News

ವಾಟ್ಸಾಪ್ ನಲ್ಲಿ ಬಂದು ನಗ್ನ ವಿಡಿಯೋ ಕಾಲ್, ಲಕ್ಷ ಲಕ್ಷ ಕೊಡುವಂತೆ ಬ್ಲಾಕ್ ಮೇಲ್ ಮಾಡಿದ ಖದೀಮರು…..!

ಇಂದಿನ ತಂತ್ರಜ್ಞಾನ ಯುಗದಲ್ಲಿ ಸೋಷಿಯಲ್ ಮಿಡಿಯಾ ಎಷ್ಟು ಉಪಯುಕ್ತವೋ ಅಷ್ಟೇ ಅಪಾಯಕಾರಿಯಾಗುತ್ತಿದೆ ಎನ್ನಬಹುದಾಗಿದೆ. ಸೋಷಿಯಲ್ ಮಿಡಿಯಾ ಬಳಸಿಕೊಂಡು ಅನೇಕ ಖದೀಮರು ಅಮಾಯಕರ ಬಳಿ ಹಣ ಪೀಕುತ್ತಿದ್ದಾರೆ. ಅದೇ ಮಾದರಿಯಲ್ಲಿ ಯುವಕನೊಬ್ಬನಿಗೆ ವಾಟ್ಸಾಪ್ ನಲ್ಲಿ ಬೆತ್ತಲೆ ವಿಡಿಯೋ ಕಾಲ್ ಮಾಡಿದ್ದು, ಅದನ್ನು ರೆಕಾರ್ಡ್ ಮಾಡಿಕೊಂಡ ಖದೀಮರು ಲಕ್ಷ ಲಕ್ಷ ಪೀಕಿದ್ದಾರೆ.

ಹುಬ್ಬಳಿಯ ವ್ಯಕ್ತಿಯೊಬ್ಬನಿಗೆ ವಾಟ್ಸಾಪ್ ಮೂಲಕ ಅಪರಿಚತರು ಮೆಸೇಜ್ ಮಾಡಿದ್ದಾರೆ. ಈ ಮೆಸೇಜ್ ಗೆ ಆ ವ್ಯಕ್ತಿ ಪ್ರತಿಕ್ರಿಯೆ ನೀಡಿದ್ದಾನೆ. ಬಳಿಕ ಲೈಂಗಿಕ ಸಂದೇಶವೊಂದು ಬಂದಿದ್ದು, ಬಳಿಕ ನಗ್ನ ವಿಡಿಯೋ ಕಾಲ್ ಬಂದಿದೆ. ಮಹಿಳೆಯೊಬ್ಬರಿಂದ ಬೆತ್ತಲೆಯಾಗಿ ವಿಡಿಯೋ ಕರೆ ಮಾಡಿಸಿದ್ದಾರೆ. ವಂಚನೆಗೆ ಒಳಗಾದ ವ್ಯಕ್ತಿ ವಿಡಿಯೋ ಕಾಲ್ ನಲ್ಲಿ ಮಾತನಾಡುತ್ತಿದ್ದಂತೆ ವಂಚಕರು ವಿಡಿಯೋ ಕಾಲ್ ರೆಕಾರ್ಡ್ ಮಾಡಿಕೊಂಡಿದ್ದಾರೆ. ಬಳಿಕ ಆತನಿಗೆ 11 ಸಾವಿರ ಹಣ ಮಾಡುವಂತೆ ಬ್ಲಾಕ್ ಮೇಲ್ ಮಾಡಿದ್ದಾರೆ. ಹಣ ಕೂಡಲೇ ಕಳುಹಿಸದೇ ಇದ್ದರೇ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದಾರೆ. ಇದನ್ನು ನಿರಾಕರಿಸಿದ ವ್ಯಕ್ತಿಗೆ ದೆಹಲಿ ಪೊಲೀಸರಂತೆ ಕರೆ ಮಾಡಿ ಬೆದರಿಕೆ ಹಾಕಿದ್ದಾರೆ. ವಿಡಿಯೋ ಡಿಲೀಟ್ ಮಾಡಲು ಹಣ ಕೇಳಿದ್ದಾರೆ. ಬಳಿಕ ಮೋಸಹೋದ ವ್ಯಕ್ತಿ ಹಣ ವರ್ಗಾಸಿದ್ದಾರೆ.

ವಂಚನೆಗೆ ಒಳಗಾದ ವ್ಯಕ್ತಿ ಮರ್ಯಾದೆಗೆ ಅಂಜಿ ಮೊದಲು 9 ಸಾವಿರ ಹಣ ಬಳಿಕ 19 ಸಾವಿರ, ಬಳಿಕ 57 ಸಾವಿರ ಬಳಿಕ 1.60 ರೂಪಾಯಿ ವರ್ಗಾವಣೆ ಮಾಡಿದ್ದಾನೆ. ಆದರೂ ಸಹ ಸುಮ್ಮನ್ನಾಗ ವಂಚಕರು ಮತ್ತೆ 2.5 ಲಕ್ಷ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಬಳಿಕ ತಾನು ವಂಚನೆಗೆ ತುತ್ತಾಗಿದ್ದಾನೆ ಎಂದು ಅರಿವಾಗಿ ಸೈಬರ್‍ ಪೊಲೀಸರಿಗೆ ದೂರು ನೀಡಿದ್ದಾರೆ. ಹುಬ್ಬಳಿಯ ಸೈಬರ್‍ ಠಾಣೆಯಲ್ಲಿ ದೂರು ನೀಡಿ ವಂಚಕರಿಂದ ತನಗೆ ಮುಕ್ತಿ ಕೊಡಿಸಿ ನನ್ನ ಹಣವನ್ನು ವಾಪಸ್ಸು ಕೊಡುವಂತೆ ಮನಿವ ಮಾಡಿದ್ದಾರೆ. ಈ ರೀತಿಯ ವಂಚನೆಗಳು ಇತ್ತೀಚಿಗೆ ಹೆಚ್ಚಾಗಿ ನಡೆಯುತ್ತಿದೆ. ಯಾವುದೇ ಅಪರಿಚಿತರು ಸಂದೇಶಗಳನ್ನು ಕಳುಹಿಸಿದರೇ ಅಂತಹ ಸಂದೇಶಗಳನ್ನು ನಿರಾಕರಿಸಿದರೇ ಒಳಿತು.

Most Popular

To Top