ಟ್ರೋಲ್ ಗಳಿಂದ ಬೇಸತ್ತು ಬಿಕ್ಕಿ ಬಿಕ್ಕಿ ಅತ್ತ ನಟಿ ಸುರೇಖಾವಾಣಿ, ಲಗ್ಸುರಿ ಲೈಫ್ ಬಗ್ಗೆ ಒಪೆನ್ ಆದ ನಟಿ….!

Follow Us :

ಸಿನೆಮಾಗಳ ಮೂಲಕ ಅನೇಕ ಕಲಾವಿದರು ಪ್ರೇಕ್ಷಕರನ್ನು ರಂಜಿಸುವ ಕೆಲಸ ಮಾಡುತ್ತಿರುತ್ತಾರೆ. ತಮ್ಮ ವೈಯುಕ್ತಿಕ ಜೀವನದಲ್ಲಿ ಎಷ್ಟೇ ನೋವಿದ್ದರೂ ಸಹ ತೆರೆಯ ಮೇಲೆ ನಗಿಸುವಂತಹ ಕೆಲಸ ಮಾಡುತ್ತಿರುತ್ತಾರೆ. ಟಾಲಿವುಡ್ ಸಿನಿರಂಗದಲ್ಲಿ ಅನೇಕ ಸಿನೆಮಾಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಪಡೆದುಕೊಂಡ ನಟಿ ಸುರೇಖಾವಾಣಿ ಸಹ ವೈಯುಕ್ತಿಕ ಜೀವನದಲ್ಲಿ ತುಂಬಾನೆ ಸಮಸ್ಯೆಗಳನ್ನು ಎದುರಿಸಿದ್ದಾರೆ. ಇದೀಗ ಆಕೆ ಟ್ರೋಲರ್‍ ಗಳ ಮಾತುಗಳಿಂದ ಬೇಸತ್ತು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಪತಿ ಹೋದ ಬಳಿಕ ಆಕೆ ಲಗ್ಸುರಿ ಲೈಫ್ ಅನುಭವಿಸುತ್ತಿದ್ದಾಳೆ ಎಂಬ ಟ್ರೋಲ್ ಗಳಿಗೆ ರಿಯಾಕ್ಟ್ ಆಗಿದ್ದಾರೆ.

