ಪ್ರೇಮಿಗಳ ದಿನದಂದು ತನ್ನ ಲವರ್ ಅನ್ನು ಪರಿಚಯಿಸಿದ ವರುಣ್, ಷಾಕ್ ಆದ ಅಭಿಮಾನಿಗಳು….!

Follow Us :

ಅನೇಕ ಸಿನೆಮಾ ಸೆಲೆಬ್ರೆಟಿಗಳು ವ್ಯಾಲೆಂಟೈನ್ ದಿನದ ಅಂಗವಾಗಿ ಅನೇಕ ಪೋಸ್ಟ್ ಗಳನ್ನು ಹಂಚಿಕೊಂಡಿದ್ದಾರೆ. ತಾವು ಪ್ರೀತಿಸುವ ವ್ಯಕ್ತಿಗೆ ವಿಶೇಷವಾಗಿ ವಿಶ್ ಸಹ ಮಾಡಿದ್ದಾರೆ. ಇದೀಗ ಮೆಗಾ ಕುಟುಂಬದ ವರುಣ್ ತೇಜ್ ಸಹ ವ್ಯಾಲೆಂಟೈನ್ ಡೇ ಸಂದರ್ಭವಾಗಿ ವಿಶೇಷ ಪೋಸ್ಟ್ ಹಂಚಿಕೊಂಡಿದ್ದಾರೆ. ಸುಮಾರು ದಿನಗಳಿಂದ ವರುಣ್ ತೇಜ್ ಮದುವೆಯ ಬಗ್ಗೆ ಸುದ್ದಿಗಳು ಕೇಳಿಬರುತ್ತಲೇ ಇದೆ. ಆತನ ಲವರ್‍ ಯಾರು ಎಂಬ ವಿಚಾರವನ್ನು ಆ ಪೋಸ್ಟ್ ಮೂಲಕ ರಿವೀಲ್ ಮಾಡಿದ್ದಾರೆ. ವರುಣ್ ತೇಜ್ ಪ್ರೀತಿಸುತ್ತಿರುವವರು ಯಾರು ಎಂಬ ವಿಚಾರಕ್ಕೆ ಬಂದರೇ,

ಸಿನೆಮಾ ಸೆಲೆಬ್ರೆಟಿಗಳು ಲವರ್ಸ್ ಡೇ ಅಂಗವಾಗಿ ಪ್ರೀತಿಯ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್ ನಲ್ಲಿ ವರುಣ್ ತನ್ನ ಪ್ರೇಯಸಿಯನ್ನು ಪರಿಚಯಿಸಿದ್ದಾರೆ. ಆದರೆ ಆತನ ಪ್ರೇಯಸಿ ಬೇರೆ ಯಾರೂ ಅಲ್ಲ ವ್ಯಾಯಾಮ ಶಾಲೆ. ಹೌದು ವರುಣ್ ತೇಜ್ ಜಿಮ್ ಪೊಟೊ ಶೇರ್‍ ಮಾಡಿ ಹ್ಯಾಪಿ ವ್ಯಾಲೆಂಟೈನ್ ಡೇ ಎಂದು ಪೋಸ್ಟ್ ಮಾಡಿದ್ದಾರೆ. ಜೊತೆಗೆ ಹಾರ್ಟ್ ಸಿಂಬಲ್ ಸಹ ಹಾಕಿ ಕಾಮೆಂಟ್ ಮಾಡಿದ್ದಾರೆ. ಆ ಮೂಲಕ ತಾನು ಪ್ರೇಮಿಗಳ ದಿನದಂದು ತುಂಬಾ ಪ್ರೀತಿಸುವ ಪ್ರದೇಶವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಸದ್ಯ ಈ ಪೊಟೋ ವೈರಲ್ ಆಗುತ್ತಿದೆ.

