News

ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣದ ಪ್ರಮುಖ ಆರೋಪಿ ಬಂಧನ…!

ಕೆಲವು ದಿನಗಳ ಹಿಂದೆಯಷ್ಟೆ ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಪೋಟಗೊಂಡು ಹಲವರು ಗಾಯಗೊಂಡಿದ್ದರು. ಈ ಪ್ರಕರಣ ರಾಜ್ಯದಲ್ಲಿ ಗಂಭೀರ ಪರಿಣಾಮ ಪಡೆದುಕೊಂಡಿತ್ತು. ಈ ಬಾಂಬ್ ಬ್ಲಾಸ್ಟ್ ಪ್ರಕರಣದ ಪ್ರಮುಖ ಆರೋಪಿ ಮುಜಾಮುಲ್ ಶರೀಫ್ ಎಂಬಾತನನ್ನು ಎನ್.ಐ.ಎ ಅಧಿಕಾರಿಗಳು ಬಂಧನ ಮಾಡಿದ್ದಾರೆ. ಮೂರು ರಾಜ್ಯಗಳಲ್ಲಿ ಅನೇಕ ಕಡೆ ದಾಳಿ ನಡೆಸಿದ ರಾಷ್ಟ್ರೀಯ ತನಿಖಾ ಸಂಸ್ಥೆ ಪ್ರಮುಖ ಆರೋಪಿಯನ್ನು ಬಂಧನ ಮಾಡಿದ್ದಾರೆ. ಈ ಕುರಿತು ಪ್ರತಿಷ್ಟಿತ ಮಾದ್ಯಮ ಸಂಸ್ಥೆ NIA ಟ್ವೀಟ್ ಮಾಡಿದೆ.

NIA ತಂಡಗಳು ಕರ್ನಾಟಕದ 12, ಉತ್ತರ ಪ್ರದೇಶದ 1, ತಮಿಳುನಾಡಿನ 5 ಸ್ಥಳಗಳೂ ಸೇರಿದಂತೆ 18 ಸ್ಥಳಗಳಲ್ಲಿ ದಾಳಿ ನಡೆಸಿತ್ತು. ಬಳಿಕ ಮುಜಾಮಿಲ್ ಶರೀಫ್ ಎಂಬ ಆರೋಪಿಯನ್ನು ಬಂಧಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರೂ ಆರೋಪಿಗಳಿಗೆ ಮುಜಾಮಿಲ್ ಶರೀಫ್ ಕೀ ಕಾಂನ್ಸಪರೇಟರ್‍ ಆಗಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ. ಮುಜಾಮಿಲ್ ಶರೀಫ್ ಎನ್ನುವಾತ ರಾಮೇಶ್ವರಂ ಕೆಫೆ ಬ್ಲಾಸ್ಟ್ ಗೆ ಬಳಸಿದ್ದ ಬಾಂಬ್ ತಯಾರಿಕೆಯ ಪ್ರಮುಖ ಆರೋಪಿಯಾಗಿದ್ದಾನೆ.

ಈ ಪ್ರಕರಣದಲ್ಲಿ ಬಾಂಬ್ ಇಟ್ಟ ಉಗ್ರ ಮುಸಾವೀರ್‍ ಹುಸೇನ್ ಗೆ ಮುಜಾಮಿಲ್ ಶರೀಫ್ ತುಂಬಾ ಆಪ್ತನಾಗಿದ್ದ ಎನ್ನಲಾಗಿದೆ. ತನಿಖೆ ವೇಳೆ ಸಂಚು ರೂಪಿಸಿರುವುದು ಸಹ ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ಮುಜಾಮಿಲ್ ಶರೀಪ್ ನನ್ನು ಬಂಧನ ಮಾಡಿದ್ದಾರೆ. ಮುಸಾವೀರ್‍ ಹುಸೇನ್, ಅಬ್ದುಲ್ ಮತೀನ್ ರಾಮೇಶ್ವರಂ ಕೆಫೆಯಲ್ಲಿ ಬ್ಲಾಸ್ಟ್ ಮಾಡಲು ಸಂಚು ರೂಪಿಸಿದ್ದರು. ಸದ್ಯ ಮುಸಾವೀರ್‍ ಹುಸೇನ್ ಹಾಗೂ ಮತೀನ್ ತಾಹಾ ತಲೆಮರೆಸಿಕೊಂಡಿದ್ದು, ಅವರನ್ನೂ ಸಹ ಪತ್ತೆಹಚ್ಚಲು ತನಿಖಾ ತಂಡ ಕಾರ್ಯಾಚರಣೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.

Most Popular

To Top