Film News

ತಾರಕ್ ಜೊತೆಗಿರುವ ನನ್ನ ಬಂಧವನ್ನು ಯಾರೂ ಕೆಡಿಸಲು ಆಗೋಲ್ಲ, ಆ ಯೋಚನೆ ಬಿಡಿ ಎಂದ ನಟ ಕಲ್ಯಾಣ್ ರಾಮ್……!

ಟಾಲಿವುಡ್ ಸಿನಿರಂಗದ ನಂದಮೂರಿ ಕುಟುಂಬದಲ್ಲಿ ಅನೇಕ ನಟರು ಸಿನಿರಂಗದಲ್ಲಿ ನಟಿಸುತ್ತಾ ಸಿನಿ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಈ ಕುಟುಂಬದ ನಂದಮೂರಿ ಕಲ್ಯಾಣ್ ರಾಮ್ ಸಹ ಅನೇಕ ಸಿನೆಮಾಗಳಲ್ಲಿ ನಟಿಸಿ ತನ್ನದೇ ಆದ ಅಭಿಮಾನಿ ಬಳಗ ಸಹ ಪಡೆದುಕೊಂಡಿದ್ದಾರೆ. ಸದ್ಯ ಅವರು ಡೆವಿಲ್ ಎಂಬ ಸಿನೆಮಾದ ಪ್ರಮೋಷನ್ ನಲ್ಲಿ ಬ್ಯುಸಿಯಾಗಿದ್ದಾರೆ. ಪ್ರಮೋಷನ್ ನಿಮಿತ್ತ ಅವರು ಅನೇಕ ಸಂದರ್ಶನಗಳಲ್ಲಿ ಸಹ ಭಾಗಿಯಾಗುತ್ತಿದ್ದಾರೆ. ಈ ಹಾದಿಯಲ್ಲೇ ಅವರು ಕೆಲವೊಂದು ರೂಮರ್‍ ಗಳ ಬಗ್ಗೆ ರಿಯಾಕ್ಟ್ ಆಗಿದ್ದಾರೆ. ಜೊತೆಗೆ ತಾರಕ್ ಹಾಗೂ ತಮ್ಮ ನಡುವಣ ಸಂಬಂಧದ ಬಗ್ಗೆ ಮತ್ತೊಮ್ಮೆ ಕ್ಲಾರಿಟಿ ಕೊಟ್ಟಿದ್ದಾರೆ.

ನಟ ನಂದಮೂರಿ ಕಲ್ಯಾಣ್ ರಾಮ್ ತನ್ನ ಸಿನಿ ಕೆರಿಯರ್‍ ನಲ್ಲಿ ಅನೇಕ ಪ್ಲಾಪ್ ಗಳನ್ನು ಕಂಡರು. ಆದರೆ ಕಳೆದ ವರ್ಷ ತೆರೆಕಂಡ ಬಿಂಬಿಸಾರ ಸಿನೆಮಾದ ಮೂಲಕ ಒಳ್ಳೆಯ ಹಿಟ್ ಪಡೆದುಕೊಂಡರು. ಬಳಿಕ ಅಮಿಗೋಸ್ ಸಿನೆಮಾದಲ್ಲೂ ಸಹ ಕಾಣಿಸಿಕೊಂಡರು. ಇದೀಗ ಶೀಘ್ರದಲ್ಲೇ ಡೆವಿಲ್ ಎಂಬ ಸಿನೆಮಾದ ಮೂಲಕ ರಂಜಿಸಲಿದ್ದಾರೆ. ಈ ಸಿನೆಮಾದಲ್ಲಿ ಕಲ್ಯಾಣ್ ರಾಮ್ ಬ್ರಿಟೀಷ್ ಸೀಕ್ರೇಟ್ ಏಜೆಂಟ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಕಲ್ಯಾಣ್ ರಾಮ್ ಜೊತೆಗೆ ಸಂಯುಕ್ತಾ ಮಿನನ್ ಜೋಡಿಯಾಗಿ ನಟಿಸಿದ್ದು, ಅಭಿಷೇಕ್ ನಾಮಾ ನಿರ್ದೇಶನ ಮಾಡಿದ್ದಾರೆ. ಈ ಸಿನೆಮಾ ಇದೇ ಡಿ.29 ರಂದು ತೆರೆಕಾಣಲಿದ್ದು, ಸಿನೆಮಾದ ಪ್ರಮೋಷನ್ ಕೆಲಸಗಳೂ ಸಹ ಭರದಿಂದ ಸಾಗುತ್ತಿವೆ.

