Film News

ನಂದಮೂರಿ ತಾರಕರತ್ನ ಆರೋಗ್ಯ ಹೇಗಿದೆ, ಆರೋಗ್ಯದ ಬಗ್ಗೆ ಅಪ್ಡೇಟ್ ಇಲ್ಲದ ಕಾರಣ ಆಂತಕದಲ್ಲಿ ಫ್ಯಾನ್ಸ್…!

ನಂದಮೂರಿ ಕುಟುಂಬದ ನಟ ತಾರಕರತ್ನ ಅನಾರೋಗ್ಯಕ್ಕೆ ಗುರಿಯಾಗಿದ್ದಾರೆ. ಲೋಕೇಶ್ ಪಾದಯಾತ್ರೆ ನಡೆಯುತ್ತಿದ್ದಾಗ  ತಾರಕರತ್ನ ರವರಿಗೆ ಹೃದಯಾಘಾತ ಆಗಿದ್ದು, ಕೂಡಲೇ ಹತ್ತಿರದ ಆಸ್ಪತ್ರೆಯಲ್ಲಿ ದಾಖಲು ಮಾಡಿ ಚಿಕಿತ್ಸೆ ನೀಡಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಾರಾಯಣ ಹೃದಯಾಲದ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೂ ಸದ್ಯ ತಾರಕರತ್ನ ಆರೋಗ್ಯ ಸ್ಥಿತಿ ಹೇಗಿದೆ ಎಂಬ ಮಾಹಿತಿ ಸಿಗದೇ ಅಭಿಮಾನಿಗಳಲ್ಲಿ ಆತಂಕ ಹೆಚ್ಚಾಗುತ್ತಿದೆ.

ಕಳೆದ ಜ.27 ರಂದು ನಂದಮೂರಿ ತಾರಕರತ್ನ ಹೃದಯಘಾತಕ್ಕೆ ಗುರಿಯಾಗಿದ್ದರು, ಆಂಧ್ರದ ತೆಲುಗುದೇಶಂ ಪಾರ್ಟಿ ಪ್ರಧಾನ ಕಾರ್ಯದರ್ಶಿ ನಾರಾ ಲೋಕೇಶ್ ಪಾದಯಾತ್ರೆ ಕುಪ್ಪಂ ನಲ್ಲಿ ಆರಂಭವಾಗಿದ್ದು, ಈ ವೇಳೆ ನಂದಮೂರಿ ಕುಟುಂಬದ ಅನೇಕರು ಭಾಗಿಯಾಗಿದ್ದರು. ಈ ಯಾತ್ರೆಯಲ್ಲಿ ತಾರಕರತ್ನ ಸಹ ಭಾಗಿಯಾಗಿದ್ದರು. ಈ ವೇಳೆ ದಿಢೀರ್‍ ನೇ ತಾರಕರತ್ನ ಕುಸಿದು ಬಿದ್ದಿದ್ದಾರೆ. ಇನ್ನೂ ಕೂಡಲೇ ಸ್ಥಳೀಯ ಆಸ್ಪತ್ರೆಯಲ್ಲಿ ತಾರಕರತ್ನ ರವರನ್ನು ದಾಖಲು ಮಾಡಲಾಗಿತ್ತು. ಬಳಿಕ ಅದೇ ದಿನ ಹೆಚ್ಚಿನ ಚಿಕಿತ್ಸೆಗಾಗಿ ಆತನನ್ನು ಬೆಂಗಳೂರಿನ ನಾರಾಯಣ ಹೃದಯಾಲಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಬಳಿಕ ಅವರ ಆರೋಗ್ಯದ ಬಗ್ಗೆ ಆಗಾಗ ಹೆಲ್ತ್ ಬುಲೆಟಿನ್ಸ್ ಸಹ ನೀಡುತ್ತಿದ್ದರು ಅಲ್ಲಿನ ವೈದ್ಯರು. ಇನ್ನೂ ತಾರಕರತ್ನ ಶೀಘ್ರ ಗುಣಮುಖರಾಗಲಿ ಎಂದು ಅವರ ಅಭಿಮಾನಿಗಳು ಪ್ರಾರ್ಥನೆಗಳನ್ನು ಸಹ ಮಾಡುತ್ತಿದ್ದಾರೆ.

