Film News

ನನ್ನ ಬೇಬಿಯನ್ನು ತುಂಬಾ ಮಿಸ್ ಆಗುತ್ತಿದ್ದೇನೆ ಎಂದ ನ್ಯಾಷನಲ್ ಕ್ರಷ್ ರಶ್ಮಿಕಾ ಕಾಮೆಂಟ್ಸ್ ವೈರಲ್…!

ಕಡಿಮೆ ಸಮಯದಲ್ಲೇ ಸ್ಟಾರ್‍ ಆದ ರಶ್ಮಿಕಾ ಮಂದಣ್ಣ ಇದೀಗ ಸಿನೆಮಾಗಳಲ್ಲಿ ಪುಲ್ ಬ್ಯುಸಿಯಾಗಿದ್ದಾರೆ. ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಸಹ ಆಕೆ ಪುಲ್ ಬ್ಯುಸಿಯಾಗಿರುತ್ತಾರೆ. ಆಕೆ ಏನೆ ಮಾಡಿದರೂ ಕ್ಷಣದಲ್ಲೆ ವೈರಲ್ ಆಗುತ್ತಿರುತ್ತದೆ. ಇದೀಗ ಆಕೆ ತಮ್ಮ ಅಭಿಮಾನಿಗಳೊಂದಿಗೆ ಚಿಟ್ ಚಾಟ್ ಮಾಡಿದ್ದಾರೆ. #RushHour ಮೂಲಕ ತನ್ನನ್ನು ಏನು ಪ್ರಶ್ನೆ ಬೇಕಾದರೂ ಕೇಳಬಹುದು ಎಂದು ಹೇಳಿದ್ದು, ಆಕೆಗೆ ಅವರ ಫ್ಯಾನ್ಸ್ ಅನೇಕ ಪ್ರಶ್ನೆಗಳನ್ನು ಕೇಳಿದ್ದಾರೆ. ರಶ್ಮಿಕಾಗೆ ಕೇಳಿದ ಅನೇಕ ಪ್ರಶ್ನೆಗಳಿಗೆ ಆಕೆ ಸಹ ಉತ್ತರಿಸಿದ್ದು, ಇದೀಗ ಕ್ರೇಜಿ ಪ್ರಶ್ನೆಯೊಂದು ಸಖತ್ ವೈರಲ್ ಆಗುತ್ತಿದೆ.

ಸ್ಟಾರ್‍ ನಟಿ ರಶ್ಮಿಕಾ ಮಂದಣ್ಣ ರವರಿಗೆ #RushHour ಹ್ಯಾಷ್ ಟ್ಯಾಗ್ ಮೂಲಕ ಅಭಿಮಾನಿಯೋರ್ವ ಪ್ರಶ್ನೆಯೊಂದು ಕೇಳಿದ್ದಾರೆ. ಅಭಿಮಾನಿಯೊಬ್ಬ ರಶ್ಮಿಕಾ ತಂಗಿ ಷಿಮಾನ್ ಮಂದಣ್ಣ ಬಗ್ಗೆ ಪ್ರಶ್ನೆಯೊಂದನ್ನು ಕೇಳಿದ್ದಾರೆ. ಷಿಮಾನ್ ಹೇಗಿದ್ದಾರೆ, ಈಗ ಏನು ಮಾಡುತ್ತಿದ್ದಾರೆ. ಆಕೆಯನ್ನು ನೀನು ಮಿಸ್ ಆಗುತ್ತಿದ್ದೀಯಾ ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನೂ ರಶ್ಮಿಕಾ ಸಹ ಪ್ರಶ್ನೆಗೆ ಉತ್ತರಿಸಿದ್ದಾರೆ. ಷಿಮಾನ್ ನನ್ನ ಪಕ್ಕದಲ್ಲಿ ಇಲ್ಲದೇ ಇದ್ದಾಗ ಆಕೆಯನ್ನು ನಾನು ತುಂಬಾನೆ ಮಿಸ್ ಆಗುತ್ತಿದ್ದೇನೆ. ಆಕೆ ಬೇಗ ಬೆಳೆಯುತ್ತಿದ್ದಾಳೆ. ಸದ್ಯ ಆಕೆ ನಾಲ್ಕನೇ ತರಗತಿ ಓದುತ್ತಿದ್ದಾಳೆ. ಆಕೆ ಪರೀಕ್ಷೆ ಬರೆಯುತ್ತಿದ್ದಾಳೆ. ಆಕೆಗೆ ಎಲ್ಲರೂ ವಿಶ್ ಮಾಡಿ ಎಂದಿದ್ದಾರೆ. ಇನ್ನೂ ರಶ್ಮಿಕಾಗೆ ನಾಲ್ಕನೇ ತರಗತಿ ಓದುವ ತಂಗಿ ಇದ್ದಾಳೆ ಎಂದು ನೆಟ್ಟಿಗರು ಶಾಕ್ ಆಗಿದ್ದಾರೆ.

