Film News

ಸಾರ್ವಜನಿಕವಾಗಿ ಹಾಟ್ ಆಗಿ ಕಾಣಿಸಿಕೊಂಡ ಮೃಣಾಲ್, ಟ್ರಾಫಿಕ್ ಜಾಮ್ ಆಗುತ್ತೆ ಎಂದ ಅಭಿಮಾನಿಗಳು….!

ಸಿನಿರಂಗದಲ್ಲಿ ಕೆಲ ನಟಿಯರು ಮೊದಲನೇ ಸಿನೆಮಾದ ಮೂಲಕವೇ ದೊಡ್ಡ ಮಟ್ಟದ ಕ್ರೇಜ್ ಸಂಪಾದಿಸಿಕೊಂಡು ಸ್ಟಾರ್‍ ಗಳಾಗುತ್ತಾರೆ. ಈ ಹಾದಿಯಲ್ಲೇ ನಟಿ ಮೃಣಾಲ್ ಠಾಕೂರ್‍ ಸೀತಾರಾಮಂ ಸಿನೆಮಾದ ಮೂಲಕ ಅದ್ಬುತವಾದ ನಟನೆಯೊಂದಿಗೆ ಓವರ್‍ ನೈಟ್ ಸ್ಟಾರ್‍ ಆದರು. ಆಕೆಯ ಸೌಂದರ್ಯ ಹಾಗೂ ಅಭಿನಯಕ್ಕೆ ಸಿನೆಮಾ ನೋಡಿದ ಎಲ್ಲರೂ ಫಿದಾ ಆಗಿದ್ದರು. ಸಿನೆಮಾಗಳಲ್ಲಿ ಒಂದು ಮಾದರಿಯಾಗಿ ಆಕೆ ಹೊರಗಿನ ಪ್ರಪಂಚದಲ್ಲಿ ಒಂದು ಮಾದರಿಯಾಗಿ ಕಾಣಿಸಿಕೊಳ್ಳುತ್ತಾರೆ. ಇದೀಗ ಸಾರ್ವಜನಿಕವಾಗಿ ಆಕೆ ತುಂಬಾನೆ ಹಾಟ್ ಆಗಿ ಕಾಣಿಸಿಕೊಂಡಿದ್ದು, ಆಕೆಯ ಪೊಟೋಗಳು ಸಖತ್ ವೈರಲ್ ಆಗುತ್ತಿವೆ.

ಯಂಗ್ ಬ್ಯೂಟಿ ಮೃಣಾಲ್ ಠಾಕೂರ್‍ ಸೀತಾರಾಮಂ ಸಿನೆಮಾದಲ್ಲಿ ಸೀರೆ, ಲೆಹಂಗಾ ದಲ್ಲೇ ಕಾಣಿಸಿಕೊಂಡರು. ಈ ಸಿನೆಮಾದಲ್ಲಿ ಆಕೆ ಸೀತಾಮಹಾಲಕ್ಷ್ಮೀ ಎಂಬ ಪಾತ್ರದಲ್ಲಿ ನಟಿಸಿದ್ದರು. ಈ ಕಾರಣದಿಂದ ಆಕೆಯನ್ನು ಅಭಿಮಾನಿಗಳು ಸೀತೆ ಎಂದು ಕರೆದರು. ಸೀತಾರಾಮಂ ಸಿನೆಮಾದಲ್ಲಿ ಒಂದು ಕಡೆ ಪ್ರಿನ್ಸೆಸ್ ನೂರ್‍ ಜಹಾನ್ ಆಗಿ ಹಿರೋ ರಾಮ್ ಪ್ರೇಯಸಿಯಾಗಿ ಸೀತಾಮಹಾಲಕ್ಷ್ಮೀಯಾಗಿ ತುಂಬಾ ಅದ್ಬುತವಾಗಿ ನಟಿಸಿದ್ದರು. ಜೊತೆಗೆ ಎಮೋಷನಲ್ ದೃಶ್ಯಗಳಲ್ಲೂ ಸಹ ಆಕೆ ತುಂಭಾ ಅದ್ಬುತವಾಗಿ ನಟಿಸಿದ್ದರು. ಇದೀಗ ಆಕೆ ಟಾಲಿವುಡ್ ಸಿನಿರಂಗದಲ್ಲಿ ಸ್ಟಾರ್‍ ನಟಿಯರ ಸಾಲಿನಲ್ಲಿ ಸೇರಿಕೊಂಡಿದ್ದಾರೆ. ಇದೀಗ ಆಕೆಗೆ ಭಾರಿ ಆಫರ್‍ ಗಳು ಹರಿದುಬರುತ್ತಿವೆ. ಆದರೆ ಸೋಷಿಯಲ್ ಮಿಡಿಯಾದಲ್ಲಿ ಮಾತ್ರ ನೆವರ್‍ ಬಿಪೋರ್‍ ಎಂಬಂತೆ ಸಖತ್ ಹಾಟ್ ಆಗಿ ಕಾಣಿಸಿಕೊಳ್ಳುತ್ತಿರುತ್ತಾರೆ.

