ಸಲಾರ್ ಸಿನೆಮಾದ ಕಾರಣದಿಂದ ಆ ಭಾಗಕ್ಕೆ ಸರ್ಜರಿ ಮಾಡಿಸಿಕೊಂಡ ನಟಿ, ಆಸ್ಪತ್ರೆ ಪಾಲಾದ ನಟಿ ಶ್ರೇಯಾ ರೆಡ್ಡಿ…..!

Follow Us :

ಬಾಹುಬಲಿ ಪ್ರಭಾಸ್ ಹಾಗೂ ಕೆಜಿಎಫ್ ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ಕಾಂಬಿನೇಷನ್ ನಲ್ಲಿ ಸಲಾರ್ ಸಿನೆಮಾ ಭಾರಿ ನಿರೀಕ್ಷೆಯೊಂದಿಗೆ ತೆರೆಕಂಡಿದ್ದು, ಭರ್ಜರಿಯಾಗಿ ಪ್ರದರ್ಶನ ಕಾಣುತ್ತಿದೆ. ಈ ಸಿನೆಮಾ ಇದೀಗ ಕೋಟಿಗಟ್ಟಲೆ ಕಲೆಕ್ಷನ್ ಮಾಡುತ್ತಾ ಬ್ಲಾಕ್ ಬ್ಲಸ್ಟರ್‍ ಹಿಟ್ ಆಗಿದೆ. ಇದೀಗ ಸಿನಿರಂಗದಲ್ಲಿ ಸಲಾರ್‍ ಸಿನೆಮಾದ ವಿಚಾರವೆ ಹೆಚ್ಚು ಚರ್ಚೆಯಾಗುತ್ತಿದೆ. ಈ ಸಿನೆಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡ ನಟಿ ಶ್ರೇಯಾ ರೆಡ್ಡಿ ಈ ಸಿನೆಮಾದ ಕಾರಣದಿಂದ ಆಸ್ಪತ್ರೆಯ ಪಾಲಾಗಿ, ಆ ಭಾಗಕ್ಕೆ ಸರ್ಜರಿ ಮಾಡಿಸಿಕೊಂಡರಂತೆ. ಸದ್ಯ ಈ ಸುದ್ದಿ ಸಿನಿವಲಯದಲ್ಲಿ ಹಾಟ್ ಟಾಪಿಕ್ ಆಗಿದೆ.

ಪ್ರಶಾಂತ್ ನೀಲ್ ಹಾಗೂ ಹೊಂಬಾಳೆ ಫಿಲಂಸ್ ಕಾಂಬಿನೇಷನ್ ನಲ್ಲಿ ಸಲಾರ್‍ ಸಿನೆಮಾ ತೆರೆಕಂಡಿದ್ದು, ಭಾರಿ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ಈ ಸಿನೆಮಾದಲ್ಲಿ ದೊಡ್ಡ ತಾರಾಬಳಗವೇ ಇದೆ. ಪ್ರಭಾಸ್, ಶ್ರುತಿ ಹಾಸನ್, ಪೃಥ್ವಿರಾಜ್ ಸುಕುಮಾರನ್, ಜಗಪತಿಬಾಬು, ದೇವರಾಜ್ ಸೇರಿದಂತೆ ಅನೇಕ ಸ್ಟಾರ್‍ ಕಲಾವಿದರು ನಟಿಸಿದ್ದಾರೆ. ಅದರಲ್ಲೂ ನಟಿ ಶ್ರೇಯಾ ರೆಡ್ಡಿ ರವರ ಪಾತ್ರ ಸಿನೆಮಾದಲ್ಲಿ ಹೈಲೈಟ್ ಎಂದೇ ಹೇಳಬಹುದಾಗಿದೆ. ಸಲಾರ್‍ ನಲ್ಲಿ ಶ್ರೇಯಾ ರೆಡ್ಡಿ ರಾಧಾ ರಾಮ ಎಂಬ ಪ್ರಮುಖ ಪಾತ್ರ ಪೋಷಣೆ ಮಾಡಿದ್ದಾರೆ. ಈ ಪಾತ್ರ ಲೇಡಿ ವಿಲನ್ ಪಾತ್ರವಾಗಿದ್ದು, ಆಕೆಗೆ ಒಳ್ಳೆಯ ಕ್ರೇಜ್ ಸಹ ಈ ಪಾತ್ರದಿಂದ ಬಂದಿದೆ ಎಂದು ಆಕೆಯೇ ಸಂದರ್ಶನವೊಂದರಲ್ಲಿ ತಿಳಿಸಿದ್ದರು.

