Film News

ನಾಗಚೈತನ್ಯ ಪೊಟೋಗೆ ಲೈಕ್ ಹೊಡೆದ ಶೋಭಿತಾ, ಮತ್ತೊಮ್ಮೆ ಶುರುವಾದ ರೂಮರ್, ಇಬ್ಬರೂ ಜೊತೆಯಾಗಿ ವೆಕೇಷನ್ ಗೆ ಹೋದ್ರಾ?

ಸುಮಾರು ದಿನಗಳಿಂದ ತೆಲುಗು ಅಕ್ಕಿನೇನಿ ನಾಗಚೈತನ್ಯ ಹಾಗೂ ಶೋಭಿತಾ ಧೂಳಿಪಾಲ ನಡುವೆ ಅಫೈರ್‍ ನಡೆಯುತ್ತಿದೆ ಎಂಬ ಸುದ್ದಿ ಹರಿದಾಡುತ್ತಲೇ ಇದೆ. ಈ ಬಗ್ಗೆ ಶೋಭಿತಾ ಅನೇಕ ಬಾರಿ ಎಲ್ಲಾ ರೂಮರ್‍ ಗಳು ಎಂದರೂ ಸಹ ಈ ಸುದ್ದಿ ಮಾತ್ರ ತಣ್ಣಗಾಗುತ್ತಿಲ್ಲ. ಇದೀಗ ಅವರಿಬ್ಬರೂ ಮತ್ತೊಮ್ಮೆ ದೂರದ ಪ್ರದೇಶಕ್ಕೆ ವೆಕೇಷನ್ ಗೆ ಹಾರಿದ್ದಾರೆ ಎಂಬ ರೂಮರ್‍ ಒಂದು ವೈರಲ್ ಆಗುತ್ತಿದೆ. ನಾಗಚೈತನ್ಯ ಹಂಚಿಕೊಂಡ ಪೊಟೋಗೆ ಶೋಭಿತಾ ಲೈಕ್ ಕೊಟ್ಟಿದ್ದು, ಅವರಿಬ್ಬರು ಒಂದೇ ಸ್ಥಳದಲ್ಲಿದ್ದಾರೆ ಎಂಬ ರೂಮರ್‍ ಸೋಷಿಯಲ್ ಮಿಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ.

ನಟ ಅಕ್ಕಿನೇನಿ ನಾಗಚೈತನ್ಯ ಹಾಗೂ ಸಮಂತಾ ವಿಚ್ಚೇದನದ ಬಳಿಕ ಇಬ್ಬರೂ ಅವರವರ ಲೈಫ್ ನಲ್ಲಿ ಬ್ಯುಸಿಯಾಗಿದ್ದಾರೆ. ಸಮಂತಾ ಸಹ ಸಿನೆಮಾಗಳ ಮೇಲೆ ಪುಲ್ ಪೋಕಸ್ ಇಟ್ಟು ಬ್ಯುಸಿಯಾಗಿದ್ದಾರೆ. ಅದೇ ರೀತಿ ನಾಗಚೈತನ್ಯ ಸಹ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇನ್ನೂ ಅಕ್ಕಿನೇನಿ ನಾಗಚೈತನ್ಯ ಸಮಂತಾ ಜೊತೆಗೆ ವಿಚ್ಚೇದನ ಪಡೆದುಕೊಂಡ ಬಳಿಕ ಶೋಭಿತಾ ಧೂಳಿಪಾಲ ಎಂಬ ನಟಿಯೊಂದಿಗೆ ಡೇಟಿಂಗ್ ನಲ್ಲಿದ್ದಾರೆ ಎಂಬ ರೂಮರ್‍ ಹುಟ್ಟಿಕೊಂಡಿತ್ತು. ಅವರಿಬ್ಬರೂ ನಿರಂತರವಾಗಿ ಭೇಟಿ ಆಗುತ್ತಿರುತ್ತಾರೆ. ಒಬ್ಬರನ್ನೊಬ್ಬರು ಪ್ರೀತಿಸಿಕೊಳ್ಳುತ್ತಿದ್ದಾರೆ. ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಸಹ ಕೇಳಿಬಂದಿತ್ತು. ಈ ಹಿಂದೆ ಶೋಭಿತಾ ಸಹ ಈ ರೂಮರ್‍ ಗಳ ಬಗ್ಗೆ ರಿಯಾಕ್ಟ್ ಆಗಿದ್ದರು. ಆದರೂ ಸಹ ರೂಮರ್‍ ಗಳು ಮಾತ್ರ ಹರಿದಾಡುತ್ತಲೇ ಇದೆ. ಆದರೆ ಈ ಜೋಡಿ ಆಗಾಗ ಭೇಟಿ ಆಗುವ ಪೊಟೋಗಳು ಮಾತ್ರ ಸೋಷಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿರುತ್ತವೆ. ಜೊತೆಗೆ ಬಾಗಚೈತನ್ಯ ಶೋಭಿತಾಳನ್ನು ತನ್ನ ಹೊಸ ಮನೆಗೆ ಕರೆದುಕೊಂಡು ಹೋಗುತ್ತಿರುತ್ತಾರೆ ಎಂಬ ಸುದ್ದಿ ಸಹ ಕೇಳಿಬಂದಿತ್ತು.