ಇನ್ನೂ ಇತ್ತೀಚಿಗೆ ಮೃಣಾಲ್ ಮುಂಬೈನ ಬೀದಿಗಳಲ್ಲಿ ಕಾಣಿಸಿಕೊಂಡಿದ್ದಾರೆ. ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಕ್ಯಾಮೆರಾ ಕಣ್ಣಿಗೆ ಸಿಕ್ಕಿಬಿದ್ದಿದಾರೆ. ಈ ವೇಳೆ ಆಕೆ ಕ್ಯಾಜುವಲ್ ಲುಕ್ಸ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಅಷ್ಟೊಂದು ಮೇಕಪ್ ಮಾಡಿಕೊಳ್ಳದೇ ಸಹಜವಾದ ಸೌಂದರ್ಯದೊಂದಿಗೆ ಎಲ್ಲರನ್ನೂ ಆಕರ್ಷಣೆ ಮಾಡಿದ್ದಾರೆ. ಲೂಜ್ ಲಾಂಗ್ ಫ್ರಾಕ್ ನಲ್ಲಿ ಟಾಪ್ ಸೌಂದರ್ಯ ಶೋ ಮಾಡಿದ್ದಾರೆ. ಕ್ಯೂಟ್ ಲುಕ್ಸ್ ನೊಂದಿಗೆ ಕ್ಯೂಟ್ ಸ್ಮೈಲ್ ಕೊಡುತ್ತಾ ಬರುತ್ತಿದ್ದರೇ, ಆಕೆಯ ಅಭಿಮಾನಿಗಳು ಹಾಗೂ ಕ್ಯಾಮೆರಾಮೆನ್ ಗಳು ಪೊಟೋಗಳನ್ನು ತೆಗೆಯಲು ಹಿಂದೆ ಬಿದ್ದಿದ್ದಾರೆ. ಎಲ್ಲರಿಗೂ ಕ್ಯೂಟ್ ಸ್ಮೈಲ್ ಕೊಡುತ್ತಾ ಹೋಗಿದ್ದಾರೆ. ಇನ್ನೂ ಆಕೆಯ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಸಾರ್ವಜನಿಕವಾಗಿ ಈ ರೀತಿಯಾಗಿ ಬಂದರೇ ಟ್ರಾಫಿಕ್ ಜಾಮ್ ಖಚಿತ ಎಂದು ಅನೇಕ ಕಾಮೆಂಟ್ ಗಳು ಹರಿದುಬರುತ್ತಿವೆ.

ಇನ್ನೂ ಸೀತಾರಾಮಂ ಸಿನೆಮಾದಲ್ಲಿ ತುಂಬಾ ಸಂಪ್ರದಾಯವಾಗಿ ಕಾಣಿಸಿಕೊಂಡ ಮೃಣಾಲ್ ಸೋಷಿಯಲ್ ಮಿಡಿಯಾದಲ್ಲಿ ಮಾತ್ರ ತುಂಬಾನೆ ಮಾಡ್ರನ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ ಮೃಣಾಲ್ ಟಾಲಿವುಡ್ ನ್ಯಾಚುರಲ್ ಸ್ಟಾರ್‍ ನಾನಿ ಜೊತೆಗೆ Nani30 ಸಿನೆಮಾ ಸೇರಿದಂತೆ ಬಾಲಿವುಡ್ ನಲ್ಲೂ ಸಹ ನಾಲ್ಕೈದು ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಜೊತೆಗೆ ಆಕೆ ಲಸ್ಟ್ ಸ್ಟೋರಿಸ್-2 ನಲ್ಲೂ ಸಹ ನಟಿಸಿದ್ದಾರೆ.

Most Popular

To Top