ಒಂದು ಕ್ಲಿಕ್ ಮಾಡಿದೇ ಎರಡು ಲಕ್ಷ ಕಳೆದುಕೊಂಡೆ ಎಂದು ಕಣ್ಣೀರಿಟ್ಟ ಬಿಗ್ ಬಾಸ್ ಸ್ಪರ್ಧಿ ಕೀರ್ತಿ ಭಟ್…..!

Follow Us :

ಇಂಟರ್‍ ನೆಟ್ ಬಳಕೆ ಹೆಚ್ಚಾದಂತೆಲ್ಲಾ ಸೈಬರ್‍ ಕಳ್ಳರ ಕಾಟ ಹೆಚ್ಚಾಗುತ್ತಿದೆ. ಅವಿದ್ಯಾವಂತರ ಜೊತೆಗೆ ವಿದ್ಯಾವಂತರೂ ಸಹ ಸೈಬರ್‍ ಕಳ್ಳರ ಮೋಸದ ಜಾಲದಲ್ಲಿ ಸಿಲುಕುತ್ತಿದ್ದಾರೆ. ಇದೀಗ ಬಿಗ್ ಬಾಸ್ ಫೇಂನ  ಕೀರ್ತಿ ಭಟ್ ಸಹ ಸೈಬರ್‍ ಕಳ್ಳರ ವಂಚನೆಗೆ ಬಲಿಯಾಗಿದ್ದಾರೆ. ಒಂದು ಕ್ಲಿಕ್ ಮಾಡಿ ಎರಡು ಲಕ್ಷ ಕಳೆದುಕೊಂಡೆ ಎಂದು ಕಣ್ಣೀರಿಡುತ್ತಾ ವಿಡಿಯೋ ಒಂದನ್ನು ತಮ್ಮ ಯೂಟ್ಯೂಬ್ ಚಾನಲ್ ನಲ್ಲಿ ಹಂಚಿಕೊಂಡಿದ್ದಾರೆ.

ಬಿಗ್ ಬಾಸ್ ಬ್ಯೂಟಿ ಕೀರ್ತಿ ಭಟ್ ಈ ಕುರಿತು ವಿಡಿಯೋ ಹಂಚಿಕೊಂಡು ತಮ್ಮ ನೋವನ್ನು ವ್ಯಕ್ತಪಡಿಸಿದ್ದಾರೆ. ವಿಡಿಯೋದಲ್ಲಿ ಮಾತನಾಡುತ್ತಾ ನನಗೆ ಪಾರ್ಸಲ್ ಒಂದು ಬರಬೇಕಿತ್ತು. ಅದನ್ನು ಟ್ರಾಕ್ ಮಾಡುತ್ತಿದೆ. ಅಷ್ಟರೊಳಗೆ ನನಗೆ ಒಂದು ಕರೆ ಬಂತು. ನೀವು ಪಾರ್ಸಲ್ ಗಾಗಿ ಎದುರು ನೋಡುತ್ತಿದ್ದೀರಾ ಅಲ್ಲವೇ ಎಂದು ಕೇಳಿದ್ದಾರಂತೆ, ಅದಕ್ಕೆ ನಾನು ಹೌದು ಎಂದು ಹೇಳಿದೆ. ಬಳಿಕ ನನಗೆ ಒಂದು ಲಿಂಕ್ ಕಳುಹಿಸಿದ್ದರು, ಅದನ್ನು ಕ್ಲಿಕ್ ಮಾಡಿದ ಕೂಡಲೇ ಎರಡು ರೂಪಾಯಿ ಕಟ್ ಆಗಿತ್ತು. ಎರಡು ರೂಪಾಯಿ ಅಷ್ಟೆ ಅಲ್ಲವೇ ಎಂದು ಸುಮ್ಮನಾಗಿದ್ದೆ. ಆದರೆ ಒಂದು ಬಾರಿ 90 ಸಾವಿರ ಮತ್ತೊಮ್ಮೆ 90 ಸಾವಿರ ಹೀಗೆ 2 ಲಕ್ಷ ಕಟ್ ಆಗಿದೆ ಎಂಬ ಸಂದೇಶ ಬಂತು. ಕೂಡಲೇ ನಾನು ಕಾರ್ತಿಕ್ ಗೆ ಹೇಳಿದೆ. ಆತ ಸೈಬರ್‍ ಕ್ರೈಂ ನಲ್ಲಿ ದೂರು ನೀಡೋಣ ಎಂದು ಹೇಳಿದ. ಅಕೌಂಟ್ ಬ್ಲಾಕ್ ಮಾಡಿ ಸೈಬರ್‍ ಕ್ರೈಂ ಪೊಲೀಸರಿಗೆ ದೂರು ನೀಡಲಾಯಿತು.

ಬಳಿಕ ಪೊಲೀಸರು 90% ನಿಮ್ಮ ಹಣ ವಾಪಸ್ಸು ಬರುತ್ತದೆ ಎಂದು ಆಶ್ವಾಸನೆ ಸಹ ನೀಡಿದ್ದಾರಂತೆ. ಹೀಗೆ ನನ್ನನ್ನು ಚಾಣಕ್ಷತೆಯಿಂದ ಸೈಬರ್‍ ಕಳ್ಳರು ಮೋಸ ಮಾಡಿದ್ದಾರೆ. ನೀವು ಸಹ ಎಚ್ಚರಿಕೆಯಿಂದ ಇರಬೇಕೆಂದು ಸೂಚನೆ ನೀಡಿದ್ದಾರೆ. ಇನ್ನೂ ಕೀರ್ತಿ ಭಟ್ ಸೀರಿಯಲ್ ಗಳ ಮೂಲಕ ಫೇಂ ಪಡೆದುಕೊಂಡರು. ಅನೇಕರಿಗೆ ಈಕೆ ಬಗ್ಗೆ ಹೆಚ್ಚಿನ ಪರಿಚಯದ ಅವಶ್ಯಕತೆಯಿಲ್ಲ ಎಂದೇ ಹೇಳಬಹುದು. ಅದರಲ್ಲೂ ಬಿಗ್ ಬಾಸ್ ಸೀಸನ್ 6 ರಲ್ಲಿ ಭಾಗಿಯಾಗಿದ್ದ ಕೀರ್ತಿ ಸ್ಟ್ರಾಂಗ್ ಸ್ಪರ್ಧಿಯಾಗಿದ್ದರು. ಫೈನಲ್ ವರೆಗೂ ತಲುಪಿದ ಆಕೆ ನಾಲ್ಕನೇ ಸ್ಥಾನ ಪಡೆದುಕೊಂಡಿದ್ದರು. ಸದ್ಯ ಆಕೆ ಮಧುರಾನಗರಿಲೋ ಎಂಬ ಸೀರಿಯಲ್ ನಲ್ಲಿ ನಟಿಸುತ್ತಿದ್ದಾರೆ. ಇತ್ತೀಚಿಗಷ್ಟೆ ಆಕೆ ಕಾರ್ತಿಕ್ ಎಂಬ ಯುವಕನನ್ನು ಪ್ರೀತಿಸಿ, ಎಂಗೇಜ್ ಮೆಂಟ್ ಸಹ ಮಾಡಿಕೊಂಡಿದ್ದರು. ಶೀಘ್ರದಲ್ಲೇ ಈ ಜೋಡಿಯ ಮದುವೆ ಸಹ ನೆರವೇರಲಿದೆ ಎಂದು ಹೇಳಲಾಗುತ್ತಿದೆ.