Film News

ಬಹುನಿರೀಕ್ಷಿತ ಪುಷ್ಪಾ-2 ಸಿನೆಮಾದ ಶೂಟಿಂಗ್ ಸೆಟ್ ನಿಂದ ಪೊಟೋ ಲೀಕ್, ವೈರಲ್ ಆದ ಪೊಟೋ…!

ಸ್ಟೈಲಿಷ್ ಸ್ಟಾರ್‍ ಅಲ್ಲು ಅರ್ಜುನ್ ಹಾಗೂ ಖ್ಯಾತ  ನಿರ್ದೇಶಕ ಸುಕುಮಾರ್‍ ಸಾರಥ್ಯದಲ್ಲಿ ಮೂಡಿಬಂದಂತಹ ಪುಷ್ಪಾ ಸಿನೆಮಾ ಭಾರಿ ಸಕ್ಸಸ್ ಕಂಡುಕೊಂಡಿದೆ. ಪ್ಯಾನ್ ಇಂಡಿಯಾ ಸಿನೆಮಾ ಆದ ಪುಷ್ಪಾ ಭಾರಿ ಕಲೆಕ್ಷನ್ ಮಾಡಿದೆ. ಈ ಸಿನೆಮಾ ಕೇವಲ ತೆಲುಗಿನಲ್ಲಿ ಮಾತ್ರವಲ್ಲೇ ಬೇರೆ ಭಾಷೆಗಳಲ್ಲೂ ಸಹ ಸಖತ್ ಕ್ರೇಜ್ ಪಡೆದುಕೊಂಡಿದೆ. ಇಂದಿಗೂ ಸಹ ಈ ಸಿನೆಮಾದ ಹಾಡುಗಳು ಹಾಗೂ ಡೈಲಾಗ್ ಗಳು ಪ್ರಚಲಿತದಲ್ಲಿದೆ. ಈ ಸಿನೆಮಾದ ಹಾಡುಗಳಿಗೆ ಸಿನೆಮಾ ಸ್ಟಾರ್‍ ಗಳು ಮಾತ್ರವಲ್ಲದೇ ವಿವಿಧ ರಂಗಗಳ ಸೆಲೆಬ್ರೆಟಿಗಳೂ ಸಹ ಹೆಜ್ಜೆ ಹಾಕಿರುವುದು ವಿಶೇಷ ಎನ್ನಬಹುದಾಗಿದೆ. ಇದೀಗ ಪುಷ್ಪಾ-2 ಸಿನೆಮಾದ ಶೂಟಿಂಗ್ ಶುರುವಾಗಿದ್ದು, ಭರದಿಂದ ಶೂಟಿಂಗ್ ನಡೆಯುತ್ತಿದೆ.

ಪುಷ್ಪಾ ಸಿನೆಮಾದ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್‍ ಆದರು ಅಲ್ಲು ಅರ್ಜುನ್. ಇದೀಗ ಪುಷ್ಪಾ-2 ಸಿನೆಮಾದ ಮೇಲೆ ತುಂಬಾನೆ ನಿರೀಕ್ಷೆ ಹುಟ್ಟಿದೆ. ಕೆಲವು ದಿನಗಳಿಂದ ಪುಷ್ಪಾ-2 ಸಿನೆಮಾದ ಮೊದಲನೇ ಷೆಡ್ಯೂಲ್ಡ್ ಶುರುವಾಗಿದೆ. ಸದ್ಯ ಅಲ್ಲು ಅರ್ಜುನ್ ಹಾಗೂ ಸಿನೆಮಾದ ಕೆಲ ಕಲಾವಿದರು ವಿಶಾಖಪಟ್ಟಣದಲ್ಲಿ ನಡೆಯುತ್ತಿರುವ ಶೂಟಿಂಗ್ ನಲ್ಲಿ ಭಾಗಿಯಾಗಿದ್ದಾರೆ. ಈ ಶೂಟಿಂಗ್ ನಲ್ಲಿ ಅಲ್ಲು ಅರ್ಜುನ್ ರವರ ಪೊಟೋ ಒಂದು ಲೀಕ್ ಆಗಿದೆ. ಸಿನೆಮಾದಲ್ಲಿನ ಪಾತ್ರದ ಕಾಸ್ಟ್ಯೂಮ್ ಧರಿಸಿ, ಚೇರ್‍ ನಲ್ಲಿ ಕುಳಿತಿರುವ ಪೊಟೋ ಒಂದು ಸೊಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಇನ್ನೂ ಈ ಪೊಟೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಸಹ ಕೆಲವೊಂದು ಸೂಚನೆಗಳನ್ನು ನೀಡುತ್ತಿದ್ದಾರೆ. ಚಿತ್ರತಂಡ ಇಂತಹ ಲೀಕ್ ಗಳು ಆಗದಂತೆ ಎಚ್ಚರಿಕೆ ವಹಿಸಬೇಕೆಂದು ಹೇಳುತ್ತಿದ್ದಾರೆ.

