ಬುಟ್ಟಬೊಮ್ಮ ಪೂಜಾಹೆಗ್ಡೆ ಆ ನಟಿಯನ್ನು ಕಂಡು ಭಯಪಡುತ್ತಿದ್ದಾರಂತೆ? ಆ ನಟಿ ಯಾರು?

Follow Us :

ಸೌತ್ ಅಂಡ್ ನಾರ್ತ್ ಸಿನಿರಂಗದಲ್ಲಿ ಬಹುಬೇಡಿಕೆಯುಳ್ಳ ನಟಿಯರಲ್ಲಿ ಪೂಜಾ ಹೆಗ್ಡೆ ಒಬ್ಬರಾಗಿದ್ದಾರೆ. ಸಿನಿರಂಗದಲ್ಲಿ ಹ್ಯಾಟ್ರಿಕ್ ಸೋಲು ಕಂಡರೂ ಸಹ ಕ್ರೇಜಿ ಆಫರ್‍ ಗಳನ್ನು ದಕ್ಕಿಸಿಕೊಂಡು ಕೀರ್ತಿ ಸಹ ಈಕೆಗೆ ಸಲ್ಲುತ್ತದೆ. ಕಳೆದ ವರ್ಷ ಪೂಜಾ ಅಭಿನಯದ ಎಲ್ಲಾ ಸಿನೆಮಾಗಳು ಬಾಕ್ಸ್ ಆಫಿಸ್ ನಲ್ಲಿ ಮಕಾಡೆ ಮಲಗಿತ್ತು. ಇದೀಗ ಆಕೆ ತ್ರಿವಿಕ್ರಮ್ ಹಾಗೂ ಮಹೇಶ್ ಬಾಬು ಕಾಂಬಿನೇಷನ್ ನಲ್ಲಿ ಮೂಡಿ ಬರುತ್ತಿರುವ SSMB28 ಸಿನೆಮಾದಲ್ಲಿ ನಟಿಸುತ್ತಿದ್ದು, ಈ ಸಿನೆಮಾದ ಮೇಲೆ ತುಂಬಾ ನಿರೀಕ್ಷೆಯನ್ನು ಪೂಜಾ ಇಟ್ಟುಕೊಂಡಿದ್ದಾರೆ ಎನ್ನಲಾಗುತ್ತಿದೆ.

ಇನ್ನೂ ಮಹೇಶ್ ಬಾಬು ರವರ ಕುಟುಂಬದಲ್ಲಿ ಸಾಲು ಸಾಲು ಮರಣಗಳು ಸಂಭವಿಸಿತ್ತು, ಅವರ ತಾಯಿ, ತಂದೆ, ಅಣ್ಣ ಕಳೆದ ವರ್ಷವಷ್ಟೆ ಮೃತಪಟ್ಟರು. ಈ ಕಾರಣದಿಂದ ಈ ಸಿನೆಮಾದ ಶೂಟೀಂಗ್ ಸಹ ತಡವಾಗುತ್ತಾ ಸಾಗಿತ್ತು. ಇದೀಗ ಈ ಸಿನೆಮಾದ ಶೂಟಿಂಗ್ ಹೈದರಾಬಾದ್ ನಲ್ಲಿ ನಡೆಯುತ್ತಿದೆ. ಈಗಾಗಲೇ ಕೆಲವೊಂದು ಆಕ್ಷನ್ ದೃಶ್ಯಗಳನ್ನು ಸಹ ಚಿತ್ರಿಕರಣ ಮಾಡಿದ್ದು, ಶೀಘ್ರದಲ್ಲೇ ಮುಂದಿನ ಶೆಡ್ಯೂಲ್ಡ್ ಸಹ ಪ್ರಾರಂಭವಾಗಲಿದೆ. ಈ ಶೆಡ್ಯೂಲ್ಡ್ ನಲ್ಲಿ ಸ್ಪೇಷಲ್ ಹೌಸ್ ಒಂದನ್ನು ಸಹ ನಿರ್ಮಾಣವಾಗಲಿದೆಯಂತೆ. ಈ ಶೆಡ್ಯೂಲ್ಡ್ ನಲ್ಲಿ ಮಹೇಶ್ ಬಾಬು ಹಾಗೂ ಸಿನೆಮಾದಲ್ಲಿನ ನಟಿಯರಾದ ಪೂಜಾ ಹೆಗ್ಡೆ ಹಾಗೂ ಶ್ರೀಲೀಲಾ ರವರಿಗೆ ಸಂಬಂಧಿಸಿದ ದೃಶ್ಯಗಳನ್ನು ಚಿತ್ರೀಕರಣ ಮಾಡಲಾಗುತ್ತದೆ ಎಂದು ಹೇಳಲಾಗುತ್ತಿದೆ.

ಇನ್ನೂ ಈ ಸಿನೆಮಾದಲ್ಲಿ ಮೊದಲಿಗೆ ಪೂಜಾ ಹೆಗ್ಡೆ ಮಾತ್ರ ಇದ್ದರು. ಆದರೆ ಮಹೇಶ್ ಬಾಬು ರವರು ಸ್ಕ್ರಿಪ್ಟ್ ಬದಲಿಸಿ ಎಂದು ಹೇಳಿದ್ದರಂತೆ. ಬಳಿಕ ಈ ಸಿನೆಮಾದಲ್ಲಿ ಇಬ್ಬರು ನಾಯಕಿಯರಾದರು. ಪೂಜಾ ಹೆಗ್ಡೆ ಯವರ ಜೊತೆಗೆ ಎರಡನೇ ನಟಿಯಾಗಿ ಶ್ರೀಲೀಲಾ ಸಹ ಸೇರಿಕೊಂಡರು. ಮೊದಲಿಗೆ ಶ್ರೀಲೀಲಾ ಪಾತ್ರಕ್ಕೆ ಅಷ್ಟೊಂದು ಆದ್ಯತೆಯಿರುವುದಿಲ್ಲ ಎನ್ನಲಾಗಿತ್ತು. ಆದರೆ ಇದೀಗ ಕೇಳಿಬರುತ್ತಿರುವ ಸುದ್ದಿಯಂತೆ ಇಬ್ಬರೂ ನಟಿಯರಿಗೂ ಸಹ ಸಮನಾದ ಆದ್ಯತೆಯಿರುತ್ತದೆ ಎನ್ನಲಾಗುತ್ತಿದೆ. ಇನ್ನೂ ಅವರಿಬ್ಬರು ಮುಂದಿನ ಶೆಡ್ಯೂಲ್ಡ್ ನ ಶೂಟಿಂಗ್ ನಲ್ಲಿ ಭಾಗಿಯಾಗಲಿದ್ದಾರೆ. ಇದೀಗ ಪೂಜಾ  ಹೆಗ್ಡೆಗೆ ಇದೇ ನಟಿಯಿಂದ ಭಯ ಹುಟ್ಟಲಿದೆ ಎಂಬ ಮಾತುಗಳು ಸಿನಿವಲಯದಲ್ಲಿ ಕೇಳಿಬರುತ್ತಿದೆ.

ಇನ್ನೂ ಪೂಜಾ ಹೆಗ್ಡೆ ತೆಲುಗು ಸಿನಿರಂಗಕ್ಕೆ ಎಂಟ್ರಿ ಕೊಟ್ಟು ಅನೇಕ ವರ್ಷಗಳು ಕಳೆದಿದೆ. ಆದರೆ ಶ್ರೀಲೀಲಾ ಈಗಷ್ಟೆ ಟಾಲಿವುಡ್ ನಲ್ಲಿ ಸ್ಟಾರ್‍ ಡಮ್ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಈ ಕಾರಣದಿಂದಲೇ ಪೂಜಾ ಹೆಗ್ಡೆ ಗಿಂತಲೂ ಶ್ರೀಲೀಲಾ ಈ ಸಿನೆಮಾದಲ್ಲಿ ಕ್ರೆಡಿಟ್ ಹೆಚ್ಚು ಪಡೆದುಕೊಳ್ಳಬಹುದು ಎಂದು ಇದೇ ಕಾರಣದಿಂದ ಪೂಜಾ ಹೆಗ್ಡೆ ಭಯಪಡುತ್ತಿದ್ದಾರೆ ಎಂಬ ಪ್ರಚಾರ ನಡೆಯುತ್ತಿದೆ.