ತೆಲುಗು ಸಿನಿರಂಗದ ಕ್ಯಾರೆಕ್ಟರ್‍ ಆರ್ಟಿಸ್ಟ್ ಸುರೇಖಾ ವಾಣಿ ಬಗ್ಗೆ ಅಷ್ಟೊಂದು ಪರಿಚಯದ ಅಗತ್ಯವಿಲ್ಲ. ಅದರಲ್ಲೂ ಸೋಷಿಯಲ್ ಮಿಡಿಯಾದಲ್ಲಿ ಸದಾ ಆಕ್ಟೀವ್ ಆಗಿರುತ್ತಾರೆ. ಆಕೆ ಹಾಗೂ ತನ್ನ ಪುತ್ರಿ ಸುಪ್ರೀತಾ ಜೊತೆಗೆ ಸೇರಿ ಸೋಷಿಯಲ್ ಮಿಡಿಯಾದಲ್ಲಿ ಹಂಗಾಮ ಸೃಷ್ಟಿಸುತ್ತಿರುತ್ತಾರೆ. ವೇಕೇಷನ್, ಶಾಪಿಂಗ್ ಸೇರಿದಂತೆ ಅನೇಕ ಕಡೆ ಇಬ್ಬರೂ ಜೊತೆಗೆ ಹೋಗಿ ಡ್ಯಾನ್ಸ್ ಮಾಡುತ್ತಾ, ಗ್ಲಾಮರಸ್ ಪೊಟೋಗಳನ್ನು, ರೀಲ್ಸ್ ಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ತಾಯಿ ಮಗಳು ಪೈಪೋಟಿಗೆ ಬಿದ್ದಂತೆ ಗ್ಲಾಮರ್‍ ಶೋ ಮಾಡುತ್ತಿರುತ್ತಾರೆ. ಜೊತೆಗೆ ಅವರ ಪೋಸ್ಟ್ ಗಳ ಕಾರಣದಿಂದ ಇಬ್ಬರೂ ಟ್ರೋಲಿಂಗ್ ಗೆ ಸಹ ಗುರಿಯಾಗುತ್ತಿರುತ್ತಾರೆ. ಇದೀಗ ಟ್ರೋಲರ್‍ ಗಳ ಬಗ್ಗೆ ಆಕೆ ರಿಯಾಕ್ಟ್ ಆಗಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಸುರೇಖಾವಾಣಿ, ನನ್ನ ಪತಿ ಸತ್ತ ಬಳಿಕ ನಾನು ತುಂಬಾ ಬದಲಾಗಿದ್ದೇನೆ ಎಂದು ಟ್ರೋಲ್ ಮಾಡುತ್ತಿದ್ದಾರೆ. ನನಗೆ 19 ವರ್ಷ ವಯಸ್ಸಿನಲ್ಲೇ ಸುರೇಶ್ ತೇಜ ಜೊತೆಗೆ ಮದುವೆಯಾಗಿತ್ತು. ಇದೀಗ ನನಗೆ 42 ವರ್ಷ. 20 ವರ್ಷದ ಯುವತಿಯಂತೆ ಮಗಳೊಂದಿಗೆ ಎಂಜಾಯ್ ಮಾಡುತ್ತಿದ್ದೇನೆ. ನನ್ನ ಪತಿಯಿದ್ದರೂ ನಾನು ಇದೇ ರೀತಿ ಇರ್ತಿದ್ದೆ. ಮೊದಲಿಗೆ ಅಂತಹ ಕಾಮೆಂಟ್ ಗಳನ್ನು ನೋಡಿ ತುಂಬಾ ನೋವನ್ನು ಅನುಭವಿಸುತ್ತಿದ್ದೆ. ಬಳಿಕ ಅವರು ಬದಲಾಗೊಲ್ಲ ಎಂದು ಸುಮ್ಮನಾಗಿಬಿಟ್ಟೆ. ಪ್ರತಿಯೊಬ್ಬನ ಬಾಯಿ ಮುಚ್ಚಿಸೋಕೆ ಆಗೊಲ್ಲ ಅಲ್ವಾ. ನನ್ನ ಬಗ್ಗೆ ವಿಡಿಯೋ ಮಾಡಿ ಹಣ ಸಂಪಾದಿಸಿಕೊಳ್ಳುತ್ತಿದ್ದಾರೆ. ನಾನು ಸಿಂಗಲ್ ಪೇರೆಂಟ್ ಆಗಿದ್ದರಿಂದ ಇಂತಹ ಎಲ್ಲವನ್ನೂ ಎದುರಿಸಬೇಕು. ನನ್ನ ಪತಿಗೆ ಆರೋಗ್ಯ ಸರಿಯಿಲ್ಲದಿದ್ದಾಗ ಅವರ ಕುಟುಂಬಸ್ಥರು ನಾನು ಅವರನ್ನು ಸರಿಯಾಗಿ ನೋಡಿಕೊಂಡಿಲ್ಲ ಎಂದು ಆರೋಪಿಸಿದರು. ಆತನಿಗೆ ಡಯಾಬಿಟಿಸ್ ಇದ್ದ ಕಾರಣದಿಂದ ಹೃದಯದಲ್ಲಿನ ನೋವು ಗೊತ್ತಾಗಲಿಲ್ಲ. ಸಡನ್ ಆಗಿ ಹಾರ್ಟ್ ಬೀಟ್ ನಿಂತುಹೋಗಿತ್ತು. ದೇವರು ಒಂದು ಗಂಟೆ ಅವಕಾಶ ಕೊಟ್ಟರೇ ತೇಜ ಜೊತೆಗೆ ಮಾತನಾಡಬೇಕೆಂದು ಕೋರುತ್ತೇನೆ ಎಂದಿದ್ದಾರೆ.

ಇನ್ನೂ ಮತ್ತೆ ಮದುವೆಯಾಗುವಂತೆ ಮನೆಯವರು ಕೇಳಿದರು. ನನಗೆ ಅದು ಇಷ್ಟವಿಲ್ಲ. ನನಗೆ ಬೇರೆಯವರ ಜೊತೆಗೆ ಅಫೈರ್‍ ಗಳಿವೆ. ಆದ್ದರಿಂದಲೇ ನಾನು ವಿಲಾಸಪೂರಿತವಾದ ಜೀವನ ನಡೆಸುತ್ತಿದ್ದೇನೆ ಎಂದು ಅಂದುಕೊಳ್ಳುತ್ತಾರೆ. ಅದರಲ್ಲಿ ಯಾವುದೇ ಸತ್ಯಾಂಶವಿಲ್ಲ. ಇತ್ತೀಚಿಗಷ್ಟೆ ನನ್ನ ಪ್ರಾಪರ್ಟಿ ಸಹ ಮಾರಿದೆ. ಈಗಲೂ ನನಗೆ ಸ್ವಂತ ಮನೆಯಿಲ್ಲ. ಅನವಶ್ಯಕವಾಗಿ ನನ್ನ ಡ್ರಗ್ಸ್ ಕೇಸ್ ನಲ್ಲಿ ಸಿಲುಕಿಸಿದರು. ಅದರಿಂದ ನಾನು ಒಂದು ತಿಂಗಳು ಡಿಪ್ರೆಷನ್ ನಲ್ಲಿದ್ದೆ. ಅಳುತ್ತಾ ಕೂರುತ್ತಿದ್ದೆ. ಪ್ರಶಾಂತವಾದ ಜೀವನ ಕರುಣಿಸು ಎಂದು ತಿರುಮಲ ತಿಮ್ಮಪ್ಪನಿಗೆ ತಲೆ ಕೂದಲನ್ನು ನೀಡಿದೆ ಎಂದು ಆಕೆ ಎಮೋಷನಲ್ ಆಗಿ ಮಾತನಾಡಿದ್ದಾರೆ.