News

ಪತ್ನಿಯ ಮೇಲಿನ ಸಿಟ್ಟಿಗೆ ಫೇಸ್ ಬುಕ್ ನಲ್ಲಿ ಕಾಲ್ ಗರ್ಲ್ ಎಂದು ಪತ್ನಿಯ ಪೊಟೋ ಹಂಚಿಕೊಂಡ ಪತಿ….!

ಇತ್ತೀಚಿಗೆ ಸಮಾಜದಲ್ಲಿ ಆಗಾಗ ಕೆಲವೊಂದು ವಿಚಿತ್ರ ಘಟನೆಗಳು ನಡೆಯುತ್ತಿರುತ್ತವೆ. ಅಂತಹುದೇ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದೆ. ವ್ಯಕ್ತಿಯೊಬ್ಬ ತನ್ನ ಪತ್ನಿ ತನ್ನೊಂದಿಗೆ ಇರದೇ ಬಿಟ್ಟು ಹೋಗಿದ್ದಾಳೆ ಎಂಬ ಕೋಪದಿಂದ ಆಕೆಯ ಹೆಸರಿನಲ್ಲಿ ಫೇಸ್ ಬುಕ್ ನಕಲಿ ಖಾತೆ ಸೃಷ್ಟಿಸಿ ಅದರಲ್ಲಿ ಕಾಲ್ ಗರ್ಲ್ ಎಂದು ಆಕೆಯ ಪೊಟೋ ಹಾಗೂ ಪೊನ್ ನಂಬರ್‍ ಹಾಕಿದ್ದಾನೆ. ಈ ಸಂಬಂಧ ನಂದಿನಿ ಲೇಔಟ್ ನಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.

ಸಿಲಿಕಾನ್ ಸಿಟಿ ಬೆಂಗಳೂರಿನ ನಂದಿನಿ ಲೇಔಟ್ ನಲ್ಲಿ ಈ ವಿಚಿತ್ರ ಘಟನೆ ನಡೆದಿದೆ. ಆರೋಪಿಯನ್ನು ಸತ್ಯನಾರಾಯಣ ಎಂದು ಗುರ್ತಿಸಲಾಗಿದೆ. ಕಳೆದ 2019 ರಲ್ಲಿ ಸತ್ಯನಾರಾಯಣ ಸಂತ್ರಸ್ತೆಯ ಜೊತೆಗೆ ಮದುವೆಯಾಗಿದ್ದರು. ಮದುವೆಯಾದ ಆರಂಭದಲ್ಲಿ ಇಬ್ಬರೂ ಅನ್ಯೋನ್ಯತೆಯಿಂದ ಜೀವನ ಸಾಗಿಸುತ್ತಿದ್ದರು. ಈ ಜೋಡಿಗೆ ಒಂದು ಮಗು ಸಹ ಜನಿಸಿದೆ. ಆದರೆ ಕಳೆದ ಒಂದು ವರ್ಷದಿಂದ ಗಂಡನ ನಡವಳಿಕೆ ಹಾದಿ ತಪ್ಪಿದ್ದು, ಮನೆಯ ನಿರ್ವಹಣೆಗೂ ಸಹಕಾರ ಕೊಡದ ಹಿನ್ನೆಲೆಯಲ್ಲಿ ಪತ್ನಿ ಆತನನ್ನು ಪ್ರಶ್ನೆ ಮಾಡಿದ್ದಾಳೆ. ಬಳಿಕ ಹೆಂಡತಿಯ ಮೇಲೆ ಮಾನಸಿಕ ಹಾಗೂ ದೈಹಿಕವಾಗಿ ಕಿರುಕುಳ ನೀಡುತ್ತಿದ್ದನಂತೆ. ಈ ಕಿರುಕುಳ ತಾಳಲಾರದೇ ಹೆಂಡತಿಯ ಮನೆಬಿಟ್ಟು ತವರು ಮನೆಗೆ ಹೋಗಿದ್ದಾಳೆ. ಬಳಿಕ ಹೆಂಡತಿಯ ತಮ್ಮ ಸಹ ಬಂದು ಸತ್ಯನಾರಾಯಣ ಮೇಲೆ ಆಕ್ರೋಷ ಹೊರಹಾಕಿದ್ದಾನೆ.

ಈ ಕಾರಣದಿಂದ ಕೋಪಗೊಂಡ ಸತ್ಯನಾರಾಯಣ ನಕಲಿ ಫೇಸ್ ಬುಕ್ ಖಾತೆಯನ್ನು ಹೆಂಡತಿಯ ಹೆಸರಿನಲ್ಲಿ ಕ್ರಿಯೇಟ್ ಮಾಡಿದ್ದಾನೆ. ಆ ಖಾತೆಗೆ ಕಲಾ ಶಶಿ ಎಂದು ಹೆಸರಿಟ್ಟು, ಹೆಂಡತಿಯ ಪೊಟೋ ಒಂದನ್ನು ಹಾಕಿ ಕಾಲ್ ಗರ್ಲ್ ಎಂದು ಶೇರ್‍ ಮಾಡಿದ್ದಾನೆ. ಈ ಪೊಟೋಗೆ ನೀವು ಯಾವಾಗ ಬೇಕಾದರೂ ಕರೆ ಮಾಡಿ ಎಂದು ಪತ್ನಿ ಹಾಗೂ ಪತ್ನಿಯ ಸಹೋದರನ ಮೊಬೈಲ್ ನಂಬರ್‍ ಹಾಕಿದ್ದಾನೆ. ಇನ್ನೂ ಸೋಷಿಯಲ್ ಮಿಡಿಯಾದಲ್ಲಿ ಈ ಪೋಸ್ಟ್ ಹಾಕಿದ ಬಳಿಕ ಅದರಲ್ಲಿದ್ದ ಪೋನ್ ನಂಬರ್‍ ಗೆ ಕರೆಗಳು, ವಾಟ್ಸಾಪ್ ಸಂದೇಶಗಳು ಹರಿದುಬಂದಿದೆ. ನಿನ್ನ ರೇಟ್ ಎಷ್ಟು? ಎಷ್ಟು ಗಂಟೆ ಎಂಬೆಲ್ಲಾ ಅಸಭ್ಯಕರವಾಗಿ ಮಾತನಾಡಿದ್ದಾರೆ. ಬಳಿಕ ಈ ಕುರಿತು ಪರಿಶೀಲನೆ ಮಾಡಿದಾಗ ಇದು ನಕಲಿ ಖಾತೆಯೆಂದು ತಿಳಿದುಬಂದಿದೆ. ಇದೆಲ್ಲಾ ಸತ್ಯನಾರಾಯಣ ಮಾಡಿದ್ದಾನೆ ಎಂದು ನಂದಿನಿ ಲೇಔಟ್ ಪೊಲೀಸರಿಗೆ ದೂರು ನೀಡಿದ್ದು, ದೂರು ದಾಖಲಿಸಿಕೊಂಡ ಪೊಲೀಸರು ಸತ್ಯನಾರಾಯಣರೆಡ್ಡಿಯನ್ನು ಬಂಧನ ಮಾಡಲು ಬಲೆ ಬೀಸಿದ್ದಾರೆ.

Most Popular

To Top