ಸಂದರ್ಶನದಲ್ಲಿ ಭಾಗಿಯಾದ ಶ್ರೇಯಾ ರೆಡ್ಡಿ ತನ್ನ ಪಾತ್ರದ ಕಾರಣದಿಂದ ಆಕೆ ಕೆಲವೊಂದು ಸಮಸ್ಯೆಗಳನ್ನು ಸಹ ಎದುರಿಸಿದ್ದರಂತೆ. ಈ ಸಿನೆಮಾದ ಕಾರಣದಿಂದ ಆಕೆ ಆಸ್ಪತ್ರೆಯ ಪಾಲಾದರಂತೆ. ಆಕೆ ಸಲಾರ್‍ ಸಿನೆಮಾದಲ್ಲಿ ಪಾತ್ರಕ್ಕಾಗಿ ದೊಡ್ಡದಾದ ಕಿವಿಯೋಲೆ ಇಟ್ಟುಕೊಳ್ಳಬೇಕಾಗಿತ್ತು. ಅದರಿಂದ ನನ್ನ ಕಿವಿಗೆ ಸಮಸ್ಯೆಯಾಗಿತ್ತಯ. ಅದರಿಂದ ಶೂಟಿಂಗ್ ಪೂರ್ಣಗೊಂಡ ಬಳಿಕ ಆಸ್ಪತ್ರೆಗೆ ಹೋಗಿ ಸರ್ಜರಿ ಮಾಡಿಸಿಕೊಳ್ಳಬೇಕಾಗಿತ್ತು ಎಂದು ಶ್ರೇಯಾರೆಡ್ಡಿ ಸಂದರ್ಶನದಲ್ಲಿ ಹೇಳಿದ್ದಾರೆ. ಜೊತೆಗೆ ನಿರ್ದೇಶಕ ಪ್ರಶಾಂತ್ ನೀಲ್ ರವರು ಎಲ್ಲರನ್ನೂ ಡಾರ್ಕ್ ಕಲರ್‍ ನಲ್ಲಿ ತೋರಿಸಿದ್ದಾರೆ. ನಾನು ಧರಿಸುವ ಬಟ್ಟೆಗಳೂ ಸಹ ಡಾರ್ಕ್ ಕಲರ್‍ ನಲ್ಲೇ ಇತ್ತು. ಆದರೆ ನಾನು ಆಗೊಲ್ಲ ಎಂದು ಎಲ್ಲೋ ಕಲರ್‍ ಸೀರೆಯನ್ನು ಧರಿಸಿಕೊಂಡೆ. ಆದರೆ ನಿರ್ದೇಶಕ ಬೇಡ ಎಂದು ಹೇಳಿದರು. ನಿರ್ದೇಶಕ ಎಷ್ಟೇ ಹೇಳಿದರೂ ನಾನು ಮಾತ್ರ ಎಲ್ಲೋ ಕಲರ್‍ ಸೀರೆಯನ್ನು ಕಟ್ಟಿಕೊಂಡೆ ಎಂದು ಆಕೆ ಹೇಳಿದ್ದಾರೆ. ಇನ್ನೂ ಶ್ರೇಯಾ ರೆಡ್ಡಿ ಪವನ್ ಕಲ್ಯಾಣ್ ರವರ ಒಜಿ ಸಿನೆಮಾದಲ್ಲೂ ಸಹ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ.