ಚೆಕ್ ಬೌನ್ಸ್ ಕೇಸ್ ನಲ್ಲಿ ಸಿಲುಕಿಕೊಂಡ ಅಮಿಷಾ ಪಟೇಲ್, ಮುಖ ಮುಚ್ಚಿಕೊಂಡು ಹೋದ ಹಾಟ್ ಬ್ಯೂಟಿ….!

Follow Us :

ಇತ್ತೀಚಿಗೆ ಅನೇಕ ನಟಿಯರು ವಿವಿಧ ಪ್ರಕರಣಗಳಲ್ಲಿ ಸಿಲುಕಿಕೊಂಡು ಕೋರ್ಟ್ ಮೆಟ್ಟಿಲುಗಳನ್ನು ತುಳಿಯುತ್ತಿದ್ದಾರೆ. ಅದರಲ್ಲೂ ಚೆಕ್ ಬೌನ್ಸ್ ಕೇಸ್ ಗಳಲ್ಲಿ ಅನೇಕ ನಟಿಯರು ಕೋರ್ಟ್ ಸುತ್ತುತ್ತಿದ್ದಾರೆ. ಇದೀಗ ಬಾಲಿವುಡ್ ನಟಿ ಅಮಿಷಾ ಪಟೇಲ್ ಸಹ ಚೆಕ್ ಬೌನ್ಸ್ ಕೇಸ್ ನಲ್ಲಿ ಸಿಲುಕಿಕೊಂಡಿದ್ದು, ಜೂ.17 ರಂದು ಕೋರ್ಟ್‌ಗೆ ಹಾಜರಾಗಿದ್ದಾರೆ. ಈ ವೇಳೆ ಮಿಡಿಯಾದವರ ಕಣ್ಣಿಗೆ ಬೇಳದಂತೆ ಆಕೆ ಮುಖ ಮುಚ್ಚಿಕೊಂಡು ಎಸ್ಕೇಪ್ ಆಗಿದ್ದಾರೆ. ಈ ಸಂಬಂದ ಪೊಟೋ ಒಂದು ಸೋಷಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿದೆ.

ಉದ್ಯಮಿ ಹಾಗೂ ಸಿನೆಮಾ ನಿರ್ಮಾಪಕ ಅಜಯ್ ಕುಮಾರ್‍ ಅಮಿಷಾ ಪಟೇಲ್ ವಿರುದ್ದ ಚೆಕ್ ಬೌನ್ಸ್ ಕೇಸ್ ದಾಖಲು ಮಾಡಿದ್ದರು. ಈ ಹಿಂದೆ ಸಿನೆಮಾ ನಿರ್ಮಾಣ ಮಾಡುತ್ತೇನೆ ಎಂದು ಅಮಿಷಾ ಪಟೇಲ್ ಆತನ ಬಳಿ 2.5 ಕೋಟಿ ಸಾಲ ಪಡೆದುಕೊಂಡಿದ್ದರಂತೆ. ಬಳಿಕ ಆಕೆ ಆ ಸಿನೆಮಾ ಪೂರ್ಣಗೊಳಿಸದೇ, ಆತನ ಸಾಲ ಸಹ ತೀರಿಸಲಿಲ್ಲ ಎಂದು ಕೋರ್ಟ್‌ನಲ್ಲಿ ಪ್ರಕರಣ ದಾಖಲು ಮಾಡಿದ್ದರು. ಅಸಲು ಬಡ್ಡಿ ಎರಡೂ ಸೇರಿ 3 ಕೋಟಿ ಕೊಡಿಸಿಕೊಡಬೇಕೆಂದು ಕೋರ್ಟ್ ಮೊರೆ ಹೋಗಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್ ಕಳೆದ ಏಪ್ರಲ್ 6 ರಂದು ಅಮಿಷಾ ಪಟೇಲ್ ವಾರೆಂಟ್ ಸಹ ನೀಡಲಾಗಿತ್ತು.

ಕೋರ್ಟ್ ಆದೇಶದ ಮೇರೆಗೆ ಆಕೆ ಜೂ.17 ರಂದು ಕೋರ್ಟ್‌ಗೆ ಹಾಜರಾಗಿದ್ದಾರೆ. ಬಳಿಕ ಆಕೆಗೆ ಷರತ್ತುಗಳ ಅನ್ವಯ ಜಾಮೀನು ಸಹ ಮಂಜೂರು ಮಾಡಿತ್ತು. ಇನ್ನೂ ಕೋರ್ಟ್‌ನಿಂದ ಹೊರಬಂದ ಬಳಿಕ ಆಕೆ ಜೋರಾಗಿ ಹೋಗಿದ್ದಾರೆ. ತಲೆಗೆ ಸ್ಕಾರ್ಫ್‌ ಕಟ್ಟಿಕೊಂಡು ಮಿಡಿಯಾಗೆ ಸಿಗದೇ ಹೋಗಿದ್ದಾರೆ. ಆದರೆ ಮಿಡಿಯಾದವರು ಕೋರ್ಟ್‌ನಲ್ಲಿ ಏನಾಯ್ತು ಎಂದು ಕೇಳಲು ಹಿಂದೆ ಬಿದ್ದಿದ್ದಾರೆ. ಆದರೂ ಸಹ ಆಕೆ ಯಾರನ್ನೂ ಸಹ ನೋಡದೇ ಕಾರಿನಲ್ಲಿ ಕುಳಿತು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಸದ್ಯ ಈ ಸಂಬಂಧ ಕೆಲವೊಂದು ಪೊಟೋಗಳು ಸೊಷಿಯಲ್ ಮಿಡಿಯಾದಲ್ಲಿ ವೈರಲ್ ಸಹ ಆಗುತ್ತಿವೆ.

ಇನ್ನೂ ಅಮಿಷಾ ಪಟೇಲ್ ವಯಸ್ಸಾದರೂ ಸಹ ಆಕೆ ಯಂಗ್ ಬ್ಯೂಟಿಯರನ್ನೂ ಸಹ ನಾಚಿಸುವಂತಹ ಹಾಟ್ ಟ್ರೀಟ್ ನೀಡುತ್ತಿದ್ದಾರೆ. ಇನ್ನೂ ವಯಸ್ಸು 47 ಆದರೂ ಸಹ ಆಕೆ ಇನ್ನೂ ಮದುವೆಯಾಗಿಲ್ಲ. ಸದ್ಯ ಆಕೆ ಗದರ್‍ 2 ಎಂಬ ಸಿನೆಮಾದಲ್ಲಿ ಸನ್ನಿ ಡಿಯೋಲ್ ಜೊತೆಗೆ ನಟಿಸುತ್ತಿದ್ದಾರೆ. ಇನ್ನೂ ಈ ಸಿನೆಮಾ ಇದೇ ಆಗಸ್ಟ್ 11 ರಂದು ರಿಲೀಸ್ ಆಗಲಿದೆ.