Film News

ನಿಹಾರಿಕಾ-ಚೈತನ್ಯ ಬೇರೆಯಾಗುತ್ತಿರುವ ವಿಚಾರ, ನಿಹಾರಿಕಾ ಸಂಸಾರ ಸರಿಪಡಿಸಲು ಚಿರು ಎಂಟ್ರಿ….!

ನಿನ್ನೆಯಿಂದ ಟಾಲಿವುಡ್ ಸಿನಿರಂಗದಲ್ಲಿ ನಿಹಾರಿಕಾ ವಿಚ್ಚೇದನದ ಸುದ್ದಿ ಹಾಟ್ ಟಾಪಿಕ್ ಆಗಿದೆ. ಈ ಬಗ್ಗೆ ಯಾವುದೇ ರೀತಿಯ ಅಧಿಕೃತ ಮಾಹಿತಿ ಇಲ್ಲದೇ ಇದ್ದರೂ ಸಹ ಕೆಲವೊಂದು ಉದಾಹರಣೆಗಳನ್ನಿಟ್ಟುಕೊಂಡು ಅವರು ಬೇರೆಯಾಗುತ್ತಿದ್ದಾರೆ ಎಂಬ ಸುದ್ದಿ ಸೋಷಿಯಲ್ ಮಿಡಿಯಾದಲ್ಲಿ ಹಲ್ ಚಲ್ ಸೃಷ್ಟಿಸಿದೆ. ನಿಹಾರಿಕಾ ಪತಿ ಚೈತನ್ಯ ಅವರ ಮದುವೆಯ ಪೊಟೋಗಳನ್ನು ಸೋಷಿಯಲ್ ಮಿಡಿಯಾದಲ್ಲಿ ಡಿಲೀಟ್ ಮಾಡಿದ್ದು, ಅನ್ ಫಾಲೋ ಮಾಡಿಕೊಂಡಿದ್ದು ಎಲ್ಲವನ್ನೂ ಆಧಾರವಾಗಿಟ್ಟುಕೊಂಡು ಅವರು ವಿಚ್ಚೇದನಕ್ಕೆ ಮುಂದಾಗಿದ್ದಾರೆ ಎಂದು ಸುದ್ದಿ ಹರಿಬಿಟ್ಟಿದ್ದಾರೆ. ಇದೀಗ ಅವರ ಸಂಸಾರವನ್ನು ಸರಿಪಡಿಸಲು ಚಿರಂಜೀವಿ ಎಂಟ್ರಿ ಕೊಟ್ಟಿದ್ದಾರೆ ಎಂಬ ಸುದ್ದಿಯೊಂದು ಇದೀಗ ಕೇಳಿಬರುತ್ತಿದೆ.

ಸಾಮಾನ್ಯವಾಗಿ ಸೆಲೆಬ್ರೆಟಿಗಳ ಬಗ್ಗೆ ಇಂತಹ ಸುದ್ದಿಗಳು ಬಂದರೇ ಅದು ನಿಜನಾ ಅಥವಾ ಸುಳ್ಳಾ ಎಂಬುದೂ ಬಿಟ್ಟು ಸುದ್ದಿ ಮಾತ್ರ ಎಲ್ಲಾ ಕಡೆ ಹರಿದಾಡುತ್ತದೆ. ಈ ಹಿಂದೆ ಸಮಂತಾ ಹಾಗೂ ನಾಗಚೈತನ್ಯ ವಿಚ್ಚೇದನದ ಸಮಯದಲ್ಲೂ ಸಹ ಸಮಂತಾ ತನ್ನ ಸೋಷಿಯಲ್ ಮಿಡಿಯಾ ಅಕೌಂಟ್ ನಿಂದ ಅಕ್ಕಿನೇನಿ ಎಂಬ ಸರ್‍ ನೇಮ್ ತೆಗೆದುಬಿಟ್ಟರು.  ಅದೇ ರೀತಿ ನಿಹಾರಿಕಾ ಸಹ ಸೋಷಿಯಲ್ ಮಿಡಿಯಾದಲ್ಲಿ ಚೈತನ್ಯ ಹೆಸರನ್ನು ತೆಗೆದಿದ್ದರು.  ಬಳಿಕ ಅನ್ ಫಾಲೋ ಮಾಡಿದರು. ಅದೇ ರೀತಿ ಚೈತನ್ಯ ಸಹ ಅನ್ ಫಾಲೋ ಮಾಡಿ ಮದುವೆ ಪೊಟೋಗಳನ್ನು ಡಿಲೀಟ್ ಮಾಡಿದ್ದಾರೆ. ಈ ಕಾರಣದಿಂದ ಅವರಿಬ್ಬರ ನಡುವೆ ಎಲ್ಲವೂ ಸರಿಯಲ್ಲ ಎಂಬ ಸುದ್ದಿಗೆ ಮತಷ್ಟು ಬಲ ಬಂದಂತಾಗಿದೆ. ಇದೆಲ್ಲಾ ನಡೆದ ಬಳಿಕ ಸೋಷಿಯಲ್ ಮಿಡಿಯಾದಲ್ಲಿ ಅವರು ಬೇರೆಯಾಗಲಿದ್ದಾರೆ ಎಂಬ ಸುದ್ದಿ ಮತಷ್ಟು ಹರಿದಾಡುತ್ತಿದೆ.

