ವಿರೋಧದ ನಡುವೆಯೂ ಭಾರಿ ಸಕ್ಸಸ್ ಕಂಡ ಪಠಾನ್ ಸಿನೆಮಾ, ಪಠಾನ್ ಪ್ರೆಸ್ ಮೀಟ್ ನಲ್ಲಿ ಶಾರುಖ್ ಗೆ ಸ್ಟ್ರಾಂಗ್ ಕಿಸ್ ಕೊಟ್ಟ ದೀಪಿಕಾ…!

ಪ್ರಸಕ್ತ ವರ್ಷ ಬಾಲಿವುಡ್ ಸಿನಿರಂಗಕ್ಕೆ ಪಠಾನ್ ಸಿನೆಮಾ ಒಳ್ಳೆಯ ಸಕ್ಸಸ್ ತಂದುಕೊಟ್ಟಿದೆ ಎಂದು ಹೇಳಬಹುದು. ಕಳೆದ ವರ್ಷ ಬಾಲಿವುಡ್ ನಲ್ಲಿ ತೆರೆಕಂಡ ಅನೇಕ ಸ್ಟಾರ್‍ ಗಳ ಸಿನೆಮಾಗಳು ಅಷ್ಟೊಂದು ಸಕ್ಸಸ್ ಕಾಣಲಿಲ್ಲ. ಆದರೆ ಪಠಾನ್…

ಪ್ರಸಕ್ತ ವರ್ಷ ಬಾಲಿವುಡ್ ಸಿನಿರಂಗಕ್ಕೆ ಪಠಾನ್ ಸಿನೆಮಾ ಒಳ್ಳೆಯ ಸಕ್ಸಸ್ ತಂದುಕೊಟ್ಟಿದೆ ಎಂದು ಹೇಳಬಹುದು. ಕಳೆದ ವರ್ಷ ಬಾಲಿವುಡ್ ನಲ್ಲಿ ತೆರೆಕಂಡ ಅನೇಕ ಸ್ಟಾರ್‍ ಗಳ ಸಿನೆಮಾಗಳು ಅಷ್ಟೊಂದು ಸಕ್ಸಸ್ ಕಾಣಲಿಲ್ಲ. ಆದರೆ ಪಠಾನ್ ಸಿನೆಮಾ ಒಳ್ಳೆಯ ಜಯವನ್ನೆ ಗಳಿಸಿದೆ. ಈ ಸಿನೆಮಾ ಬಿಡುಗಡೆಯಾದ ಐದು ದಿನಗಳಲ್ಲೇ ಬರೊಬ್ಬರಿ 500 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ಸುಮಾರು ವರ್ಷಗಳ ಬಳಿಕ ಬಾಲಿವುಡ್ ಬಾದ್ ಷಾ ಶಾರುಖ್ ಖಾನ್ ಗೆ ಭಾರಿ ಜಯವನ್ನು ಗಳಿಸಿಕೊಟ್ಟಿದೆ ಎನ್ನಬಹುದಾಗಿದೆ. ಇದೀಗ ಈ ಸಿನೆಮಾ ತಂಡ ಪ್ರೆಸ್ ಮೀಟ್ ಕರೆದಿದ್ದು, ಈ ವೇಳೆ ದೀಪಿಕಾ ಶಾರುಖ್ ಗೆ ಸ್ಟ್ರಾಂಗ್ ಆಗಿ ಮುತ್ತಿಟ್ಟಿದ್ದಾರೆ. ಸದ್ಯ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ.

ಬಾಲಿವುಡ್ ಕಿಂಗ್ ಖಾನ್ ಶಾರುಖ್ ಹಾಗೂ ದೀಪಿಕಾ ಪಡುಕೊಣೆ ಕಾಂಬಿನೇಷನ್ ನಲ್ಲಿ ಮೂಡಿ ಬಂದ ಪಠಾನ್ ಸಿನೆಮಾವನ್ನು ಸಿದ್ದಾರ್ಥ್ ಆನಂದ್ ನಿರ್ದೇಶನ ಮಾಡಿದ್ದಾರೆ. ಯಷ್ ರಾಜ್ ಫಿಲಂಸ್ ಬ್ಯಾನರ್‍ ನಡಿ ಈ ಸಿನೆಮಾ ಮೂಡಿಬಂದಿದೆ. ಈ ಸಿನೆಮಾ RRR, ಬಾಹುಬಲಿ-2, KGF-2 ಸಿನೆಮಾಗಳ ರೆಕಾರ್ಡ್‌ಗಳನ್ನೂ ಸಹ ಮುರಿಯುವತ್ತ ಸಾಗುತ್ತಿದೆ ಎಂದು ಹೇಳಲಾಗುತ್ತಿದೆ. ಬಾಯ್ ಕಟ್ ಪಠಾನ್ ಆಂದೋಲನದ ನಡುವೆಯೂ ಪಠಾನ್ ಒಳ್ಳೆಯ ಸಕ್ಸಸ್ ಸಾಧಿಸಿರುವುದು ವಿಶೇಷ ಎನ್ನಬಹುದಾಗಿದೆ. ಈ ಸಿನೆಮಾ ಭಾರಿ ಸಕ್ಸಸ್ ಕಂಡ ಹಿನ್ನೆಲೆಯಲ್ಲಿ ಚಿತ್ರತಂಡ ಪ್ರೆಸ್ ಮೀಟ್ ಕರೆದಿತ್ತು. ಈ ಪ್ರೆಸ್ ಮೀಟ್ ಗೆ ನಟಿ ದೀಪಿಕಾ ಪಡುಕೋಣೆ ತುಂಬಾ ಹಾಟ್ ಆಗಿ ಭಾಗಿಯಾಗಿದ್ದರು. ಆಕೆ ಧರಿಸಿದ ಗೌನ್ ನಲ್ಲಿ ಕ್ಲೀವೇಜ್ ಸೌಂದರ್ಯದೊಂದಿಗೆ ಎಲ್ಲರನ್ನೂ ಆಕರ್ಷಣೆ ಮಾಡುವುದುರ ಜೊತೆಗೆ ಪೊಟೋಗಳೂ ಸಹ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ.

