ಹೊಸ ಪ್ರಿಯಕರಿನಿಗೂ ಕೈಕೊಟ್ರಾ ಶ್ರುತಿ ಹಾಸನ್, ಜೋರಾದ ಬ್ರೇಕಪ್ ರೂಮರ್….!

Follow Us :

ಸ್ಟಾರ್‍ ನಟಿ ಶ್ರುತಿ ಹಾಸನ್ ಸಿನೆಮಾಗಳ ಜೊತೆಗೆ ವೈಯುಕ್ತಿಕ ವಿಚಾರಗಳಿಂದಲೂ ಸಹ ಸಖತ್ ಸುದ್ದಿಯಾಗುತ್ತಿರುತ್ತಾರೆ. ಸುಮಾರು ಎರಡು ವರ್ಷಗಳಿಂದ ಶ್ರುತಿ ಹಾಸನ್ ಡೂಡಲ್ ಆರ್ಟಿಸ್ಟ್ ಶಾಂತಾನು ಹಜಾರಿಕಾ ಜೊತೆಗೆ ರಿಲೇಷನ್ ಶಿಪ್ ನಲ್ಲಿದ್ದಾರೆ. ಸುಮಾರು ದಿನಗಳಿಂದ ಇಬ್ಬರೂ ಸಹಜೀವನ ಸಹ ನಡೆಸುತ್ತಿದ್ದಾರೆ. ಆದರೆ ಇದೀಗ ಈ ಜೋಡಿಯ ನಡುವೆ ವಿಬೇದಗಳು ಹುಟ್ಟಿಕೊಂಡಿದ್ದು, ಅವರಿಬ್ಬರು ಬ್ರೇಕಪ್ ಮಾಡಿಕೊಂಡಿದ್ದಾರೆ ಎಂಬ ರೂಮರ್‍ ಒಂದು ಸಿನಿವಲಯದಲ್ಲಿ ಹಾಟ್ ಟಾಪಿಕ್ ಆಗಿ ಹರಿದಾಡುತ್ತಿದೆ.

ಸಿನಿರಂಗದಲ್ಲಿ ಅನೇಕ ನಟಿಯರು ತಮ್ಮ ರಿಲೇಷನ್ ಶಿಪ್ ಬಗ್ಗೆ ಸೀಕ್ರೇಟ್ ಆಗಿಯೇ ಇಡುತ್ತಾರೆ. ಆದರೆ ಶ್ರುತಿ ಹಾಸನ್ ಮಾತ್ರ ಎಲ್ಲರಿಗಿಂತಲೂ ವಿಭಿನ್ನ ಎಂದೇ ಹೇಳಬಹುದು. ಆಕೆ ಪಾಶ್ವಾತ್ಯ ಸಂಸ್ಕೃತಿಯನ್ನು ಫಾಲೋ ಮಾಡುತ್ತಿರುತ್ತಾರೆ. ಈ ಹಾದಿಯಲ್ಲೇ ಆಕೆ ರಿಲೇಷನ್ಸ್, ಅಫೈರ್‍ ಬಗ್ಗೆ ಒಪೆನ್ ಆಗಿಯೇ ಮಾಡುತ್ತಿದ್ದಾರೆ. ಆಕೆ ತನ್ನ ಅಫೈರ್‍ ಬಗ್ಗೆ ಯಾವುದೇ ರೀತಿಯಲ್ಲೂ ನಿಗೂಡವಾಗಿ ಇಡಲಿಲ್ಲ. ಸುಮಾರು ದಿನಗಳ ಕಾಲ ಲಂಡನ್ ಮೂಲದ ಮೈಖಲ್ ಕೊರ್ಸ್ಲೆ ಎಂಬಾತನೊಂದಿಗೆ ಡೇಟಿಂಗ್ ನಡೆಸಿದರು. ಆತನೊಂದಿಗೆ ಸಹಜೀವನ ಸಹ ನಡೆಸಿದ್ದರು. ಬಳಿಕ ಆಕೆ ಆತನೊಂದಿಗೆ ಬ್ರೇಕಪ್ ಮಾಡಿಕೊಂಡರು. ಬಳಿಕ ಆಕೆ ಖ್ಯಾತ ಡೂಡಲ್ ಆರ್ಟಿಸ್ಟ್ ಶಾಂತಾನು ಹಜಾರಿಕಾ ಎಂಬಾತನೊಂದಿಗೆ ಡೇಟಿಂಗ್ ನಡೆಸುತ್ತಿದ್ದಾರೆ.

