ನಮ್ಮ ತಾಯಿಯನ್ನು ಮದುವೆಯಾಗಲು ಹುಡುಗರು ರೆಡಿಯಿಲ್ಲ, ಒಳ್ಳೆಯ ಅಂಕುಲ್ ಬೇಕು ಎಂದ ಸುರೇಖಾವಾಣಿ ಪುತ್ರಿ ಸುಪ್ರೀತಾ…..!

Follow Us :

ತೆಲುಗಿನ ಅನೇಕ ಸಿನೆಮಾಗಳಲ್ಲಿ ವಿವಿಧ ಪಾತ್ರಗಳಲ್ಲಿ ನಟಿಸಿ ಫೇಂ ಪಡೆದುಕೊಂಡ ಕ್ಯಾರೆಕ್ಟರ್‍ ಆರ್ಟಿಸ್ಟ್ ಸುರೇಖಾವಾಣಿ ಸೋಷಿಯಲ್ ಮಿಡಿಯಾದಲ್ಲಂತೂ ತುಂಬಾನೆ ಫೇಮಸ್ ಆಗಿದ್ದಾರೆ. ಆಕೆ ಸೋಷಿಯಲ್ ಮಿಡಿಯಾದಲ್ಲಿ ಸದಾ ಸುದ್ದಿಯಾಗುತ್ತಿರುತ್ತಾರೆ. ಸುರೇಖಾವಾಣಿಗೆ ಸುಪ್ರಿತಾ ಎಂಬ ಮಗಳೂ ಸಹ ಇದ್ದಾಳೆ. ಆಕೆ ಸಹ ಸೋಷಿಯಲ್ ಮಿಡಿಯಾದಲ್ಲಿ ಭಾರಿ ಕ್ರೇಜ್ ಪಡೆದುಕೊಂಡಿದ್ದಾರೆ. ಇಬ್ಬರೂ ಸೋಷಿಯಲ್ ಮಿಡಿಯಾದಲ್ಲಿ ದೊಡ್ಡ ಮಟ್ಟದಲ್ಲೇ ಹಂಗಾಮ ಸೃಷ್ಟಿಸುತ್ತಿರುತ್ತಾರೆ. ಇದೀಗ ಆಕೆ ತನ್ನ ತಾಯಿಗೆ ಎರಡನೇ ಮದುವೆ ಮಾಡುವುದಾಗಿ ಹೇಳಿದ್ದು, ಆಕೆಯ ಕಾಮೆಂಟ್ ಗಳು ವೈರಲ್ ಆಗುತ್ತಿವೆ.