ಇದೀಗ ನಿಹಾರಿಕಾ ಹಾಗೂ ಚೈತನ್ಯ ಸಂಸಾರವನ್ನು ಸರಿಪಡಿಸಲು ಚಿರಂಜೀವಿ ಮುಂದಾಗಿದ್ದಾರೆ. ಇನ್ನೂ ನಿಹಾರಿಕಾ ತಂದೆ ನಾಗಬಾಬು ರವರಿಗೆ ಕೋಪ ಜಾಸ್ತಿ ಅದರಿಂದ ಬೇರೆ ರೀತಿಯ ಪರಿಣಾಮಗಳು ಸೃಷ್ಟಿಯಾಗಬಹುದು ಎಂಬ ಕಾರಣಕ್ಕಾಗಿ ಅವರ ಸಂಸಾರ ಸರಿಪಡಿಸಲು ನೇರವಾಗಿ ಚಿರಂಜೀವಿ ಮುಂದಾಗಿದ್ದಾರೆ ಎಂಬ ಸುದ್ದಿಯೊಂದು ಕೇಳಿಬರುತ್ತಿದೆ. ಇನ್ನೂ ಚೈತನ್ಯ ರವರ ತಂದೆ ಪ್ರಭಾಕರ್‍ ರಾವು ಹಾಗೂ ಚಿರಂಜೀವಿ ರವರ ನಡುವೆ ಒಳ್ಳೆಯ ಸ್ನೇಹ ಬಾಂದವ್ಯವಿದೆ. ಎರಡೂ ಕುಟುಂಬಗಳ ದೊಡ್ಡವರು ಇಬ್ಬರ ನಡುವೆ ಏರ್ಪಟ್ಟ ವಿಬೇದಗಳನ್ನು ಸರಿಪಡಿಸಲು ಪ್ರಯತ್ನಗಳನ್ನು ಮಾಡುತ್ತಿದ್ದಾರಂತೆ. ಇನ್ನೂ ಈ ಸುದ್ದಿಯಲ್ಲಿ ಎಷ್ಟರ ಮಟ್ಟಿಗೆ ಸತ್ಯಾಂಶ ಇದೆಯೋ ಏನೋ ಸುದ್ದಿ ಮಾತ್ರ ಬಿರುಗಾಳಿಯಂತೆ ಹರಿದಾಡುತ್ತಿದೆ. ಈ ಬಗ್ಗೆ ಚಿರು ಕುಟುಂಬದಿಂದ ಯಾರೂ ಸಹ ರಿಯಾಕ್ಟ್ ಆಗದೇ ಇರುವುದು ಸಹ ಅವರ ವಿಚ್ಚೇದನದ ಸುದ್ದಿಗೆ ಮತಷ್ಟು ಬಲ ಬಂದಂತಾಗಿದೆ.

ಇನ್ನೂ ಸಿನಿರಂಗದ ಅನೇಕರು ವಿಚ್ಚೇದನಕ್ಕೂ ಮುಂಚೆ ಇದೇ ರೀತಿಯ ಪದ್ದತಿಯನ್ನು ಫಾಲೋ ಮಾಡಿದ್ದರು. ಈ ಕಾರಣದಿಂದಲೇ ನಿಹಾರಿಕಾ ಹಾಗೂ ಚೈತನ್ಯ ವಿಚ್ಚೇದನ ಪಡೆದುಕೊಳ್ಳುವುದಕ್ಕೆ ಸಿದ್ದರಾಗಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ. ಇನ್ನೂ ಕಳೆದ 2020 ರಲ್ಲಿ ರಾಜಸ್ಥಾನದ ಉದಯಪುರ್‍ ನಲ್ಲಿ ಈ ಜೋಡಿಯ ಮದುವೆ ಅದ್ದೂರಿಯಾಗಿ ನೆರವೇರಿತ್ತು. ಐದು ದಿನಗಳ ಕಾಲ ಈ ಮದುವೆ ಆಡಂಬರದಿಂದ ನೆರವೇರಿತ್ತು. ಈ ಮದುವೆಯಲ್ಲಿ ಕೇವಲ ಅವರ ಕುಟುಂಬಸ್ಥರು ಮಾತ್ರ ಭಾಗಿಯಾಗಿದ್ದರು.

Most Popular

To Top