ನಟಿ ಶ್ರುತಿ ಹಾಸನ್ ಮೈಖಲ್ ಜೊತೆಗೆ ಬ್ರೇಕಪ್ ಮಾಡಿಕೊಂಡ ಬಳಿಕ ಡಿಪ್ರೆಷನ್ ಗೆ ಹೋಗಿದ್ದರು. ಬಳಿಕ ಆಕೆ ಮತ್ತೆ ಸಿನೆಮಾಗಳತ್ತ ಮುಖ ಮಾಡಿ ಸಕ್ಸಸ್ ಪಡೆದುಕೊಂಡರು. ಬಳಿಕ ಆಕೆ ಡೂಡುಲ್ ಆರ್ಟಿಸ್ಟ್ ಶಾಂತಾನು ಹಾಜಾರಿಕಾ ಎಂಬಾತನೊಂದಿಗೆ ರಿಲೇಷನ್ ಶಿಪ್ ನಲ್ಲಿದ್ದಾರೆ. ಮುಂಬೈನಲ್ಲಿ ಅವರಿಬ್ಬರೂ ಒಂದೇ ಮನೆಯಲ್ಲಿ ವಾಸವಿದ್ದಾರೆ ಎಂಬ ರೂಮರ್‍ ಸಹ ಇದೆ. ಆತನೊಂದಿಗೆ ಇರುವಂತಹ ರೊಮ್ಯಾಂಟಿಕ್ ಮೂಮೆಂಟ್ಸ್ ಗಳನ್ನು ಸಹ ಶ್ರುತಿ ಹಾಸನ್ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದರು. ಆದರೆ ಸದ್ಯ ಹರಿದಾಡುತ್ತಿರುವ ರೂಮರ್‍ ನಂತೆ ಶಾಂತಾನು ಹಾಗೂ ಶ್ರುತಿಹಾಸನ್ ನಡುವೆ ಬ್ರೇಕಪ್ ಆಗಿದೆ ಎನ್ನಲಾಗಿದೆ. ಕೆಲವು ದಿನಗಳಿಂದ ಶ್ರುತಿಹಾಸನ್ ತನ್ನ ಇನ್ಸ್ಟಾಖಾತೆಯಲ್ಲಿ ಶಾಂತಾನು ಜೊತೆಗಿರುವ ಪೊಟೋಗಳು ಹಂಚಿಕೊಳ್ಳುತ್ತಿಲ್ಲ. ಜೊತೆಗೆ ಶಾಂತಾನು ಜೊತೆಗೆ ಹಂಚಿಕೊಂಡ ಪೊಟೋಗಳನ್ನು ಸಹ ಆಕೆ ಡಿಲೀಟ್ ಮಾಡಿದ್ದಾರೆ. ಈ ಕಾರಣದಿಂದ ಅವರಿಬ್ಬರ ನಡುವೆ ಬ್ರೇಕಪ್ ಆಗಿದೆ ಎನ್ನಲಾಗಿದೆ. ಆದರೆ ಈ ಕುರಿತು ಯಾವುದೇ ಅಧಿಕೃತ ಮಾಹಿತಿ ಇಲ್ಲ.

ಇನ್ನೂ ಶ್ರುತಿ ಹಾಸನ್ ಸಿನೆಮಾ ಕೆರಿಯರ್‍ ತುಂಬಾ ಚೆನ್ನಾಗಿಯೇ ನಡೆಯುತ್ತಿದೆ.  ಕೊನೆಯದಾಗಿ ಆಕೆ ಸಲಾರ್‍ ಎಂಬ ಸಿನೆಮಾದಲ್ಲಿ ಕಾಣಿಸಿಕೊಂಡಿದ್ದರು. ಸದ್ಯ ಆಕೆಯ ಅಡವಿ ಶೇಷ್ ಜೊತೆಗೆ ಡೆಯಾಯಿಟ್ ಎಂಬ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಜತೆಗೆ ಸಲಾರ್‍-2 ನಲ್ಲೂ ಸಹ ನಟಿಸಲಿದ್ದಾರೆ. ಇದರ ಜೊತೆಗೆ ಆಕೆಯ ಕೈಯಲ್ಲಿ ಮತಷ್ಟು ಸಿನೆಮಾಗಳಿವೆ ಎನ್ನಲಾಗಿದೆ.