Film News

ಆ ಸಿನೆಮಾಗಾಗಿ ದಿನಕ್ಕೆ ಐದಾರು ಗಂಟೆ ಜಿಮ್ ಮಾಡುತ್ತಿದ್ದರಂತೆ ನಟಿ ರಾಶಿ ಖನ್ನಾ….!

ನಟಿ ರಾಶಿ ಖನ್ನಾ ತೆಲುಗಿನ ಊಹಲು ಗುಸಗುಸಲಾಡೆ ಎಂಬ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಈ ಸಿನೆಮಾದ ಮೂಲಕವೇ ಆಕೆ ಅನೇಕರ ಯುವಕರ ಕನಸಿನ ರಾಣಿಯಾದರು. ಒಳ್ಳೆಯ ಕ್ರೇಜ್ ಪಡದುಕೊಂಡ ಈಕೆಗೆ ಇತ್ತೀಚಿಗೆ ಕೊಂಚ ಅವಕಾಶಗಳೂ ಸಹ ಕಡಿಮೆಯಾಗಿದೆ ಎನ್ನಲಾಗುತ್ತಿದೆ. ಆದರೂ ಸಹ ಟ್ರೆಂಡ್ ಗೆ ತಕ್ಕಂತೆ ಕೆಲವೊಂದು ಸಿನೆಮಾಗಳಲ್ಲಿ ನಟಿಸುತ್ತಾ ಕರಿಯರ್‍ ಸಾಗಿಸುತ್ತಿದ್ದಾರೆ. ಇದೀಗ ಆಕೆ ಸಿನೆಮಾ ಒಂದಕ್ಕಾಗಿ ದಿನಕ್ಕೆ ಐದಾರು ಗಂಟೆಗಳ ಕಾಲ ಜಿಮ್ ಮಾಡುತ್ತಿದ್ದರಂತೆ. ಆ ಸಿನೆಮಾಗಾಗಿ ಆಕೆ ಪಟ್ಟ ಕಷ್ಟಗಳ ಬಗ್ಗೆ ರಿವೀಲ್ ಮಾಡಿದ್ದಾರೆ.

ನಟಿ ರಾಶಿ ಖನ್ನಾ ಸೌತ್ ಸಿನಿರಂಗದ ಬ್ಯೂಟಿಪುಲ್ ನಟಿಯರಲ್ಲಿ ಒಬ್ಬರಾಗಿದ್ದಾರೆ. ನಟಿಯಾಗಿ ಅನೇಕ ಸಿನೆಮಾಗಳಲ್ಲಿ ಕಾಣಿಸಿಕೊಂಡಿರುವ ಈಕೆಗೆ ಇತ್ತಿಚಿಗೆ ಅವಕಾಶಗಳು ಕಡಿಮೆಯಾಗಿದೆ. ನಟಿಸಿದ ಸಿನೆಮಾಗಳೂ ಸಹ ಅಷ್ಟೊಂದು ಸಕ್ಸಸ್ ಆಗುತ್ತಿಲ್ಲ. ಈ ಕಾರಣದಿಂದ ಆಕೆ ಕೆಲವೊಂದು ಪ್ರಯೋಗಾತ್ಮಕ ಸಿನೆಮಾಗಳಲ್ಲಿ, ವೆಬ್ ಸೀರಿಸ್ ಗಳತ್ತ ಮುಖ ಮಾಡಿದ್ದಾರೆ. ಇನ್ನೂ ಈ ಸಿನೆಮಾಗಳಿಗಾಗಿ ಆಕೆ ತುಂಬಾನೆ ಕಷ್ಟಪಡುತ್ತಿದ್ದಾರೆ ಎನ್ನಲಾಗಿದೆ. ಈ ಹಾದಿಯಲ್ಲೇ ಆಕೆ ಸಿದ್ದಾರ್ಥ್ ಮೆಲ್ಹೋತ್ರಾ ಅಭಿನಯದ ಯೋಧ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ಆಕೆ ವಿಜಯ್ ಸೇತುಪತಿ, ಷಾಹಿದ್ ಕಪೂರ್‍, ಅಮೋಲ್ ಪಾಲೇಕರ್‍ ಜೊತೆಗೆ ಫರ್ಜಿ ಎಂಬ ವೆಬ್ ಸೀರಿಸ್ ನಲ್ಲೂ ಸಹ ನಟಿಸುತ್ತಿದ್ದಾರೆ. ಈ ವೆಬ್ ಸಿರೀಸ್ ಫೆಬ್ರವರಿ 10 ರಿಂದ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗಲಿದ್ದು, ಈ ಸಂಬಂಧ ಕೆಲವೊಂದು ವಿಚಾರಗಳನ್ನು ರಾಶಿ ಖನ್ನಾ ಹಂಚಿಕೊಂಡಿದ್ದಾರೆ.