ಇನ್ನೂ ತಾರಕರತ್ನ ರವರಿಗೆ ಹೆಚ್ಚಿನ ಚಿಕಿತ್ಸೆ ಅಗತ್ಯ ಬಿದ್ದರೇ ವಿದೇಶಗಳಿಗೂ ಸಹ ಏರ್‍ ಅಂಬ್ಯುಲೆನ್ಸ್ ಮೂಲಕ ಕರೆದುಕೊಂಡು ಹೋಗುವುದಾಗಿ ಸಹ ಹೇಳಲಾಗುತ್ತಿತ್ತು. ಆದರೆ ವಿದೇಶದ ವೈದ್ಯರನ್ನೇ ಬೆಂಗಳೂರಿಗೆ ಕರೆತಂದಿದ್ದಾರೆ ಎಂದೂ ಸಹ ಕೇಳಿಬರುತ್ತಿದೆ. ಇನ್ನೂ ಈ ಸೋಮವಾರ ಅಥವಾ ಮಂಗಳವಾರ ತಾರಕರತ್ನ ಹೆಲ್ತ್ ಬುಲೆಟಿನ್ ಮೂಲಕ ಅವರ ಆರೋಗ್ಯ ಸಮಸ್ಯೆಯ ಬಗ್ಗೆ ತಿಳಿಸುವುದಾಗಿ ಹೇಳಲಾಗಿತ್ತು. ತನ್ನ ಫ್ಯಾನ್ಸ್ ಸಹ ತಾರಕರತ್ನ ಆರೋಗ್ಯ ಪರಿಸ್ಥಿತಿಯನ್ನು ತಿಳಿಯಲು ಕುತೂಹಲದಿಂದ ಕಾದಿದ್ದರು. ಆದರೆ ಯಾವುದೇ ಹೆಲ್ತ್ ಬುಲೆಟಿನ್ ಬರಲಿಲ್ಲ. ಇನ್ನೂ ತಾರಕರತ್ನ ರವರ ಹೆಲ್ತ್ ಬುಲೆಟಿನ್ ಬಾರದ ಕಾರಣ ಆತನಿಗೆ ಏನಾಗಿದ ಎಂಬ ಆತಂಕ ಅಭಿಮಾನಿಗಳಲ್ಲಿ ಮನೆ ಮಾಡಿದೆ. ತಾರಕರತ್ನ ಆರೋಗ್ಯ ಮತಷ್ಟು ಕ್ಷೀಣಿಸಿದೆ ಎಂಬ ಪ್ರಚಾರಗಳೂ ಸಹ ನಡೆಯುತ್ತಿದೆ.

ಇನ್ನೂ ತಾರಕರತ್ನ ಶೀಘ್ರದಲ್ಲೇ ಗುಣಮುಖರಾಗಿ ಬರಬೇಕು ಎಂದು ನಂದಮೂರಿ ಕುಟುಂಬದ ಅಭಿಮಾನಿಗಳು ಪ್ರಾರ್ಥನೆ ಮಾಡುತ್ತಿದ್ದಾರೆ. ಇನ್ನೂ ನಂದಮೂರಿ ಬಾಲಕೃಷ್ಣ ಸಹ ಯಗ್ನ ಯಾಗಾದಿಗಳನ್ನು ಸಹ ಮಾಡುತ್ತಿದ್ದಾರೆ ಎಂದು ಸಹ ಹೇಳಲಾಗುತ್ತಿದೆ. ಇನ್ನೂ ನಂದಮೂರಿ ತಾರಕರತ್ನ ಆರೋಗ್ಯದ ಬಗ್ಗೆ ಬಾಲಕೃಷ್ಣ ರವರೇ ನೋಡಿಕೊಳ್ಳುತ್ತಿದ್ದಾರೆ. ವೈದ್ಯರು ಸಹ ಬಾಲಕೃಷ್ಣ ರವರಿಗೆ ತಾರಕರತ್ನ ರವರಿಗೆ ಸಂಬಂಧಿಸಿದ ಹೆಲ್ತ್ ಅಪ್ಡೇಟ್ಸ್ ಸಹ ನೀಡುತ್ತಿರುತ್ತಾರೆ ಎಂದು ಹೇಳಲಾಗುತ್ತಿದೆ.

Most Popular

To Top