ನಾಗಚೈತನ್ಯ-ಸಮಂತಾ ವಿಚ್ಚೇದನದ ಗುಟ್ಟು ರಟ್ಟಾಯ್ತಾ? ಪೋನ್ ಟ್ಯಾಪಿಂಗ್ ಕಾರಣದಿಂದ ವಿಚ್ಚೇದನವಾಯ್ತಾ?

Follow Us :

ಸ್ಟಾರ್‍ ಜೋಡಿಯಾಗಿದ್ದ ನಟಿ ಸಮಂತಾ ಹಾಗೂ ನಟ ನಾಗಚೈತನ್ಯ ಪ್ರೀತಿಸಿ ವಿವಾಹವಾದರು. ಆದರೆ ಅವರಿಬ್ಬರ ನಡುವೆ ವಿಬೇದಗಳು ಹುಟ್ಟಿಕೊಂಡ ಕಾರಣದಿಂದ ಅವರಿಬ್ಬರು ವಿಚ್ಚೇದನ ಪಡೆದುಕೊಂಡು ಸದ್ಯ ಸೊಲೋ ಲೈಫ್ ಲೀಡ್ ಮಾಡುತ್ತಿದ್ದಾರೆ. ವಿಚ್ಚೇದನ ಪಡೆದುಕೊಂಡು ತಿಂಗಳುಗಳು ಕಳೆದರು ಅವರ ವಿಚ್ಚೇದನಕ್ಕೆ ಸರಿಯಾದ ಕಾರಣ ಏನು ಎಂಬುದು ಮಾತ್ರ ಯಾರಿಗೂ ತಿಳಿದಿರಲಿಲ್ಲ. ಇದೀಗ ಈ ಜೋಡಿಯ ವಿಚ್ಚೇದನಕ್ಕೆ ಪೋನ್ ಟ್ಯಾಪಿಂಗ್ ಮುಖ್ಯ ಕಾರಣ ಎಂದು ಹೇಳಲಾಗುತ್ತಿದೆ.

ತೆಲಂಗಾಣ ರಾಜ್ಯದ ರಾಜಕೀಯದಲ್ಲಿ ದೊಡ್ಡ ಮಟ್ಟದಲ್ಲೇ ಸಂಚಲನ ಸೃಷ್ಟಿಸಿರುವ ಪೋನ್ ಟ್ಯಾಪಿಂಗ್ ಅನೇಕ ಚರ್ಚೆಗಳಿಗೆ ಕಾರಣವಾಗುತ್ತಿದೆ. ಈ ಪೋನ್ ಟ್ಯಾಪಿಂಗ್ ಕಾರಣದಿಂದಲೇ ನಾಗಚೈತನ್ಯ ಹಾಗೂ ಸಮಂತಾ ವಿಚ್ಚೇದನ ಪಡೆದುಕೊಂಡಿದ್ದಾರೆ ಎನ್ನಲಾಗುತ್ತಿದೆ. ಈ ಪ್ರಕರಣ ಬೆಳಕಿಗೆ ಬಂದಾಗಿನಿಂದ ತೆಲುಗು ಸಿನಿರಂಗದ ತಾರಾ ಜೋಡಿಯ ವಿಚ್ಚೇದನಕ್ಕೆ ಪೋನ್ ಟ್ಯಾಪಿಂಗ್ ಕಾರಣ ಎಂದು ಹೇಳಲಾಗುತ್ತಿತ್ತು. ಆದರೆ ಆ ಜೋಡಿ ಯಾವುದು ಎಂಬುದು ಮಾತ್ರ ತಿಳಿದುಬಂದಿಲ್ಲ. ಆದರೆ ಇತ್ತೀಚಿಗೆ ಹರಿದಾಡುತ್ತಿರುವ ಸುದ್ದಿಗಳಂತೆ ಆ ತಾರಾ ಜೋಡಿ ಬೇರೆ ಯಾವುದೂ ಅಲ್ಲಾ ನಾಗಚೈತನ್ಯ-ಸಮಂತಾ ಜೋಡಿ ಎಂದು ಹೇಳಲಾಗುತ್ತಿದೆ. ಈ ಕುರಿತು ಸೋಷಿಯಲ್ ಮಿಡಿಯಾ, ಕೆಲವೊಂದು ಯೂಟ್ಯೂಬ್ ಚಾನಲ್ ಗಳಲ್ಲಿ ಸುದ್ದಿ ಹರಿದಾಡುತ್ತಿದೆ.

ತೆಲಂಗಾಣ ರಾಜ್ಯದಲ್ಲಿ ಪೋನ್ ಟ್ಯಾಫಿಂಗ್ ಭಾರಿ ಸದ್ದು ಮಾಡುತ್ತಿದೆ. ಸಮಂತಾ ಹಾಗೂ ನಾಗಚೈತನ್ಯ ವಿಚ್ಚೇದನಕ್ಕೆ ಪೋನ್ ಟ್ಯಾಪಿಂಗ್ ಕಾರಣ ಎಂದು ಹೇಳಲಾಗುತ್ತಿದೆ. ನಾಗಚೈತನ್ಯ ವರ್ತನೆ ಮೇಲೆ ಸಮಂತಾ ರವರಿಗೆ ಅನುಮಾನವಿದ್ದ ಕಾರಣದಿಂದ ಅಂದಿನ ಸರ್ಕಾರದಲ್ಲಿ ಪ್ರಭಾವ ಇರುವಂತಹ ವ್ಯಕ್ತಿಯೊಬ್ಬರ ಸಹಾಯ ಪಡೆದು ನಾಗಚೈತನ್ಯ ಪೋನ್ ಟ್ಯಾಪ್ ಮಾಡಿಸಿದ್ದರೆ ಎಂದು ಸುದ್ದಿ ಹರಿದಾಡುತ್ತಿದೆ. ಈ ಸುದ್ದಿಯಲ್ಲಿ ಎಷ್ಟು ಸತ್ಯಾಂಶ ಇದೆ ಎಂಬುದು ಇನ್ನಷ್ಟೆ ತಿಳಿದುಬರಬೇಕಿದೆ. ಆದರೆ ಸುದ್ದಿ ಮಾತ್ರ ಕೆಲವೊಂದು ಯೂಟ್ಯೂಬ್ ಚಾನಲ್ ಹಾಗೂ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಹರಿದಾಡುತ್ತಿದೆ.

ಇನ್ನೂ ಪೋನ್ ಟ್ಯಾಪಿಂಗ್ ಪ್ರಕರಣ ತೆಲಂಗಾಣ ರಾಜ್ಯ ರಾಜಕೀಯದಲ್ಲಿ ಭಾರಿ ಕೋಲಾಹಲ ಸೃಷ್ಟಿಸಿದೆ. ಈಗಾಗಲೇ ಪೊಲೀಸ್ ಇಲಾಖೆಯ ಇಬ್ಬರು ಉನ್ನತ ಮಟ್ಟದ ಅಧಿಕಾರಿಗಳನ್ನು ಬಂಧನ ಮಾಡಲಾಗಿದೆ ಜೊತೆಗೆ ರಾಜ್ಯ ಗುಪ್ತಚರ ಇಲಾಖೆಯ ಮುಖ್ಯಸ್ಥನ ವಿರುದ್ದ ನೋಟೀಸ್ ಸಹ ಜಾರಿ ಮಾಡಲಾಗಿದೆ. ಹಾಲಿ ಸಿಎಂ ರೇವಂತ್ ರೆಡ್ಡಿ ರವರ ಪೋನ್ ಸಹ ಕದ್ದಾಲಿಕೆ ಮಾಡಲಾಗಿತ್ತು. ಅನೇಕ ರಾಜಕಾರಣಿಗಳು, ಉದ್ಯಮಿಗಳು, ಸಿನೆಮಾ ಸೆಲೆಬ್ರೆಟಿಗಳ ಪೋನ್ ಕದ್ದಾಲಿಕೆ ಮಾಡಿ ಬ್ಲಾಕ್ ಮೇಲ್ ಮಾಡಿ ಹಣ ವಸೂಲಿ ಸಹ ಮಾಡಲಾಗಿತ್ತು ಎಂದು ಹೇಳಲಾಗುತ್ತಿದೆ.