ಸೀನಿಯರ್‍ ನಟಿ ಸುರೇಖಾವಾಣಿ ಪತಿ ಕಳೆದ 2019 ರಲ್ಲಿ ಅನಾರೋಗ್ಯದ ಕಾರಣದಿಂದ ಮೃತಪಟ್ಟರು. ಅಂದಿನಿಂದ ಸುರೇಖಾವಾಣಿ ಒಂಟಿಯಾಗಿಯೇ ಜೀವನ ಸಾಗಿಸುತ್ತಿದ್ದಾರೆ. ಈ ನಡುವೆ ಆಕೆ ಎರಡನೇ ಮದುವೆಯಾಗಲಿದ್ದಾರೆ ಎಂಬ ರೂಮರ್‍ ಗಳು ಆಗಾಗ ಕೇಳಿಬರುತ್ತಲೆ ಇದೆ. ಸೋಷಿಯಲ್ ಮಿಡಿಯಾದಲ್ಲಂತೂ ಸದಾ ಆಕೆಯ ಎರಡನೇ ಮದುವೆಯ ಬಗ್ಗೆ ಸುದ್ದಿ ಹರಿದಾಡುತ್ತಲೇ ಇರುತ್ತದೆ. ಅನೇಕ ಬಾರಿ ಅಂತಹ ಸುಳ್ಳು ಸುದ್ದಿಗಳನ್ನು ಹರಿಬಿಡಬೇಡಿ ಎಂದು ಸುರೇಖಾವಾಣಿ ಪುತ್ರಿ ಅಸಹನ ವ್ಯಕ್ತಪಡಿಸಿದ್ದರು. ಈ ಹಿಂದೆ ಸುರೇಖಾವಾಣಿ ಡೇಟಿಂಗ್, ಮದುವೆ ಬಗ್ಗೆ ಒಪೆನ್ ಆಗಿದ್ದರು. ನಾನು ಮದುವೆಯಾಗದೇ ಇದ್ದರೂ ಸಹ ಇಷ್ಟವಾದ ವ್ಯಕ್ತಿ ಸಿಕ್ಕರೇ ಡೇಟಿಂಗ್ ಮಾಡೋಕೆ ರೆಡಿ ಎಂದೂ ಸಹ ಹೇಳಿದ್ದರು. ಇದೀಗ ಸುಪ್ರೀತಾ ತನ್ನ ತಾಯಿಗೆ ಎರಡನೇ ಮದುವೆ ಮಾಡುವ ಬಗ್ಗೆ ಕಾಮೆಂಟ್ ಮಾಡಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಸುಪ್ರೀತಾ ತನ್ನ ತಾಯಿಯ ಎರಡನೇ ಮದುವೆಯ ಬಗ್ಗೆ ಮಾತನಾಡಿದ್ದಾರೆ. ಆಂಕರ್‍ ನಿಮ್ಮ ತಾಯಿಗೆ ಎರಡನೇ ಮದುವೆ ಮಾಡುವ ಉದ್ದೇಶ ಇದೆಯೇ ಎಂದು ಕೇಳಿದ್ದಾರೆ. ಅದಕ್ಕೆ ಸುಪ್ರೀತಾ ಉತ್ತರಿಸಿದ್ದಾರೆ. ನಮ್ಮ ತಾಯಿಗೆ ಮತ್ತೆ ಮದುವೆ ಮಾಡಬೇಕು ಅಂತಾ ಅಂದುಕೊಂಡಿದ್ದೇನೆ. ಆದರೆ ಯುವಕರು ಮದುವೆಯಾಗೋಕೆ ಸಿದ್ದರಿಲ್ಲ. ನಮ್ಮ ತಾಯಿಗೆ ಅಂಕುಲ್ಸ್ ಸೆಟ್ ಆಗುತ್ತಾರೆ. ಆಕೆಯನ್ನು ಚೆನ್ನಾಗಿ ನೋಡುಕೊಳ್ಳುವ, ಕೆಟ್ಟ ಆಲೋಚನೆಗಳು ಇಲ್ಲದಂತಹ ಅಂಕುಲ್ ಸಿಕ್ಕರೇ ಕಂಡಿತವಾಗಿ ಮದುವೆ ಮಾಡುತ್ತೇನೆ. ಅಮತಹ ವ್ಯಕ್ತಿಗಾಗಿ ಹುಡುಕುತ್ತಿದ್ದೇನೆ ಎಂದಿದ್ದಾರೆ. ಈ ಹಿಂದೆ ಸುರೇಖಾವಾಣಿ ಎರಡನೇ ಮದುವೆಯ ಬಗ್ಗೆ ಕೇಳಿದರೇ ಆಕ್ರೋಷಗೊಂಡಿದ್ದಂತಹ ಸುಪ್ರೀತಾ ಇದೀಗ ತನ್ನ ತಾಯಿಗೇ ಮದುವೆ ಮಾಡಲು ಸಿದ್ದರಾಗಿರುವ ಬಗ್ಗೆ ಹೇಳಿದ್ದಾರೆ. ಆಕೆಯ ಈ ಕಾಮೆಂಟ್ ಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ.

ಇನ್ನೂ ಸುಪ್ರೀತಾ ಇದೀಗ ನಟಿಯಾಗಿ ಎಂಟ್ರಿ ಕೊಡುತ್ತಿದ್ದಾರೆ. ಬಿಗ್ ಬಾಸ್‌ ಫೇಂ ಅಮರ್‍ ದೀಪ್ ಹಿರೋ ಆಗಿ ಸೆಟ್ಟೇರುತ್ತಿರುವ ರೊಮ್ಯಾಂಟಿಕ್ ಲವ್ ಎಂಟರ್‍ ಟೈನ್ ಮೆಂಟ್ ಸಿನೆಮಾದಲ್ಲಿ ಸುಪ್ರೀತಾ ನಾಯಕಿಯಾಗಿ ಬಣ್ಣ ಹಚ್ಚಲಿದ್ದಾರೆ. ಈ ಸಿನೆಮಾದ ಶೂಟಿಂಗ್ ಭರದಿಂದ ಸಾಗುತ್ತಿತ್ತು. ಶೀಘ್ರದಲ್ಲೇ ತೆರೆಕಾಣಲಿದೆ.