ಅರೆಸ್ಟ್ ಆಗ್ತಾರಾ ಲೇಡಿ ವಿಲನ್ ವರಲಕ್ಷ್ಮೀ ಶರತ್ ಕುಮಾರ್, ನೋಟಿಸ್ ಕೊಟ್ಟ NIA…!

ಲೇಡಿ ವಿಲನ್ ಆಗಿ ಒಳ್ಳೆಯ ಕ್ರೇಜ್ ಪಡೆದುಕೊಂಡ ವರಲಕ್ಷ್ಮೀ, ಬ್ಯಾಕ್ ಟು ಬ್ಯಾಕ್ ಸಿನೆಮಾಗಳಲ್ಲಿ ವಿಭಿನ್ನ ಪಾತ್ರಗಳನ್ನು ಮಾಡುತ್ತಾ ಸಿನಿಜರ್ನಿ ಸಾಗಿಸುತ್ತಿದ್ದಾರೆ. ಆ ಮೂಲಕ ಸಿನಿರಂಗದಲ್ಲಿ ತಮ್ಮದೇ ಆದ ಖ್ಯಾತಿಯನ್ನು ಪಡೆದುಕೊಂಡಿದ್ದಾರೆ.  ಸದ್ಯ ಸೌತ್ ಸಿನಿರಂಗದಲ್ಲಿ ಲೇಡಿ ವಿಲನ್ ಆಗಿ ಭಾರಿ ಫೇಂ ಪಡೆದುಕೊಂಡಿದ್ದಾರೆ. ಇದೀಗ NIA ಆಕೆಗೆ ನೊಟೀಸ್ ನೀಡಿದ್ದು, ವಿಚಾರಣೆಗೆ ಹಾಜರಾಗುವಂತೆ ತಿಳಿಸಿದ್ದಾರೆ. ಇದೀಗ ಆಕೆ ಅರೆಸ್ಟ್ ಆಗ್ತಾರಾ ಎಂಬ ಅನುಮಾನ ಮೂಡಿದೆ.

ಖ್ಯಾತ ಖಾಲಿವುಡ್ ನಟಿ ವರಲಕ್ಷ್ಮೀ ಶರತ್ ಕುಮಾರ್‍ ರವರಿಗೆ NIA ನೊಟೀಸ್ ಜಾರಿ ಮಾಡಿದೆ. ಡ್ರಗ್ಸ್ ಕೇಸ್ ಗೆ ಸಂಬಂಧಪಟ್ಟಂತೆ ಆಕೆಯ ಮಾಜಿ ಆಪ್ತ ಸಹಾಯಕರನ್ನು ಪ್ರಶ್ನೆ ಮಾಡಲು ಕೊಚ್ಚಿಯಲ್ಲಿರುವ NIA ಕಚೇರಿಗೆ ಹಾಜರಾಗುವಂತೆ ಆದೇಶ ನೀಡಿದೆ. ಆದಿಲಿಂಗಂ ಎಂಬಾತ ಕೆಲವು ತಿಂಗಳುಗಳ ಕಾಲ ವರಲಕ್ಷ್ಮೀ ಬಳಿ ಕೆಲಸ ಮಾಡಿದ್ದರು. ಡ್ರಗ್ಸ್, ಆಯುಧಗಳ ಸರಬರಾಜು ಸಂಬಂಧ ಅಂತರಾಷ್ಟ್ರೀಯ ಸ್ಮಗ್ಲರ್‍ ಗಳ ಜೊತೆಗೆ ಆತನಿಗೆ ಸಂಬಂಧವಿದೆ ಎಂದು ಅಧಿಕಾರಿಗಳು ಗುರ್ತಿಸಿದ್ದಾರೆ. ಈ ಹಿನ್ನೆಲೆಯಲ್ಲಿ ವರಲಕ್ಷ್ಮೀ ಶರತ್ ಕುಮಾರ್‍ ರವರಿಗೂ ಸಹ ಕಿರಿಕಿರಿ ಎದುರಾಗಲಿದೆ ಎನ್ನಲಾಗುತ್ತಿದೆ. ಆದಿಲಿಂಗಂ ನನ್ನು ವಿಚಾರಣೆ ಮಾಡುವಾಗ ಆತನಿಂದ 2100 ಕೋಟಿ ಬೆಲೆಯ 300 ಕೆಜಿ ಹೆರಾಯಿನ್, AK47 ಗನ್, 9MM ಬಂದೂಕು ಸೇರಿದಂತೆ ಕೆಲವೊಂದು ವಸ್ತುಗಳನ್ನು ವಶಪಡಿಸಿಕೊಂಡರು.

ಟಾಲಿವುಡ್ ನಲ್ಲಿ ಕಳೆದ 2017 ರಲ್ಲಿ ಬೆಳಕಿಗೆ ಬಂದ ಡ್ರಗ್ಸ್ ರಾಕೆಟ್ ಪತ್ತೆ ಹಚ್ಚಿದ್ದು NIA. ಈ ಪ್ರಕರಣದಲ್ಲಿ ಅನೇಕ ಸಿನೆಮಾ ಸೆಲೆಬ್ರೆಟಿಗಳು ಸೇರಿದಂತೆ ಅನೇಕರು ವಿಚಾರಣೆಗೆ ಹಾಜರಾಗಿದ್ದರು. ಖ್ಯಾತ ನಿರ್ದೇಶಕ ಪೂರಿ ಜಗನ್ನಾಥ್, ನಟಿಯರಾದ ಚಾರ್ಮಿ, ರಕುಲ್ ಸೇರಿದಂತೆ ಮತಷ್ಟು ಮಂದಿ NIA ವಿಚಾರಣೆಗೆ ಹಾಜರಾಗಿದ್ದರು. ಇತ್ತೀಚಿಗಷ್ಟೆ ವರಲಕ್ಷ್ಮೀ ಶರತ್ ಕುಮಾರ್‍ ಎಂಗೇಜ್ ಮೆಂಟ್ ಸಹ ಮಾಡಿಕೊಂಡಿದ್ದಾರೆ. ಮದುವೆ ಹತ್ತಿರವಾಗಿರುವ ಸಮಯದಲ್ಲಿ ವರಲಕ್ಷ್ಮೀ ಈ ಇಕ್ಕಟ್ಟಿಗೆ ಸಿಲುಕಿದ್ದು, ಅಭಿಮಾನಿಗಳು ಶಾಕ್ ಆಗುತ್ತಿದ್ದಾರೆ. ಇನ್ನೂ ವರಲಕ್ಷ್ಮೀ ಸದ್ಯ ಬ್ಯಾಕ್ ಟು ಬ್ಯಾಕ್ ಸಿನೆಮಾಗಳ ಮೂಲಕ ಒಳ್ಳೆಯ ಸಕ್ಸಸ್ ಪಡೆದುಕೊಳ್ಳುತ್ತಿದ್ದಾರೆ. ಕೊನೆಯದಾಗಿ ಆಕೆ ಹನುಮಾನ್ ಎಂಬ ಸಿನೆಮಾದ ಮೂಲಕ ಭಾರಿ ಕ್ರೇಜ್ ಪಡೆದುಕೊಂಡರು.