ಹುಡುಗಿಯೊಂದಿಗೆ ಸಿಕ್ಕಿಬಿದ್ದ ನಟ ವಿಶಾಲ್, ಪಾಪರಾಜಿಗಳನ್ನು ಕಂಡು ತಪ್ಪಿಸಿಕೊಂಡ ಹೋದ ಕಾಲಿವುಡ್ ಸ್ಟಾರ್ ನಟ..!

Follow Us :

ತಮಿಳಿನ ಸ್ಟಾರ್‍ ನಟರಲ್ಲಿ ಒಬ್ಬರಾದ ವಿಶಾಲ್ ಸಾಲು ಸಾಲು ಹಿಟ್ ಸಿನೆಮಾಗಳ ಮೂಲಕ ದೊಡ್ಡ ಅಭಿಮಾನಿಗ ಬಳಗವನ್ನು ಸಹ ದಕ್ಕಿಸಿಕೊಂಡಿದ್ದಾರೆ. ಸದ್ಯ ವಿಶಾಲ್ ಗೆ 46 ರ ವಯಸ್ಸಾಗಿದ್ದು ಮದುವೆಯಾಗಿಲ್ಲ. ಈಗಾಗಲೇ ಎರಡು ಬಾರಿ ಅವರ ಮದುವೆ ಕ್ಯಾನ್ಸಲ್ ಆಗಿದ್ದು, ಓರ್ವ ನಟಿಯನ್ನು ಮದುವೆಯಾಗುವುದಾಗಿ ಮೂರನೇ ಭಾರಿ ಪ್ರಕಟಿಸಿದ್ದರು. ಇದೀಗ ವಿಶಾಲ್ ಯುವತಿಯೊಂದಿಗೆ ಕಾಣಿಸಿಕೊಂಡಿದ್ದು, ಕ್ಯಾಮೆರಾಗಳನ್ನು ನೋಡಿದ ಆತ ತಪ್ಪಿಸಿಕೊಂಡು ಹೋಗಿದ್ದಾರೆ. ಈ ಸಂಬಂಧ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಕಾಲಿವುಡ್ ಸ್ಟಾರ್‍ ನಟ ವಿಶಾಲ್ ಗೆ ಸದ್ಯ 46ರ ವಯಸ್ಸಾಗಿದೆ. ಮದುವೆ ವಯಸ್ಸು ದಾಟಿದರೂ ಸಹ ಬ್ಯಾಚಿಲರ್‍ ಆಗಿಯೇ ಇದ್ದಾರೆ. ಈ ಹಿಂದೆ ಎರಡು ಬಾರಿ ಅವರ ಮದುವೆ ನಿಂತುಹೋಗಿತ್ತು. ಕೆಲವು ದಿನಗಳ ಹಿಂದೆಯಷ್ಟೆ ತಾನು ಓರ್ವ ನಟಿಯನ್ನು ಮದುವೆಯಾಗುವುದಾಗಿ ಘೋಷಣೆ ಮಾಡಿದ್ದರು. ಆದರೆ ಮದುವೆ ಯಾವಾಗ ಎಂಬ ವಿಚಾರ ಮಾತ್ರ ತಿಳಿಸಿರಲಿಲ್ಲ. ಈ ಹಿಂದೆ ಲೇಡಿ ವಿಲನ್ ವರಲಕ್ಷ್ಮೀ ಶರತ್ ಕುಮಾರ್‍ ಜೊತೆಗೆ ಪ್ರೇಮಾಯಣ ಸಾಗಿಸಿ ಬಳಿಕ ಬ್ರೇಕಪ್ ಮಾಡಿಕೊಂಡರು. ತಮ್ಮಿಬ್ಬರ ಮಧ್ಯೆ ಇರೋದು ಸ್ನೇಹ ಮಾತ್ರ ಎಂದು ಹೇಳುತ್ತಿರುತ್ತಾರೆ ವಿಶಾಲ್. ಇದನ್ನೆಲ್ಲಾ ಪಕ್ಕಕ್ಕಿಟ್ಟರೇ ವಿಶಾಲ್ ಇದೀಗ ಯುವತಿಯೊಂದಿಗೆ ತಿರುಗಾಡುತ್ತಿದ್ದಾರೆ. ಯುವತಿಯೊಂದಿಗೆ ತಿರುಗಾಡುವಾಗ ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದಾರೆ. ಆದರೆ ಕ್ಯಾಮೆರಾ ಕಣ್ಣಿನಿಂದ ತಪ್ಪಿಸಿಕೊಂಡು ಹೋಗಿದ್ದಾರೆ.

ನಟ ವಿಶಾಲ್ ಶೂಟಿಂಗ್ ನಿಮಿತ್ತ ನ್ಯೂಯಾರ್ಕ್ ಸಿಟಿಯಲ್ಲಿದ್ದಾರೆ. ಅಲ್ಲಿನ ಬೀದಿಗಳಲ್ಲಿ ಯುವತಿಯೊಬ್ಬರೊಂದಿಗೆ ತಿರುಗಾಡುತ್ತಾ ಕಾಣಿಸಿಕೊಂಡಿದ್ದಾರೆ. ಇನ್ನೂ ತಮ್ಮ ವಿಡಿಯೋ ಮಾಡುತ್ತಿದ್ದಾರೆ ಎಂಬುದನ್ನು ಗಮನಿಸಿದ ವಿಶಾಲ್ಕೂಡಲೇ ಮುಖವನ್ನು ತಾನು ಧರಿಸಿದ ಜರ್ಕಿನ್ ಮೂಲಕ ಮುಚ್ಚಿಕೊಂಡು ಅಲ್ಲಿಂದ ಹೋಗಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ. ವಿಡಿಯೋ ನೋಡಿದ ಅನೇಕರು ಆ ಹುಡುಗಿ ಯಾರಿರಬಹುದು ಎಂದು ಕುತೂಹಲ ವ್ಯಕ್ತಪಡಿಸುತ್ತಿದ್ದಾರೆ, ಮತ್ತೆ ಕೆಲವರು ಇದೊಂದು ಪ್ರಮೋಷನ್ ಇರಬಹುದು ಎಂದು ಕಾಮೆಂಟ್ಸ್ ಮಾಡಿದ್ದಾರೆ. ವಿಶಾಲ್ ಶೂಟಿಂಗ್ ನಿಮಿತ್ತ ನ್ಯೂಯಾರ್ಕ್‌ಗೆ ಹೋಗಿದ್ದಾರೆ ಅಷ್ಟೆ ಎಂದು ಮತ್ತೆ ಕೆಲವರು ಅಭಿಪ್ರಾಯ ಪಡುತ್ತಿದ್ದಾರೆ.

ಇನ್ನೂ ವಿಶಾಲ್ ಕೊನೆಯದಾಗಿ ಮಾರ್ಕ್ ಆಂಟೋನಿ ಎಂಬ ಥ್ರಿಲ್ಲರ್‍ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದು, ಈ ಸಿನೆಮಾ ಸೂಪರ್‍ ಹಿಟ್‌ ಆಗಿ ಒಳ್ಳೆಯ ಕಲೆಕ್ಷನ್ ಸಹ ಮಾಡಿದೆ. ಸದ್ಯ ವಿಶಾಲ್ ರತ್ನಂ, ಡಿಟೆಕ್ಟೀವ್ 2 ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ವಿಶಾಲ್ ರವರ ವಿಡಿಯೋ ವೈರಲ್ ಆಗುತ್ತಿದ್ದು, ಈ ಬಗ್ಗೆ ಅವರೇ ಸ್ಪಷ್ಟನೆ ನೀಡಬೇಕಿದೆ.