ಕೆಲವು ತಿಂಗಳುಗಳ ಹಿಂದೆ ಸಹ ನಾಗಚೈತನ್ಯ ಹಾಗೂ ಶೋಭಿತಾ ಲಂಡನ್ ನಲ್ಲಿ ಕಾಣಿಸಿಕೊಂಡಿದ್ದರು. ಅಲ್ಲಿನ ಇಂಡಿಯನ್ ರೆಸ್ಟೋರೆಂಟ್ ನಲ್ಲಿ ಅವರಿಬ್ಬರು ಕಾಣಿಸಿಕೊಂಡಿದ್ದ ಪೊಟೋ ವೈರಲ್ ಆಗಿತ್ತು. ಬಳಿಕ ಕೆಲವು ದಿನಗಳ ಕಾಲ ಈ ಜೋಡಿಯ ನಡುವೆ ವಿಬೇದಗಳು ಸೃಷ್ಟಿಯಾಗಿದ್ದು ಬೇರೆಯಾಗಿದ್ದಾರೆ ಎಂಬ ರೂಮರ್‍ ಸಹ ಕೇಳಿಬಂದಿತ್ತು. ಆದರೆ ಇದೀಗ ಅವರ ಅಪೈರ್‍ ಬಗ್ಗೆ ಸುದ್ದಿಯೊಂದು ಕೇಳಿಬರುತ್ತಿದೆ. ಅಕ್ಕಿನೇನಿ ನಾಗಚೈತನ್ಯ ತಮ್ಮ ಸೊಷಿಯಲ್ ಮಿಡಿಯಾ ಖಾತೆಯಲ್ಲಿ ಸಂಜೆಯ ಸಮಯದಲ್ಲಿ ಸೂರ್ಯಕಿರಣಗಳನ್ನು ಆಸ್ವಾದಿಸುತ್ತಾ ಇರುವ ಪೊಟೋ ಒಂದನ್ನು ಹಂಚಿಕೊಂಡಿದ್ದರು. ಈ ಪೊಟೋಗೆ ಶೋಭಿತಾ ಲೈಕ್ ಹೊಡೆದಿದ್ದಾರೆ. ಈ ಪೊಟೋ ತೆಗೆದ ಸಮಯದಲ್ಲಿ ಶೋಭಿತಾ ನಾಗಚೈತನ್ಯ ಪಕ್ಕದಲ್ಲೇ ಇದ್ದಾರೆ. ಇಬ್ಬರೂ ಏಕಾಂತವಾಗಿ ದೂರದ ಪ್ರದೇಶಕ್ಕೆ ವೆಕೇಷನ್ ಗೆ ಹಾರಿದ್ದಾರೆ ಎಂಬ ರೂಮರ್‍ ಇದೀಗ ಸಖತ್ ವೈರಲ್ ಆಗುತ್ತಿದೆ.

ಇನ್ನೂ ಶೋಭಿತಾ ಧೂಳಿಪಾಲ ಬ್ಯಾಕ್ ಟು ಬ್ಯಾಕ್ ಸಿನೆಮಾಗಳ ಮೂಲಕ ಬ್ಯುಸಿಯಾಗಿದ್ದಾರೆ. ಇತ್ತೀಚಿಗೆ ತೆರೆಕಂಡ ಹಾಲಿವುಡ್ ಮಂಕಿ ಮ್ಯಾನ್ ಎಂಬ ಸಿನೆಮಾದಲ್ಲಿ ವೇಶ್ಯೆಯ ಪಾತ್ರದಲ್ಲಿ ನಟಿಸಿದ್ದರು. ಅಕ್ಕಿನೇನಿ ನಾಗಚೈತನ್ಯ ಸಹ ತಂಡೇಲ್ ಎಂಬ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನೆಮಾದಲ್ಲಿ ನ್ಯಾಚುರಲ್ ಬ್ಯೂಟಿ ಸಾಯಿಪಲ್ಲವಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

Most Popular

To Top