Film News

ನಂದಮೂರಿ ತಾರಕ ರಾಮರಾವ್ ರವರ ಸ್ಮರಣಾರ್ಥ ನೂರು ರೂಪಾಯಿ ನಾಣ್ಯ ಬಿಡುಗಡೆ, ಆಹ್ವಾನ ಇದ್ದರೂ ಹಾಜರಾಗದ ಜೂ. ಎನ್.ಟಿ.ಆರ್…..!

ಮಾಜಿ ಮುಖ್ಯಮಂತ್ರಿ ನಟ ನಂದಮೂರಿ ತಾರಕ ರಾಮಾರಾವ್ ರವರ ಸ್ಮರಣಾರ್ಥ ಕೇಂದ್ರ ಸರ್ಕಾರ ನೂರು ರೂಪಾಯಿ ನಾಣ್ಯ ಬಿಡುಗಡೆ ಮಾಡಲು ನಿರ್ಣಯ ಮಾಡಿತ್ತು. ಎನ್.ಟಿ.ಆರ್‍ ಶತಜಯಂತ್ರಿ ಉತ್ಸವಗಳ ಸಮಯದಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಅದರಂತೆ ಭಾರತ ರಾಷ್ಟ್ರಪತಿ ದ್ರೌಪರಿ ಮರ್ಮು ರವರ ಕೈಯಾರೆ ಇಂದು ನೂರು ರೂಪಾಯಿ ನಾಣ್ಯವನ್ನು ಬಿಡುಗಡೆ ಮಾಡಲಾಗಿದೆ. ಈ ಕಾರ್ಯಕ್ರಮ ಅದ್ದೂರಿಯಾಗಿ ದೆಹಲಿಯ ರಾಷ್ಟ್ರಪತಿ ಭವನದಲ್ಲಿ ನೆರವೇರಿತ್ತು.

ಈ ಕಾರ್ಯಕ್ರಮ ದಹೆಲಿಯ ರಾಷ್ಟ್ರಪತಿ ಭವನದಲ್ಲಿ ಅದ್ದೂರಿಯಾಗಿ ನೆರವೇರಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಎನ್.ಟಿ.ಆರ್‍ ಕುಟುಂಬದ ಪ್ರತಿಯೊಬ್ಬರಿಗೂ ಆಹ್ವಾನ ನೀಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ನಂದಮೂರಿ ಬಾಲಕೃಷ್ಣ, ನಾರಾ ಚಂದ್ರಬಾಬು ನಾಯ್ಡು, ದಗ್ಗುಬಾಟಿ ವೆಂಕಟೇಶ್ವರಲು, ಪುರಂದೇಶ್ವರಿ, ಭುವನೇಶ್ವರಿ, ಗೋರಪಾಟಿ ಲೋಕೇಶ್ವರಿ, ನಾರಾ ಬ್ರಾಹ್ಮಿಣಿ ಸೇರಿದಂತೆ ಹಲವರು ಭಾಗವಹಿಸಿದ್ದರು. ಆದರೆ ಎಲ್ಲರ ಕಣ್ಣು ಜೂನಿಯರ್‍ ಎನ್.ಟಿ.ಆರ್‍ ರವರ ಮೇಲಿತ್ತು ಎನ್ನಲಾಗಿದೆ. ಜೂನಿಯರ್‍ ಎನ್.ಟಿ.ಆರ್‍ ತಮ್ಮ ತಾತನವರ ಕಾರ್ಯಕ್ರಮಕ್ಕೆ ಹಾಜರಾಗುತ್ತಾರಾ ಇಲ್ಲವಾ ಎಂದು ಎಲ್ಲರೂ ಕಾತುರದಿಂದ ಕಾಯುತ್ತಿದ್ದರು. ವೇದಿಕೆಯಲ್ಲಿ ನಂದಮೂರಿ ಬಾಲಕೃಷ್ಣ, ಭುವನೇಶ್ವರಿ, ಪುರಂದೇಶ್ವರಿ, ಗೊರಪಾಟಿ ಲೋಕೇಶ್ವರಿ ರವರುಗಳು ವೇದಿಕೆಯನ್ನು ಅಲಂಕರಿಸಿದ್ದರು. ನಂದಮೂರಿ ನಾರಾ ಕುಟುಂಬ ಸದಸ್ಯರು ಮಾತ್ರವಲ್ಲದೇ ಕೆಲವು ಟಿಡಿಪಿ ಹಾಗೂ ಬಿಜೆಪಿ ಮುಖಂಡರು ಸಹ ಹಾಜರಾಗಿದ್ದರು.

