Film News

ನಟಿ ರೇಣು ದೇಸಾಯಿ ಸಹ ಆ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರಂತೆ, ಷಾಕಿಂಗ್ ವಿಚಾರ ರಿವೀಲ್ ಮಾಡಿದ ಪವನ್ ಕಲ್ಯಾಣ್ ಮಾಜಿ ಪತ್ನಿ…..!

ನಟಿ ರೇಣು ದೇಸಾಯಿ ಅನೇಕ ಸಿನೆಮಾಗಳಲ್ಲಿ ನಟಿಸಿದ್ದಾರೆ. ನಟ ಪವರ್‍ ಸ್ಟಾರ್‍ ಪವನ್ ಕಲ್ಯಾಣ್ ಮದುವೆಯಾಗಿ ವಿಚ್ಚೇಧನ ಪಡೆದುಕೊಂಡು ಸದ್ಯ ಆಕೆ ತಮ್ಮ ಮಕ್ಕಳೊಂದಿಗೆ ಇದ್ದಾರೆ. ಪವನ್ ಜೊತೆಗೆ ಬೇರೆಯಾದ ಬಳಿಕ ಆಕೆ ಪುಣೆಯಲ್ಲಿ ಮಕ್ಕಳೊಂದಿಗೆ ಸೆಟಲ್ ಆಗಿದ್ದಾರೆ. ಮಕ್ಕಳೊಂದಿಗೆ ಜೀವನ ಕಳೆಯುತ್ತಾ ಸಾಗುತ್ತಿದ್ದಾರೆ. ಇನ್ನೂ ಆಕೆ ಇದೀಗ ಸಿನೆಮಾಗಳಲ್ಲೂ ಸಹ ನಟಿಸುತ್ತಿದ್ದಾರೆ. ಇದೀಗ ಆಕೆ ಷಾಕಿಂಗ್ ವಿಚಾರವೊಂದನ್ನು ಹರಿಬಿಟ್ಟಿದ್ದಾರೆ. ಸದ್ಯ ಆಕೆ ಪೋಸ್ಟ್ ನೋಡಿದ ಅಭಿಮಾನಿಗಳು ಶಾಕ್ ಆಗಿದ್ದಾರೆ.

ಇತ್ತಿಚಿಗೆ ಸಿನಿರಂಗದಲ್ಲಿ ಅನೇಕ ನಟಿಯರು ವಿವಿಧ ಕಾಯಿಲೆಗಳಿಗೆ ತುತ್ತಾಗಿರುವ ಬಗ್ಗೆ ತಿಳಿದೇ ಇದೆ.  ಸ್ಟಾರ್‍ ನಟಿ ಸಮಂತಾ ಮಯೋಸೈಟಿಸ್ ಕಾಯಿಲೆಗೆ ತುತ್ತಾಗಿದ್ದರು. ಮತ್ತೊರ್ವ ನಟಿ ಮಮತಾ ಮೋಹನ್ ದಾಸ್ ಸಹ ವಿಟಿಲಿಗೋ ಎಂಬ ಚರ್ಮ ವ್ಯಾಧಿಗೆ ತುತ್ತಾಗಿದ್ದಾರೆ. ಇದೇ ಮಾದರಿಯಲ್ಲಿ ಅನೇಕ ನಟಿಯರು ವಿವಿಧ ರೀತಿಯ ಕಾಯಿಲೆಗಳಿಗೆ ತುತ್ತಾಗಿದ್ದಾರೆ. ಇದೀಗ ನಟಿ ಪವನ್ ಕಲ್ಯಾಣ್ ಮಾಜಿ ಪತ್ನಿ ರೇಣು ದೇಸಾಯಿ ಸಹ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಈ ಬಗ್ಗೆ ಆಕೆ ತನ್ನ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಸದ್ಯ ಆಕೆಯ ಪೋಸ್ಟ್ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ರೇಣು ದೇಸಾಯಿ ಅನಾರೋಗ್ಯಕ್ಕೆ ತುತ್ತಾಗಿರುವ ಪೋಸ್ಟ್ ಕಂಡ ಅಭಿಮಾನಿಗಳು ಶಾಕ್ ಆಗಿದ್ದಾರೆ.

