News

ಮ್ಯಾಟ್ರಿಮೋನಿ ತಾಣದ ಮೂಲಕ ಮಹಿಳೆಗೆ 40 ಲಕ್ಷ ಮೋಸ ವಂಚನೆ ಮಾಡಿದ ಕಿಲಾಡಿ ವ್ಯಕ್ತಿ….!

ತಂತ್ರಜ್ಞಾನ ಬಳಕೆ ಹೆಚ್ಚಾದಂತೆಲ್ಲಾ ಸೈಬರ್‍ ಕ್ರೈಂಗಳೂ ಸಹ ಹೆಚ್ಚಾಗುತ್ತಿವೆ. ಈ ಕುರಿತು ಎಷ್ಟೇ ಜಾಗೃತಿ ಮೂಡಿಸಿದರೂ ಸಹ ಅನೇಕರು ಮೋಸ ಹೋಗುತ್ತಿರುತ್ತಾರೆ. ಇದೀಗ ಮ್ಯಾಟ್ರಿಮೋನಿಯಲ್ ತಾಣದ ಮೂಲಕ ವ್ಯಕ್ತಿಯೊಬ್ಬ ಮಹಿಳೆಯೊಬ್ಬರನ್ನು ಪರಿಚಯಿಸಿಕೊಂಡು ಆಕೆಯಿಂದ ಬರೊಬ್ಬರಿ 40 ಲಕ್ಷ ಹಣ ಲಪಟಾಯಿಸಿ ಪರಾರಿಯಾಗಿದ್ದಾನೆ. ಈ ಕುರಿತು ಮೋಸ ಹೋದ ಮಹಿಳೆ ಪೊಲೀಸರ ಮೊರೆ ಹೋಗಿದ್ದಾರೆ.

ಮ್ಯಾಟ್ರಿಮೋನಿಯಲ್ ತಾಣದ ಮೂಲಕ ವ್ಯಕ್ತಿಯೊಬ್ಬ ತಾನು ಆಸ್ಟ್ರೇಲಿಯಾದಲ್ಲಿರುವುದಾಗಿ ಪುಣೆಯ ಮುಂಧ್ವಾ ಮೂಲದ 33 ವರ್ಷದ ಸಾಫ್ಟ್ ವೇರ್‍ ಇಂಜನೀಯರ್‍ ಮಹಿಳೆಯೊಬ್ಬರನ್ನು ಪರಿಚಯಿಸಿಕೊಂಡಿದ್ದಾನೆ. ಕಳೆದ 2023 ಸೆಪ್ಟೆಂಬರ್‍ ಮಾಹೆಯಲ್ಲಿ ಪರಿಚಯವಾದ ಈ ವ್ಯಕ್ತಿ ತಾನು ಆಸ್ಟ್ರೇಲಿಯಾದಲ್ಲಿರುವುದಾಗಿ ಹೇಳಿಕೊಂಡಿದ್ದಾನೆ. ಜೊತೆಗೆ ಮೋಸ ಹೋದ ಯುವತಿಯ ಪ್ರೊಫೈಲ್ ಗೆ ಹೆಚ್ಚು ಆಸಕ್ತಿ ವ್ಯಕ್ತಪಡಿಸಿದ್ದಾನೆ. ಬಳಿಕ ಇಬ್ಬರೂ ಮೊಬೈಲ್ ಸಂಖ್ಯೆಗಳನ್ನು ವಿನಿಮಯ ಮಾಡಿಕೊಂಡಿದ್ದಾರೆ. ಆ ವ್ಯಕ್ತಿ ಶ್ರೀಮಂತ ಎಂದು ಆಕೆಗೆ ಮತಷ್ಟು ಹತ್ತಿರವಾಗಿದ್ದಾನೆ.

ಇನ್ನೂ ಇಬ್ಬರ ನಡುವೆ ಒಳ್ಳೆಯ ಸಂಬಂಧ ಏರ್ಪಟ್ಟಿದೆ. ಕೂಡಲೇ ಇದ್ದಕ್ಕಿದ್ದಂತೆ ಆರೋಪಿ ವ್ಯಕ್ತಿ ತುಂವಾ ಎಮರ್ಜೆನ್ಸಿಯಿದೆ ಎಂದು ಹೇಳಿ ಮಹಿಳೆಗೆ ಹಣ ನೀಡುವಂತೆ ಕೋರಿದ್ದಾನೆ. ಹಣ ವರ್ಗಾವಣೆ ಮಾಡುವಂತೆ ಮೋಸಗಾರ ಎರಡು ಬ್ಯಾಂಕ್ ಖಾತೆಗಳನ್ನು ನೀಡಿದ್ದಾನೆ. ಇತ್ತ ಮೋಸಹೋದ ಮಹಿಳೆ ಹೇಗೂ ಆತ ಮದುವೆಯಾಗುವ ವ್ಯಕ್ತಿ ಎಂದು ಪೂರ್ತಿಯಾಗಿ ನಂಬಿದ್ದ ಕಾರಣದಿಂದ ಆತನ ಖಾತೆಗೆ ಹಣ ವರ್ಗಾವಣೆ ಮಾಡಿದ್ದಾಳೆ. 2023 ಸೆಪ್ಟೆಂಬರ್‍ ಹಾಗೂ ನವೆಂಬರ್‍ ಮಾಹೆಯಲ್ಲಿ ಆಕೆ ಬರೊಬ್ಬರಿ 40.5 ಲಕ್ಷ ಹಣ ವರ್ಗಾವಣೆ ಮಾಡಿದ್ದಾಳೆ. ಬಳಿಕ ಜನವರಿ ಮಾಹೆಯಲ್ಲಿ ವ್ಯಕ್ತಿಯನ್ನು ಆಕೆ ಭೇಟಿಯಾಗಲು ಒತ್ತಾಯ ಮಾಡಿದ್ದಾಳೆ. ಆದರೆ ಅವನು ಅವಳೊಂದಿಗೆ ಎಲ್ಲಾ ಸಂವಹನವನ್ನು ಕಡಿತಗೊಳಿಸಿದ್ದಾನೆ. ಈ ಕುರಿತು ಮಹಿಳೆ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

Most Popular

To Top