ವಿದೇಶದಿಂದ ಬಂದ ಸುರೇಖಾವಾಣಿ, ಮಗಳನ್ನು ನೋಡಿದ ಕೂಡಲೇ ಕುಣಿದು ಕುಪ್ಪಳಿಸಿದ ನಟಿ, ವೈರಲ್ ಆದ ವಿಡಿಯೋ……!

Follow Us :

ಇತ್ತೀಚಿಗೆ ಬಹುತೇಕ ಎಲ್ಲಾ ನಟಿಯರು ಸೋಷಿಯಲ್ ಮಿಡಿಯಾದಲ್ಲಿ ಪುಲ್ ಆಕ್ಟೀವ್ ಆಗಿರುತ್ತಾರೆ. ಸ್ಟಾರ್‍ ನಟಿಯರಿಂದ ಕ್ಯಾರೆಕ್ಟರ್‍ ಆರ್ಟಿಸ್ಟ್ ಗಳೂ ಪುಲ್ ಆಕ್ಟೀವ್ ಆಗಿರುತ್ತಾರೆ. ಸೀನಿಯರ್‍ ನಟಿ ಸುರೇಖಾವಾಣಿ ಸಹ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಆಕ್ಟೀವ್ ಆಗಿರುತ್ತಾರೆ. ಅದರಲ್ಲೂ ಸುರೇಖಾವಾಣಿ ಹಾಗೂ ಆಕೆಯ ಪುತ್ರಿ ಸುಪ್ರೀತಾ ಸೋಷಿಯಲ್ ಮಿಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿರುತ್ತಾರೆ. ಶೂಟಿಂಗ್ ನಿಮಿತ್ತ ವಿದೇಶಕ್ಕೆ ಹಾರಿದ್ದ ಸುರೇಖಾವಾಣಿ ಇದೀಗ ವಾಪಸ್ಸಾಗಿದ್ದು, ವಿಮಾನ ನಿಲ್ದಾಣದ ಬಳಿ ಮಗಳನ್ನು ಕಂಡು ಕುಣಿದು ಕುಪ್ಪಳಿಸಿದ್ದು, ವಿಡಿಯೋ ಸಖತ್ ವೈರಲ್ ಆಗುತ್ತಿದೆ.

ಬಹುಬೇಡಿಕೆಯುಳ್ಳ ಕ್ಯಾರೆಕ್ಟರ್‍ ಆರ್ಟಿಸ್ಟ್ ಗಳಲ್ಲಿ ಸುರೇಖಾ ವಾಣಿ ಸಹ ಒಬ್ಬರು. ಅನೇಕ ಸಿನೆಮಾಗಳಲ್ಲಿ ಈಕೆ ತಮ್ಮ ನಟನೆಯ ಮೂಲಕ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಹ ಗಳಿಸಿಕೊಂಡಿದ್ದಾರೆ. ಎಂತಹುದೇ ಪಾತ್ರ ನೀಡಿದರು ಆಕೆ ನಿಭಾಯಿಸಬಲ್ಲ ಕಲೆ ಹೊಂದಿದ್ದಾಳೆ. ಇತ್ತೀಚಿಗೆ ಸೋಷಿಯಲ್ ಮಿಡಿಯಾದಲ್ಲಿ ಹಲ್ ಚಲ್ ಸೃಷ್ಟಿ ಮಾಡುತ್ತಿರುತ್ತಾರೆ. ಸುರೇಖಾವಾಣಿ ಆಕೆಯ ಪುತ್ರಿಯೊಂದಿಗೆ ಸೋಷಿಯಲ್ ಮಿಡಿಯಾದಲ್ಲಿ ಕೆಲವೊಂದು ಪೋಸ್ಟ್ ಗಳನ್ನು ಹಂಚಿಕೊಳ್ಳುತ್ತಾ ಸುದ್ದಿಯಾಗುತ್ತಿರುತ್ತಾರೆ. ತಾಯಿ ಮಗಳು ಇಬ್ಬರೂ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಹವಾ ಸೃಷ್ಟಿ ಮಾಡುತ್ತಿರುತ್ತಾರೆ. ಕೆಲವು ದಿನಗಳ ಹಿಂದೆಯಷ್ಟೆ ಆಕೆ ಶೂಟಿಂಗ್ ನಿಮಿತ್ತ ನ್ಯೂಜಿಲ್ಯಾಂಡ್ ಗೆ ಹೋಗಿದ್ದರು. ಇದೀಗ ತಾಯ್ನಾಡಿಗೆ ಮರಳಿದ್ದು, ವಿಮಾನ ನಿಲ್ದಾಣದಲ್ಲಿ ಮಗಳನ್ನು ಕಂಡ ಸುರೇಖಾವಾಣಿ ಪುಲ್ ಖುಷಿಯಾಗಿ ಕುಣಿದು ಕುಪ್ಪಳಿಸಿದ್ದಾರೆ.

ಟಾಲಿವುಡ್ ನಟ ಮಂಚು ವಿಷ್ಣು ನಟಿಸುತ್ತಿರುವ ಬಿಗ್ ಬಜೆಟ್ ಪ್ಯಾನ್ ಇಂಡಿಯಾ ಸಿನೆಮಾ ಕನ್ನಪ್ಪ ಸಿನೆಮಾದಲ್ಲಿ ಸುರೇಖಾವಾಣಿ ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಈ ಸಿನೆಮಾ ಶೂಟಿಂಗ್ ನಿಮಿತ್ತ ಸುರೇಖಾವಾಣಿ ಸಹ ನ್ಯೂಜಿಲ್ಯಾಂಡ್ ಗೆ ಟೀಂ ನೊಂದಿಗೆ ಹೋಗಿದ್ದರು. ತನ್ನ ಭಾಗದ ಶೂಟಿಂಗ್ ಮುಗಿಸಿದ ಸುರೇಖಾವಾಣಿ ನ್ಯೂಜಿಲ್ಯಾಂಡ್ ನಿಂದ ವಾಪಸ್ಸಾಗಿದ್ದಾರೆ. ಸುಮಾರು ತಿಂಗಳ ಮಟ್ಟಿಗೆ ಸುರೇಖಾವಾಣಿ ಮಗಳಿಂದ ದೂರ ಇದ್ದರು. ಇಬ್ಬರೂ ತಾಯಿ ಮಗಳಿಗಿಂತ ಸ್ನೇಹಿತರಂತೆ ತುಂಬಾ ಅನ್ಯೋನ್ಯತೆಯಿಂದ ಇರುತ್ತಾರೆ. ಇದೀಗ ಸುರೇಖಾವಾಣಿ ಇಂಡಿಯಾಗೆ ವಾಪಸ್ಸಾಗುತ್ತಿದ್ದಂತೆ ವಿಮಾನ ನಿಲ್ದಾಣದಲ್ಲಿ ಆಕೆಯನ್ನು ಆಹ್ವಾನಿಸಲು ಸುಪ್ರೀತಾ ಹೋಗಿದ್ದರು. ಇನ್ನೂ ಅಲ್ಲಿ ತಾಯಿ ಮಗಳು ಒಬ್ಬರನ್ನೊಬ್ಬರು ಭೇಟಿ ಆಗುತ್ತಿದ್ದಂತೆ ಸಂತೋಷದಿಂದ ಒಬ್ಬರನ್ನೊಬ್ಬರು ತಬ್ಬಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ ವನ್ನು ಸುಪ್ರೀತಾ ತನ್ನ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದು, ವಿಡಿಯೋ ವೈರಲ್ ಆಗಿದೆ.

ಇನ್ನೂ ಸುರೇಖಾವಾಣಿ ಹಾಗೂ ಸುಪ್ರೀತಾ ಹಂಚಿಕೊಳ್ಳುವಂತಹ ಪೊಟೋಗಳ ಕಾರಣದಿಂದ ನೆಟ್ಟಿಗರು ತುಂಬಾನೆ ಟ್ರೋಲ್ ಮಾಡುತ್ತಿರುತ್ತಾರೆ. ಟ್ರೋಲರ್‍ ಗಳಿಗೆ ಅವರು ಸರಿಯಾದ ಕೌಂಟರ್‍ ನೀಡುತ್ತಲೇ ಇರುತ್ತಾರೆ. ಇದೀಗ ಸುಪ್ರೀತಾ ಹಂಚಿಕೊಂಡ ವಿಡಿಯೋಗೆ ನೆಟ್ಟಿಗರು ವಿವಿಧ ರೀತಿಯ ಕಾಮೆಂಟ್ ಗಳನ್ನು ಹಂಚಿಕೊಳ್ಳುತ್ತಿದ್ದಾರೆ.