಿದರೂ ಸಹ ಆಕೆಯ ಕ್ರೇಜ್ ಮಾತ್ರ ಕಡಿಮೆಯಾಗಿಲ್ಲ. ಇತ್ತೀಚಿಗಷ್ಟೆ ಆಕೆ ಗಂಡು ಮಗುವಿಗೆ ಜನ್ಮ ನೀಡಿದ್ದು, ಮಗುವಿನೊಂದಿಗೆ ಸಂತಸದಿಂದ ಕಾಲ ಕಳೆಯುತ್ತಿದ್ದಾರೆ. ಇದೀಗ ಸೆಕೆಂಡ್ ಇನ್ನಿಂಗ್ಸ್ ಸಹ ಶುರು ಮಾಡಿರುವ ಕಾಜಲ್ ಸದ್ಯ ಇಂಡಿಯನ್-2 ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಇನ್ನೂ ಕಾಜಲ್ ಗೆ ಮಗು ಆದ ಬಳಿಕ ಮೊದಲ ಬಾರಿಗೆ ತಿರುಪತಿ ತಿಮ್ಮಪ್ಪನ ದರ್ಶನ ಪಡೆದುಕೊಂಡಿದ್ದಾರೆ. ತಿರುಪತಿಯಲ್ಲಿ ಕಾಜಲ್ ಅಗರ್ವಾಲ್ ತನ್ನ ಮಗನೊಂದಿಗೆ ಕಾಣಿಸಿಕೊಂಡ ಕೆಲವೊಂದು ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ.

ಚಂದಮಾಮ ಕಾಜಲ್ ಅಗರ್ವಾಲ್ ಇದೀಗ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದಾರೆ. ಮದುವೆ, ಮಗು ಕಾರಣದಿಂದ ಸಿನೆಮಾಗಳಿಂದ ದೂರವುಳಿದ ಕಾಜಲ್ ಇದೀಗ ಸಿನೆಮಾಗಳಲ್ಲಿ ಮತ್ತೆ ಕಮ್ ಬ್ಯಾಕ್ ಮಾಡಿದ್ದಾರೆ. ಕಳೆದ 2020 ರಲ್ಲಿ ತನ್ನ ಸ್ನೇಹಿತ ಗೌತಮ್ ಕಿಚ್ಲು ಎಂಬಾತನನ್ನು ಮದುವೆಯಾದರು. ಇನ್ನೂ ಕಾಜಲ್ ಪತ್ನಿಯಾಗಿ, ತಾಯಿಯಾಗಿ ವೈವಾಹಿಕ ಜೀವನವನ್ನು ಹಾಗೂ ಸಿನೆಮಾಗಳನ್ನು ಸಹ ಬ್ಯಾಲೆನ್ಸ್ ಮಾಡುತ್ತಿದ್ದಾರೆ. ನಟಿ ಕಾಜಲ್ ಮಗ ಜನಿಸಿದ ಬಳಿಕ ಮಗನೊಂದಿಗೆ ಮೊದಲ ಬಾರಿಗೆ ತಿರುಮಲಕ್ಕೆ ಪ್ರಯಾಣ ಬೆಳೆಸಿದ್ದಾರೆ. ಜ.30 ರಂದು ಆಕೆ ವಿಐಪಿ ಕೋಟಾದಡಿ ತಿರುಮಲಕ್ಕೆ ತೆರಳಿ ತಿಮ್ಮಪ್ಪನ ದರ್ಶನ ಪಡೆದುಕೊಂಡಿದ್ದಾರೆ. ಇನ್ನೂ ತನ್ನ ಮುದ್ದಿನ ಮಗನನ್ನು ಎತ್ತಿಕೊಂಡು ಶ್ರದ್ದಾ ಭಕ್ತಿಯಿಂದ ವೆಂಕಟೇಶ್ವರನನ್ನು ದರ್ಶನ ಮಾಡಿಕೊಂಡಿದ್ದಾರೆ.

ಇನ್ನೂ ನಟಿ ಕಾಜಲ್ ಅಗರ್ವಾಲ್ ರವರಿಗೆ ಟಿಟಿಡಿ ಅಧಿಕಾರಿಗಳು ಹತ್ತಿರವಿದ್ದು ದೇವರ ದರ್ಶನ ಸೇರಿದಂತೆ ಇತರೆ ಸೌಲಭ್ಯಗಳನ್ನು ಕಲ್ಪಿಸಿಕೊಟ್ಟಿದ್ದಾರೆ. ಇನ್ನೂ ದೇವಾಲಯದಲ್ಲಿನ ಪೂಜಾರಿಗಳು ಕಾಜಲ್ ಗೆ ಹಾಗೂ ಆಕೆಯ ಮಗನಿಗೆ ಆರ್ಶಿವಾದ ನೀಡಿ, ತೀರ್ಥ ಪ್ರಸಾದಗಳನ್ನು ಸಹ ನೀಡಿದ್ದಾರೆ. ದೇವಾಲಯದ ಬಳಿಕ ಕಾಜಲ್ ಅಗರ್ವಾಲ್ ರನ್ನು ನೋಡಲು ಇತರೆ ಭಕ್ತರು ಮುಗಿಬೀಳುತ್ತಿದ್ದರೇ ಟಿಟಿಡಿ ಸಿಬ್ಬಂದಿ ಆಕೆಗೆ ಭದ್ರತೆ ನೀಡಿದ್ದರು. ನಟಿ ಕಾಜಲ್ ತನ್ನ ಮಗನನ್ನು ಎತ್ತಿಕೊಂಡು ದೇವಾಲಯದ ಬಳಿಕ ಬರುತ್ತಿರುವ ಕೆಲವೊಂದು ದೃಶ್ಯಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ.

ಸದ್ಯ ಕಾಜಲ್ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದು, ಶಂಕರ್‍ ಹಾಗೂ ಕಮಲ್ ಹಾಸನ್ ಕಾಂಬಿನೇಷನ್ ನಲ್ಲಿ ತೆರೆಕಾಣಲಿರುವ ಇಂಡಿಯನ್-2 ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಅದೇ ರೀತಿ ನಂದಮೂರಿ ಬಾಲಕೃಷ್ಣ ಹಾಗೂ ಅನೀಲ್ ರಾವಿಪೂಡಿ ಕಾಂಬಿನೇಷನ್ ನಲ್ಲಿ ತೆರೆಕಾಣಲಿರುವ NBK108 ಸಿನೆಮಾದಲ್ಲೂ ಸಹ ಕಾಜಲ್ ಅಗರ್ವಾಲ್ ಆಯ್ಕೆ ಆಗಿರುವುದಾಗಿ ಸುದ್ದಿಗಳು ಕೇಳಿಬರುತ್ತಿವೆ. ಜೊತೆಗೆ ಆಕೆ ಸೋಷಿಯಲ್ ಮಿಡಿಯಾದಲ್ಲೂ ಸಹ ಬ್ಯುಸಿಯಾಗಿದ್ದು ಹಾಟ್ ಪೊಟೋಶೂಟ್ಸ್ ಮೂಲಕ ಸದ್ದು ಮಾಡುತ್ತಾ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ.