Film News

ಸಮಂತಾ ಜೊತೆಗಿನ ರಿಲೇಷನ್ ಶಿಪ್ ಬಗ್ಗೆ ಕ್ಲಾರಿಟಿ ಕೊಟ್ಟ ಪ್ರೀತಂ ಜುಕಾಲ್ಕರ್, ವೈರಲ್ ಆದ ಕಾಮೆಂಟ್ಸ್……!

ಸೌತ್ ಸಿನಿರಂಗದ ಸ್ಟಾರ್‍ ನಟಿ ಸಮಂತಾ ಹಾಗೂ ಆಕೆಯ ಸ್ಟೈಲಿಷ್ಟ್ ಪ್ರೀತಂ ಜುಕಾಲ್ಕರ್‍ ನಡುವಣ ರಿಲೇಷನ್ ಶಿಪ್ ಬಗ್ಗೆ ಆತ ಕಾಮೆಂಟ್ಸ್ ಮಾಡಿದ್ದಾರೆ. ಸಮಂತಾ ಸೇರಿದಂತೆ ಅನೇಕ ಸ್ಟಾರ್‍ ನಟಿಯರಿಗೆ ಸ್ಟೈಲಿಷ್ಟ್ ಹಾಗೂ ಕಾಸ್ಟ್ಯೂಮ್ ಡಿಸೈನರ್‍ ಆಗಿದ್ದ ಪ್ರೀತಂ ಜುಕಾಲ್ಕರ್‍ ಸಮಂತಾ ಜೊತೆಗೆ ತುಂಬಾ ಕ್ಲೋಜ್ ಆಗಿದ್ದರು. ಅವರಿಬ್ಬರ ನಡುವೆ ಅಫೈರ್‍ ಇದೆ ಎಂಬ ರೂಮರ್‍ ಗಳು ಸಹ ಕೇಳಿಬಂದವು. ನಾಗಚೈತನ್ಯ ಜೊತೆಗೆ ವಿಚ್ಚೇದನ ಪಡೆದುಕೊಂಡ ಬಳಿಕ ಅವರಿಬ್ಬರೂ ತುಂಬಾ ಕ್ಲೋಜ್ ಆಗಿರುವ ಪೊಟೋಗಳೂ ಸಹ ವೈರಲ್ ಆಗಿತ್ತು. ಜೊತೆಗೆ ರೂಮರ್‍ ಗಳೂ ಸಹ ಜೋರಾಗಿಯೇ ಹರಿದಾಡುತ್ತಿದ್ದವು.

ಸಮಂತಾ ಹಾಗೂ ಪ್ರೀತಂ ನಡುವೆ ಅಫೈರ್‍ ನಡೆಯುತ್ತಿದೆ ಎಂಬ ರೂಮರ್‍ ಗಳು ಜೋರಾಗುತ್ತಿದ್ದಂತೆ ಸಮಂತಾ ಹಾಗೂ ಪ್ರೀತಂ ಇಬ್ಬರೂ ಈ ರೂಮರ್‍ ಗಳ ವಿರುದ್ದ ಕಿಡಿಕಾರಿದ್ದರು. ಎಲ್ಲವೂ ಸುಳ್ಳು ಸುದ್ದಿಯೆಂದು ತಳ್ಳಿಹಾಕಿದ್ದರು. ಆದರೆ ರೂಮರ್‍ ಗಳು ಮಾತ್ರ ನಿಂತಿಲ್ಲ. ಆಗಾಗ ಈ ರೂಮರ್‍ ಗಳು ಕೇಳಿಬರುತ್ತಲೇ ಇದೆ. ಇದೀಗ ಪ್ರೀತಂ ಮತ್ತೊಮ್ಮೆ ಮಾತನಾಡಿದ್ದಾರೆ. ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ಆತ ಕೆಲವೊಂದು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ನನ್ನ ಬಗ್ಗೆ ನಾಗಚೈತನ್ಯರವರಿಗೂ ಸಹ ಗೊತ್ತು. ಅವರ ಮನೆಗೆ ಹೋದಾಗ ತುಂಬಾ ಚೆನ್ನಾಗಿ ಆಹ್ವಾನಿಸುತ್ತಿದ್ದರು. ನಮ್ಮ ಮದ್ಯೆ ಒಳ್ಳೆಯ ರಿಲೇಷನ್ ಶಿಪ್ ಸಹ ಇತ್ತು ಎಂದು ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಯಾರಾದರೂ ಕಷ್ಟಗಳಲ್ಲಿ ಇದ್ದಾಗ ಅವರಿಗೆ ಸಪೋರ್ಟ್ ಮಾಡುವುದು ಸಾಮಾನ್ಯ. ಅದೇ ರೀತಿ ನಾನು ಸಹ ಸಮಂತಾಗೆ ಸಪೋರ್ಟ್ ಮಾಡಿದ್ದೆ. ಅಷ್ಟು ಬಿಟ್ಟರೇ ನಮ್ಮ ಮದ್ಯೆ ಯಾವುದೇ ಸಂಬಂಧವಿಲ್ಲ. ನಮ್ಮ ನಡುವೆ ಇರೋದು ಕೇವಲ ಬ್ರದರ್‍ ಅಂಡ್ ಸಿಸ್ಟರ್‍ ರಿಲೇಷನ್ ಶಿಪ್ ಮಾತ್ರ ಅದನ್ನು ಕೆಲವರು ತಪ್ಪಾಗಿ ಅರ್ಥೈಸಿಕೊಂಡರು. ಅದು ನನಗೆ ತುಂಬಾ ನೋವಾಗುವಂತೆ ಮಾಡಿತ್ತು. ನಾನು ತುಂಬಾ ಅಗ್ರೆಸೀವ್ ಏನಾದರೂ ಕಾಮೆಂಟ್ ಬಂದರೇ ತಡೆದುಕೊಳ್ಳುವುದಿಲ್ಲ. ನನ್ನ ವಿರುದ್ದ ಕಾಮೆಂಟ್ ಮಾಡಲು ಅವರು ಯಾರು. ಅವರಿಗೂ ನಮಗೂ ಏನು ಸಂಬಂಧ. ಒಂದು ಏಟು ಕೆನ್ನೆಗೆ ಬಾರಿಸಿದರೇ ನಾನು ಹತ್ತು ಬಾರಿ ಹೊಡೆಯುವಂತಹವನು.. ಆಗ ನಾನು ಅದೇ ರೀತಿ ರಿಯಾಕ್ಟ್ ಆಗುತ್ತಿದ್ದೆ. ಆದರೆ ನನ್ನ ಕೆರಿಯರ್‍ ಮೇಲೆ ಪ್ರಭಾವ ಬೀರುತ್ತೆ ಎಂದು ಕೆಲವರು ಹೇಳಿದ್ದರು.

ಜೊತೆಗೆ ನಾನು ಗೇ ಎಂದು ಕೆಲವರು ಸುದ್ದಿಗಳನ್ನು ಸಹ ಬರೆದರು. ನನ್ನ ಅನುಮತಿಯಿಲ್ಲದೇ, ನಿಜಾಂಶ ತಿಳಿಯದೇ ಆ ರೀತಿಯಾಗಿ ಹೇಗೆ ಬರೆಯುತ್ತಾರೆ. ಬಳಿಕ ನನಗೆ ತಿಳಿಯಿತು ಅದು ಪೈಡ್ ಆರ್ಟಿಕಲ್ ಎಂದು. ಕೆಲವರು ಬೇಕೆಂತಲೇ ಬರೆಸಿದ ಸ್ಟೋರಿ ಅದು. ಆದರೆ ಅದರ ಪರಿಣಾಮಗಳು ನನಗೆ ತುಂಬಾ ನೋವಾಗುವಂತೆ ಮಾಡಿತ್ತು. ಆದರೆ ನಾನು ಅಂತಹ ಕಾಮೆಂಟ್ ಗಳ ಬಗ್ಗೆ ರಿಯಾಕ್ಟ್ ಆಗುವುದಿಲ್ಲ. ಅವನ್ನು ಕಿವಿಗೆ ಸಹ ಹಾಕಿಕೊಳ್ಳುವುದಿಲ್ಲ. ಏನಾದರೂ ಒಳ್ಳೆಯದು ಮಾಡಲು ಹೋದರೇ ಇಂತಹುದೇ ಸಮಸ್ಯೆಗಳು ಬರುತ್ತವೆ ಎಂದು ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಸದ್ಯ ಅವರ ಹೇಳಿಕೆಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದೆ.

Most Popular

To Top