ಇನ್ನೂ ನಟಿ ರೇಣು ದೇಸಾಯಿ ತನ್ನ ಇನ್ಸ್ಟಾಗ್ರಾಂ ನಲ್ಲಿ ತನ್ನ ಅನಾರೋಗ್ಯದ ಬಗ್ಗೆ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್ ನಲ್ಲಿರುವಂತೆ ನನ್ನನ್ನು ಹತ್ತಿರದಿಂದ ನೋಡುತ್ತಿರುವವರಿಗೆ ಮಾತ್ರ ಗೊತ್ತಿದೆ ನಾನು ಕೆಲವು ದಿನಗಳಿಂದ ಹೃದಯ ಹಾಗೂ ಇತರೆ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದೇನೆ. ಅವನ್ನು ಎದುರಿಸಲು ನಾನು ಶಕ್ತಿಯನ್ನು ಶೇಖರಿಸಿಕೊಳ್ಳುತ್ತಿದ್ದೇನೆ. ನನ್ನ ಹಾಗೇ ಯಾರಾದರೂ ಸಮಸ್ಯೆ ಪಡುತ್ತಿದ್ದರೇ ಅವರಲ್ಲಿ ಧೈರ್ಯ  ಹಾಗೂ ಪಾಸಿಟೀವ್ ಎನರ್ಜಿ ತುಂಬುವ ನಿಟ್ಟಿನಲ್ಲಿ ಈ ಪೋಸ್ಟ್ ಅನ್ನು ಹಂಚಿಕೊಳ್ಳುತ್ತಿದ್ದೇನೆ. ಎಂತಹ ಕಠಿಣ ಪರಿಸ್ಥಿತಿಯಲ್ಲೂ ಸಹ ಧೈರ್ಯ ಕಳೆದುಕೊಳ್ಳದೇ ಪ್ರಬಲವಾಗಿರಬೇಕು ಎಂದಿದ್ದಾರೆ.

ಅಷ್ಟೇ ಅಲ್ಲದೇ ಜೀವನದ ಮೇಲೆ ನಂಬಿಕೆ ಇರಬೇಕು. ಯಾವುದೋ ಒಂದು ದಿನ ನಮ್ಮ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಹ ದೊರೆಯುತ್ತದೆ. ಸದ್ಯ ನಾನು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದೇನೆ. ಔಷಧಗಳನ್ನು ತೆಗೆದುಕೊಳ್ಳುತ್ತಿದ್ದೇನೆ. ಯೋಗಾ, ಪೌಷ್ಟಿಕ ಆಹಾರ ಸಹ ಸೇವಿಸುತ್ತಿದ್ದೇನೆ. ಶೀಘ್ರದಲ್ಲೆ ಆರೋಗ್ಯವಂತಳಾಗಿ ಸಿನೆಮಾ ಶೂಟಿಂಗ್ ಗಳಲ್ಲಿ ಭಾಗಿಯಾಗುತ್ತೇನೆ ಎಂದು ಪೋಸ್ಟ್ ಮಾಡಿದ್ದಾರೆ. ಆದರೆ ಆಕೆ ಯಾವ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂಬುದು ಮಾತ್ರ ತಿಳಿಸಿಲ್ಲ. ಇನ್ನೂ ರೇಣು ದೇಸಾಯಿ ಸುಮಾರು ದಿನಗಳ ಬಳಿಕ ಟೈಗರ್‍ ನಾಗೇಶ್ವರ್‍ ರಾವ್ ಎಂಬ ಸಿನೆಮಾದಲ್ಲಿ ನಟಿಸುತ್ತಿದ್ದಾರೆ.

Most Popular

To Top