ಇನ್ನೂ ಈ ಪ್ರೆಸ್ ಮೀಟ್ ನಲ್ಲಿ ದೀಪಿಕಾ ಪಡುಕೋಣೆ ಶಾರುಖ್ ನಡುವಣ ಕೆಮಿಸ್ಟ್ರಿ ಇದೀಗ ಸಿನಿವಲಯದಲ್ಲಿ ಹಾಟ್ ಟಾಪಿಕ್ ಆಗಿದೆ. ಶಾರುಖ್ ಖಾನ್ ವಿಚಾರದಲ್ಲಿ ಆಕೆ ತೆಗೆದುಕೊಂಡ ಕೇರಿಂಗ್ ತುಂಬಾನೆ ಹೆಚ್ಚಾಗಿತ್ತು ಎನ್ನಲಾಗುತ್ತಿದೆ. ಇನ್ನೂ ಶಾರುಖ್ ಖಾನ್ ಗೆ ಪ್ರೀತಿಯಿಂದ ಸ್ಟ್ರಾಂಗ್ ಕಿಸ್ ಒಂದನ್ನು ಸಹ ನೀಡಿದ್ದಾರೆ. ಸದ್ಯ ಈ ಎಲ್ಲಾ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಈ ಸಿನೆಮಾದಲ್ಲಿ ದೀಪಿಕಾ ಪಡುಕೋಣೆ ತುಂಬಾನೆ ಹಾಟ್ ಆಗಿ ಕಾಣಿಸಿಕೊಂಡಿದ್ದರು. ಆಫ್ ಸ್ಕ್ರೀನ್ ನಲ್ಲೂ ಸಹ ಈ ರೇಂಜ್ ನಲ್ಲಿ ಕೆಮಿಸ್ಟ್ರಿ ಇರತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಇದೀಗ ಆಕೆ ಕಿಸ್ ಮಾಡಿದ ಪೊಟೋಗಳಿಗೆ ನೆಟ್ಟಿಗರು ವಿವಿಧ ರೀತಿಯಲ್ಲಿ ಕಾಮೆಂಟ್ ಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಇನ್ನೂ ಪಠಾನ್ ಸಿನೆಮಾ ಬಿಡುಗಡೆಗೂ ಮುನ್ನಾ ಅನೇಕ ವಿವಾದಗಳಿಗೆ ಕಾರಣವಾಗಿತ್ತು. ಪಠಾನ್ ಸಿನೆಮಾದ ಬೇಷರಮ್ ಹಾಡಿನಲ್ಲಿ ದೀಪಿಕಾ ಪಡುಕೋಣೆ ಕೇಸರಿ ಬಣ್ಣವನ್ನು ಅಸಭ್ಯವಾಗಿ ತೋರಿಸಿದ್ದಾರೆ. ಕೇಸರಿ ಬಣ್ಣದ ಬಿಕಿನಿಯಲ್ಲಿ ಆಕೆ ಅಸಭ್ಯವಾಗಿ ನಟಿಸಿದ್ದಾರೆ ಎಂದು ಬಾಯ್ ಕಟ್ ಪಠಾನ್ ಎಂಬ ಅಭಿಯಾನವನ್ನು ಶುರು ಮಾಡಿದ್ದರು. ಬಳಿಕ ಸೆನ್ಸಾರ್‍ ಬೋರ್ಡ್ ಸಹ ಕೆಲವೊಂದು ದೃಶ್ಯಗಳನ್ನು ಬದಲಿಸಬೇಕೆಂದು ಸೂಚನೆ ನೀಡಿತ್ತು. ಅನೇಕ ವಿವಾದಗಳ ನಡುವೆ ಈ ಸಿನೆಮಾ ಭರ್ಜರಿ ಜಯಗಳಿಸಿದೆ.