ಇನ್ನೂ ಈ ಹಿಂದೆ ಬಿಂಬಿಸಾರ, ಅಮಿಗೋಸ್ ಸಿನೆಮಾ ಪ್ರಚಾರದ ಸಮಯದಲ್ಲಿ ಜೂನಿಯರ್‍ ಎನ್.ಟಿ.ಆರ್‍ ಭಾರಿ ಪ್ರಚಾರ ಮಾಡಿದ್ದರು. ಆದರೆ ಡೆವಿಲ್ ಸಿನೆಮಾದ ವಿಷಯದಲ್ಲಿ ಜೂನಿಯರ್‍ ಎನ್.ಟಿ.ಆರ್‍ ಮೌನವಾಗಿರುವ ಕಾರಣದಿಂದ ಅವರಿಬ್ಬರ ನಡುವೆ ವಿಬೇಧಗಳು ಹುಟ್ಟಿಕೊಂಡಿವೆ ಎಂಬ ರೂಮರ್‍ ಗಳು ಹುಟ್ಟಿಕೊಂಡಿದ್ದು, ಈ ಬಗ್ಗೆ ಕಲ್ಯಾಣ್ ರಾಮ್ ಕ್ಲಾರಿಟಿ ಕೊಟ್ಟಿದ್ದಾರೆ. ಈ ಬಗ್ಗೆ ಯೂಟ್ಯೂಬ್ ಚಾನಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಕಲ್ಯಾಣ್ ರಾಮ್ ತಾರಕ್ ಜೊತೆಗಿನ ವಿಬೇದಗಳ ರೂಮರ್‍ ಬಗ್ಗೆ ರಿಯಾಕ್ಟ್ ಆಗಿದ್ದಾರೆ. ನಮ್ಮಿಬ್ಬರದ್ದು ಅಣ್ಣ ತಮ್ಮಂದಿರ ಸಂಬಂಧ. ತಾರಕ್ ಜೊತೆಗಿನ ನನ್ನ ಸಂಬಂಧವನ್ನು ಯಾರು ಅಳಿಸೋಕೆ ಆಗೋಲ್ಲ ಇದನ್ನು ನೆನಪಿಟ್ಟುಕೊಳ್ಳಬೇಕು. ಬಹುತೇಕ ಎಲ್ಲಾ ವಿಚಾರಗಳಲ್ಲೂ ನಾವಿಬ್ಬರು ಒಂದೆ ನಿರ್ಣಯಕ್ಕೆ ಕಟ್ಟುಬಿದ್ದಿರುತ್ತೇವೆ. ಈವೆಂಟ್ ಗಳ ವಿಚಾರದಲ್ಲಿ ನಿಮಗಿರುವಂತಹ ತಪ್ಪು ಕಲ್ಪನೆಯನ್ನು ತೆಗೆದು ಹಾಕಿ ಎಂದು ಸ್ಟ್ರಾಂಗ್ ಆಗಿಯೇ ಕೌಂಟರ್‍ ಕೊಟ್ಟಿದ್ದಾರೆ.  ಆ ಮೂಲಕ ಅಣ್ಣ ತಮ್ಮಂದಿರ ಬಗ್ಗೆ ವೈರಲ್ ಆದ ರೂಮರ್‍ ಗಳಿಗೆ ಚೆಕ್ ಇಟ್ಟಿದ್ದಾರೆ.

Most Popular

To Top