ಇನ್ನೂ ಪುಷ್ಪಾ-1 ಸಿನೆಮಾ ಶೂಟಿಂಗ್ ವೇಳೆ ಸಹ ಅನೇಕ ಬಾರಿ ಇಂತಹದೇ ಲೀಕ್ ಗಳು ನಡೆದಿತ್ತು. ಸಿನೆಮಾದ ಶೂಟಿಂಗ್ ಸಮಯದಲ್ಲಿ ಕೆಲ ಹಾಡುಗಳ, ಆಕ್ಷನ್ ದೃಶ್ಯಗಳ ಪೊಟೋಗಳು ಸಹ ಲೀಕ್ ಆಗಿತ್ತು. ದಾಕ್ಕೋ ದಾಕ್ಕೋ ಮೇಕ ಎಂಬ ಹಾಡನ್ನು ಕೆಲವರು ಮೊಬೈಲ್ ನಲ್ಲಿ ಚಿತ್ರೀಕರಿಸಿ ಸೋಷಿಯಲ್ ಮಿಡಿಯಾದಲ್ಲಿ ಲೀಕ್ ಮಾಡಿದ್ದರು. ಜೊತೆಗೆ ಆಕ್ಷನ್ ದೃಶ್ಯಗಳನ್ನು ಎಡಿಟಿಂಗ್ ರೂಮ್ ನಿಂದಲೇ ತೆಗೆದು ವೈರಲ್ ಮಾಡಿದ್ದರು. ಈ ಕಾರಣದಿಂದ ಚಿತ್ರತಂಡ ಪೊಲೀಸರ ಮೊರೆ ಸಹ ಹೋಗಿದ್ದರು. ಇದೀಗ ಪುಷ್ಪಾ-2 ಸಿನೆಮಾದಿಂದಲೂ ಸಹ ಮತ್ತೆ ಲೀಕ್ ಗಳು ಆಗುತ್ತಿರುವುದು ಅಭಿಮಾನಿಗಳು ಹಾಗೂ ಚಿತ್ರತಂಡವನ್ನು ಚಿಂತೆಗೀಡು ಮಾಡಿದೆ.

ಇದೀಗ ಚಿತ್ರತಂಡ ಈ ಬಗ್ಗೆ ಎಂತಹ ಜಾಗ್ರತೆಗಳನ್ನು ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಇನ್ನೂ ಪುಷ್ಪಾ ಸಿನೆಮಾದ ದೃಶ್ಯಗಳು ಲೀಕ್ ಆದರೂ ಸಹ ಸಿನೆಮಾ ಮಾತ್ರ ಇಡೀ ವಿಶ್ವದಾದ್ಯಂತ ಭಾರಿ ಸಕ್ಸಸ್ ಕಂಡಿದೆ. ಇದೀಗ ಪುಷ್ಪಾ-2 ಸಿನೆಮಾದ ಮೇಲೂ ಸಹ ಭಾರೀ ನಿರೀಕ್ಷೆ ಹುಟ್ಟಿದೆ. ಪುಷ್ಪಾ-2 ಸಿನೆಮಾದಲ್ಲಿ ಅನೇಕ ಸ್ಟಾರ್‍ ನಟರು ಬಣ್ಣ ಹಚ್ಚಲಿದ್ದಾರೆ ಎಂದೂ ಸಹ ಹೇಳಲಾಗುತ್ತಿದೆ.

Most Popular

To Top