ಇನ್ನೂ ಸುಮಾರು ದಿನಗಳಿಂದ ವರುಣ್ ತೇಜ್ ಮದುವೆಯ ಬಗ್ಗೆ ಅನೇಕ ರೂಮರ್‍ ಗಳು ಕೇಳಿಬರುತ್ತಿವೆ. ವರುಣ್ ತೇಜ್ ಹಾಗೂ ಲಾವಣ್ಯ ತ್ರಿಪಾಠಿ ಪ್ರೀತಿಯಲ್ಲಿದ್ದಾರೆ. ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂಬ ಸುದ್ದಿಗಳೂ ಸಹ ಜೋರಾಗಿಯೇ ಕೇಳಿಬಂದಿವೆ. ಇನ್ನೂ ಅವರಿಬ್ಬರೂ ಪಾರ್ಟಿಗಳಲ್ಲೂ ಸಹ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ವರುಣ್ ತೇಜ್ ತಂಗಿ ನಿಹಾರಿಕಾ ಮದುವೆಯಲ್ಲೂ ಸಹ ಲಾವಣ್ಯ ತ್ರಿಪಾಠಿ ಭಾಗಿಯಾಗಿದ್ದರು. ಈ ಕಾರಣದಿಂದ ಅವರ ನಡುವಣ ಸಂಬಂಧದ ಬಗ್ಗೆ ಮತಷ್ಟು ರೂಮರ್‍ ಗಳು ಹುಟ್ಟಿಕೊಂಡವು. ಆದರೆ ಈ ರೂಮರ್‍ ಗಳನ್ನು ವರುಣ್ ತೇಜ್ ಹಾಗೂ ಲಾವಣ್ಯ ಸಹ ಖಂಡಿಸಿದ್ದರು. ನಾವಿಬ್ಬರೂ ಒಳ್ಳೆಯ ಸ್ನೇಹಿತರಷ್ಟೆ. ಇಂತಹ ರೂಮರ್‍ ಗಳು ಸತ್ಯಕ್ಕೆ ದೂರವಾದುದು ಎಂದು ಸ್ಪಷ್ಟನೆ ನೀಡಿದ್ದರು. ಆದರೂ ಸಹ ರೂಮರ್‍ ಗಳು ಮಾತ್ರ ಹರಿದಾಡುವುದು ಕಡಿಮೆಯಾಗಲಿಲ್ಲ. ಇನ್ನೂ ಇತ್ತೀಚಿಗೆ ಸಂದರ್ಶನವೊಂದರಲ್ಲಿ ವರುಣ್ ತಂದೆ ನಾಗಬಾಬು ಸಹ ಶೀಘ್ರದಲ್ಲೇ ವರುಣ್ ಗೆ ಮದುವೆ ಮಾಡುವುದಾಗಿ ಹೇಳಿದ್ದಾರೆ.

ಇನ್ನೂ ವರುಣ್ ತೇಜ್ ಸದ್ಯ ಸಿನೆಮಾಗಳಲ್ಲಿ ಡಲ್ ಆಗಿದ್ದಾರೆ ಎನ್ನಬಹುದಾಗಿದೆ. ವರುಣ್ ತೇಜ್ ಅಭಿನಯದ ಫಿದಾ, ತೊಲಿಪ್ರೇಮಾ, ಗದ್ದಲಕೊಂಡ ಗಣೇಶ್ ಹಾಗೂ ಎಫ್-2 ಸಿನೆಮಾಗಳು ಒಳ್ಳೆಯ ಬ್ರೇಕ್ ನೀಡಿದೆ. ಆದರೆ ಗನಿ ಎಂಬ ಸಿನೆಮಾ ತುಂಬಾ ನಿರೀಕ್ಷೆಯನ್ನು ಹುಟ್ಟಿಸಿತ್ತು. ಆದರೆ ಈ ಸಿನೆಮಾ ಬಾಕ್ಸ್ ಆಫಿಸ್ ನಲ್ಲಿ ಮಕಾಡೆ ಮಲಗಿತ್ತು. ಬಳಿಕ ಎಫ್-3 ಸಿನೆಮಾ ಸಹ ಕೊಂಚ ಸಕ್ಸಸ್ ಕಂಡರೂ ರೆಕಾರ್ಡ್ ಮಾಡಲಿಲ್ಲ. ಸದ್ಯ ವರುಣ್ ತೇಜ್ ಗಾಂಢೀವದಾರಿ ಅರ್ಜುನ ಎಂಬ ಟೈಟಲ್ ನಡಿ ಆಕ್ಷನ್ ಎಂಟರ್‍ ಟ್ರೈನರ್‍ ಸಿನೆಮಾದಲ್ಲಿ ನಟಿಸುತ್ತಿದ್ದಾರೆ.