ಇನ್ನೂ ಈ ಕಾರ್ಯಕ್ರಮದಲ್ಲಿ ಜೂನಿಯರ ಎನ್.ಟಿ.ಆರ್‍ ಗೈರಾಗಿದ್ದರು. ಸದ್ಯ ಜೂನಿಯರ್‍ ಎನ್.ಟಿ.ಆರ್‍ ದೇವರ ಸಿನೆಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಈ ಕಾರಣದಿಂದಲೇ ಎನ್.ಟಿ.ಆರ್‍ ರವರ ಸ್ಮರಣಾರ್ಥ ನಾಣ್ಯ ಬಿಡುಗಡೆ ಕಾರ್ಯಕ್ರಮಕ್ಕೆ ಹಾಜರಾಗಿಲ್ಲ ಎಂಬ ಸುದ್ದಿಗಳು ಕೇಳಿಬರುತ್ತಿವೆ. ಆದರೆ ಅವರು ಅಂದುಕೊಂಡರೇ ಒಂದು ದಿನ ಶೂಟಿಂಗ್ ಮುಂದೂಡಬಹುದಾಗಿತ್ತು. ತಾತನವರ ಕಾರ್ಯಕ್ರಮಕ್ಕಿಂತ ಸಿನೆಮಾ ಶೂಟಿಂಗ್ ಹೆಚ್ಚಾಯ್ತಾ, ಕುಟುಂಬ ಸದಸ್ಯರೊಂದಿಗೆ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರೇ ಚೆನ್ನಾಗಿರುತ್ತಿತ್ತು ಎಂಬೆಲ್ಲಾ ವಿಮರ್ಶೆಗಳೂ ಸಹ ಕೇಳಿಬರುತ್ತಿವೆ.

ಇನ್ನೂ ಇದೇ ವೇಳೆ ಎನ್.ಟಿ.ಆರ್‍ ಅಭಿಮಾನಿಗಳಿಂದ ಮತ್ತೊಂದು ಸುದ್ದಿ ಸಹ ಕೇಳಿಬರುತ್ತಿದೆ. ಎನ್.ಟಿ.ಆರ್‍ ರವರ ಶತಮಾನೋತ್ಸವ ಉತ್ಸವಗಳಿಗೆ ತಾರಕ್ ರವರನ್ನು ಆಹ್ವಾನಿಸಿದ್ದರೇ, ನಂದಮೂರಿ ಕುಟುಂಬ ತಾರಕ್ ರನ್ನು ದೂರ ಇಡಲು ಪ್ರಯತ್ನ ಮಾಡುತ್ತಿದೆ ಎಂಬ ರೂಮರ್‍ ಗಳು ಸಹ ಕೇಳಿಬರುತ್ತಿವೆ. ಇದೀಗ ಎನ್.ಟಿ.ಆರ್‍ ರವರ ನೂರು ರೂಪಾಯಿ ನಾಣ್ಯ ಬಿಡುಗಡೆ ಕಾರ್ಯಕ್ರಮಕ್ಕೆ ತಾರಕ್ ಗೈರು ಹಾಜರಿಯಾದ ಸುದ್ದಿ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಲಿದೆ ಎಂದು ಹೇಳಲಾಗುತ್ತಿದೆ.

Most Popular

To Top