ಮಿಡಿಯಾದೊಂದಿಗೆ ಮಾತನಾಡಿರುವ ರಾಶಿ ಖನ್ನಾ ಫರ್ಜಿ ವೆಬ್ ಸೀರಿಸ್ ನಲ್ಲಿ ನನ್ನ ಪಾತ್ರ ತುಂಬಾನೆ ವಿಭಿನ್ನವಾಗಿರುತ್ತದೆ. ಕಳ್ಳ ನೋಟುಗಳಿಗೆ ಸಂಬಂಧಿಸಿದ ರಹಸ್ಯಗಳನ್ನು ಬೇದಿಸುವಂತಹ ಅಧಿಕಾರಿಯ ಪಾತ್ರದಲ್ಲಿ ನಟಿಸಿದ್ದೇನೆ. ಈ ಪಾತ್ರ ನಿಜ ಎಂಬಂತೆ ಇರುತ್ತದೆ. ಈ ಸೀರಿಸ್ ನೋಡಿ ಫೇಕ್ ಕರೆನ್ಸಿ ಬಗ್ಗೆ ಅನೇಕ ವಿಚಾರಗಳನ್ನು ತಿಳಿಯಬಹುದು. ನಮ್ಮ ಸುತ್ತಲೂ ನಡೆಯುವಂತಹ ಅಪರಾಧಗಳ ಬಗ್ಗೆ ಅವಗಾಹನೆ ಪಡೆಯಬಹುದು. ನಕಲಿ ಕರೆನ್ಸಿ ಬಗ್ಗೆ ಸಮಾಚಾರಗಳನ್ನು ನೀಡುವ ಪ್ರಯತ್ನ ಮಾಡಿದ್ದೇವೆ. ಇನ್ನೂ ಫರ್ಜಿ ಸಿರೀಸ್ ನನ್ನ ಎರಡನೇ ವೆಬ್ ಸಿರೀಸ್ ಆಗಿದೆ. ಇದಕ್ಕು ಮುಂಚೆ ರುದ್ರ ದಿ ಎಡ್ಜ್ ಆಫ್ ಡಾರ್ಕ್‌ನೆಸ್ ಸಿರೀಸ್ ನನಗೆ ತುಂಬಾ ಒಳ್ಳೆಯ ಹೆಸರು ತಂದುಕೊಟ್ಟಿದೆ. ಆಕ್ಷನ್ ದೃಶ್ಯಗಳಲ್ಲಿ ನಟಿಸಲು ಸ್ಟಾಮಿನ ಇರಬೇಕು. ಮಾನಸಿಕವಾಗಿಯೂ, ಶಾರೀರಿಕವಾಗಿಯೂ ಸ್ಟ್ರಾಂಗ್ ಆಗಿರಬೇಕು. ಈ ಸಿನೆಮಾಗಾಗಿ ನಾನು ತುಂಬಾನೆ ಕಷ್ಟಪಡುತ್ತಿದ್ದೆ. ಜಿಮ್ ನಲ್ಲಿ ಸುಮಾರು ಐದಾರು ಗಂಟೆಗಳ ಕಾಲ ವರ್ಕೌಟ್ ಮಾಡುತ್ತಿದ್ದೆ. ಆದರೆ ಫರ್ಜಿ ಸಿನೆಮಾಗಾಗಿ ನಾನು ಮನಸ್ಸಿಟ್ಟು ಕಷ್ಟಪಟ್ಟಿದ್ದೇನೆ ಎಂದಿದ್ದಾರೆ.

ಇನ್ನೂ ರಾಶಿಕ ಖನ್ನಾ ಷಾಹಿದ್ ಹಾಗೂ ವಿಜಯ್ ಸೇತುಪತಿ ಜೊತೆಗೆ ನಟಿಸಿರುವು ತುಂಬಾ ಸಂತೋಷವಾಗಿ ಫೀಲ್ ಆಗಿದ್ದಾರಂತೆ. ವಿಜಯ್ ಸೇತುಪತಿಯವರು ತುಂಬಾ ಅದ್ಬುತವಾಗಿ ನಟಿಸಿದ್ದಾರೆ. ಇದೀಗ ಫರ್ಜಿ ಸಿರೀಸ್ ತುಂಬಾ ನಿರೀಕ್ಷೆ ಹುಟ್ಟಿಸಿದೆ. ಬಾಲಿವುಡ್ ನಲ್ಲಿ ಮದ್ರಾಸ್ ಕೆಫ್ ಎಂಬ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ರಾಶಿ 12 ವರ್ಷಗಳ ಬಳಿಕ ಬಾಲಿವುಡ್ ಗೆ ರೀ ಎಂಟ್ರಿ ಕೊಟ್ಟಿದ್ದಾರೆ.

Most Popular

To Top