ಇನ್ನೂ ನಟಿ ರಶ್ಮಿಕಾ ಮಂದಣ್ಣ ಕನ್ನಡ ಕಿರಿಕ್ ಪಾರ್ಟಿ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಆಕೆ ಹಿರೋಯಿನ್ ಆದ ಬಳಿಕ ಅವರ ಫ್ಯಾಮಿಲಿ ಸಹ ಚೆನ್ನಾಗಿ ಸೆಟಲ್ ಆಗಿದೆ. ಇನ್ನೂ ರಶ್ಮಿಕಾ ಬಾಲ್ಯದಲ್ಲಿ ರಶ್ಮಿಕಾ ತುಂಬಾ ಬಡತನವನ್ನು ಅನುಭವಿಸಿದ್ದರಂತೆ. ಸ್ವಂತ ಮನೆ ಸಹ ಇರಲಿಲ್ಲವಂತೆ. ಪ್ರತಿ ತಿಂಗಳು ಮನೆಯ ಬಾಡಿಗೆಯನ್ನು ಸಹ ಕಟ್ಟಲಾಗದೆ ಸದಾ ಮನೆಗಳನ್ನು ಬದಲಿಸುತ್ತಿದ್ದರಂತೆ ಎಂದೂ ಸಹ ಹೇಳಲಾಗಿದೆ. ಇನ್ನೂ ರಶ್ಮಿಕಾ ಮಂದಣ್ಣ ಮನೆಯ ಮೇಲೂ ಸಹ ಎರಡು ಬಾರಿ ಐಟಿ ಅಧಿಕಾರಿಗಳು ರೈಡ್ ಮಾಡಿದ್ದರು. ಇನ್ನೂ ಕನ್ನಡದಿಂದ ಬಂದ ರಶ್ಮಿಕಾ ಮಂದಣ್ಣ ಕನ್ನಡ ವನ್ನೇ ಮರೆತಿದ್ದಾರೆ ಎಂದು ಆಕೆಯನ್ನು ಸದಾ ಟ್ರೋಲ್ ಸಹ ಮಾಡುತ್ತಿರುತ್ತಾರೆ.

ಸದ್ಯ ರಶ್ಮಿಕಾ ಮಂದಣ್ಣ ಕೆರಿಯರ್‍ ಒಳ್ಳೆಯ ಹಾದಿಯಲ್ಲಿ ನಡೆಯುತ್ತಿದೆ. ಆಕೆಯಲ್ಲಿ ಎರಡು ಬಿಗ್ ಬಜೆಟ್ ಸಿನೆಮಾಗಳಿವೆ. ಟಾಲಿವುಡ್ ನ ಪ್ಯಾನ್ ಇಂಡಿಯಾ ಸಿನೆಮಾ ಪುಷ್ಪಾ-2 ಅಲ್ಲು ಅರ್ಜುನ್ ಜೊತೆಗೆ ನಟಿಸುತ್ತಿದ್ದಾರೆ. ಬಾಲಿವುಡ್ ನಲ್ಲಿ ಯಾನಿಮಲ್ ಎಂಬ ಬಿಗ್ ಬಜೆಟ್ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನೆಮಾ ಸಹ ಶೂಟಿಂಗ್ ಭರದಿಂದ ಸಾಗುತ್ತಿದೆ.

Most Popular

To Top