ಭಾರಿ ಸಂಭಾವನೆ ಏರಿಸಿದ ನಂದಮೂರಿ ಬಾಲಕೃಷ್ಣ, ಸಿನೆಮಾ ಒಂದಕ್ಕೆ ಎಷ್ಟು ಕೋಟಿ ಗೊತ್ತಾ?

ತೆಲುಗು ಸಿನಿರಂಗದ ಸ್ಟಾರ್‍ ನಟ ನಂದಮೂರಿ ಬಾಲಕೃಷ್ಣ ರವರು ಅಖಂಡ ಸಿನೆಮಾದ ಮೂಲಕ ಭಾರಿ ಸಕ್ಸಸ್ ಕಂಡುಕೊಂಡರು. ಪ್ರಸಕ್ತ ವರ್ಷದಲ್ಲಿ ತೆರೆಕಂಡ ವೀರಸಿಂಹಾರೆಡ್ಡಿ ಸಿನೆಮಾದ ಬಳಿಕ ಮತಷ್ಟು ಕ್ರೇಜ್ ಪಡೆದುಕೊಂಡರು. ಈ ಎರಡೂ ಸಿನೆಮಾಗಳು ಅವರ ಕೆರಿಯರ್‍ ನಲ್ಲಿ ಭಾರಿ ಕಲೆಕ್ಷನ್ ಮಾಡಿದ ಸಿನೆಮಾಗಳಾಗಿವೆ. ಇದೀಗ ನಂದಮೂರಿ ಬಾಲಕೃಷ್ಣ ತನ್ನ ಸಂಭಾವನೆಯನ್ನು ಏರಿಸಿದ್ದಾರೆ ಎಂಬ ಸುದ್ದಿ ಸಿನಿವಲಯದಲ್ಲಿ ಕೇಳಿಬರುತ್ತಿದೆ.

ಸಾಮಾನ್ಯವಾಗಿ ನಟ ಬಾಲಕೃಷ್ಣ ಸಂಭಾವನೆಯನ್ನು ಹೆಚ್ಚು ಮಾಡುವುದಿಲ್ಲ. ಅವರು ನಿರ್ಮಾಪಕರ ಬಗ್ಗೆ ಆಲೋಚನೆ ಮಾಡುತ್ತಾರೆ. ಆ ಕಾರಣಕ್ಕಾಗಿ ಅವರು ರೆನ್ಯುಮರೇಷನ್ ಬಗ್ಗೆ ಹಿಂದೆ ಮುಂದೆ ನೋಡುತ್ತಿರುತ್ತಾರೆ. ಆದರೆ ಯಂಗ್ ನಟರಿಗೂ ಪೈಪೋಟಿ ನೀಡುತ್ತಾ ಬ್ಯಾಕ್ ಟು ಬ್ಯಾಕ್ ಸಿನೆಮಾಗಳಲ್ಲಿ ನಟಿಸುತ್ತಾ, ಅದೇ ರೀತಿಯಲ್ಲಿ ಸಕ್ಸಸ್ ಗಳನ್ನು ಸಹ ಕಾಣುತ್ತಿರುತ್ತಾರೆ. ಇನ್ನೂ ತೆಲುಗು ಸಿನಿರಂಗದಲ್ಲಿ ಅನೇಕ ನಟರ ತಮ್ಮ ಸಂಭಾವನೆಯನ್ನು ಏರಿಸುತ್ತಾ ಬಂದಿದ್ದಾರೆ. ಅವರಂತೆ ಬಾಲಕೃಷ್ಣ ಸಹ ತಮ್ಮ ರೆನ್ಯುಮರೇಷನ್ ಏರಿಸಿದ್ದರೇ 50 ಕೋಟಿ ಸಂಭಾವನೆಯನ್ನು ಪಡೆದುಕೊಳ್ಳಬೇಕಾಗಿತ್ತು. ಆದರೆ ಬಾಲಯ್ಯ ಮಾತ್ರ ಸಂಭಾವನೆಯ ಏರಿಕೆಯ ಬಗ್ಗೆ ಹೆಚ್ಚು ಆಸಕ್ತಿ ತೋರುತ್ತಿರಲಿಲ್ಲ. ಆದರೆ ಇದೀಗ ಅವರ ಸಂಭಾವನೆ ಏರಿಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಸದ್ಯ ಕೇಳಿಬರುತ್ತಿರುವ ಸುದ್ದಿಗಳ ಪ್ರಕಾರ ಬಾಲಕೃಷ್ಣ ತಮ್ಮ ಸಂಭಾವನೆಯನ್ನು ಏರಿಸಿದ್ದಾರೆ ಎನ್ನಲಾಗುತ್ತಿದೆ. ಅಖಂಡ ಸಿನೆಮಾದ ಗ್ರಾಂಡ್ ಸಕ್ಸಸ್ ಬಳಿಕ ಬಾಲಯ್ಯ ತುಂಬಾ ಜೋಷ್ ನಲ್ಲಿದ್ದಾರೆ. ಈ ಸಿನೆಮಾದ ಬಳಿಕ ತೆರೆಕಂಡ ವೀರಸಿಂಹಾರೆಡ್ಡಿ ಸಿನೆಮಾ ಸಹ ಭಾರಿ ಸಕ್ಸಸ್ ಕಂಡುಕೊಂಡಿದೆ. ಈ ಕಾರಣದಿಂದ ಬಾಲಯ್ಯ ತನ್ನ ಸಂಭಾವನೆಯನ್ನು ಏರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯ ಬಾಲಕೃಷ್ಣ ಅನಿಲ್ ರಾವಿಪೂಡಿ ನಿರ್ದೇಶನದಲ್ಲಿ ಸಿನೆಮಾ ಮಾಡುತ್ತಿದ್ದಾರೆ. ಈ ಸಿನೆಮಾಗಾಗಿ ಬಾಲಕೃಷ್ಣ ಭಾರಿ ಸಂಭಾವನೆಯನ್ನು ಪಡೆದುಕೊಳ್ಳಲಿದ್ದಾರಂತೆ. ಈ ಹಿಂದೆ ಬಾಲಕೃಷ್ಣ ಸಿನೆಮಾ ಒಂದಕ್ಕಾಗಿ 15 ಕೋಟಿಯವರೆಗೂ ಸಂಭಾವನೆ ಪಡೆಯುತ್ತಿದ್ದರಂತೆ. ಇದೀಗ ಬಾಲಕೃಷ್ಣ ರವರ NBK108 ಸಿನೆಮಾಗಾಗಿ 20 ಕೋಟಿ ಸಂಭಾವನೆ ಪಡೆದುಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.

ಕಳೆದ ವರ್ಷ ತೆರೆಕಂಡ ಅಖಂಡ ಸಿನೆಮಾ ಬಾಲಕೃಷ್ಣ ರವರಿಗೆ ಭಾರಿ ಸಕ್ಸಸ್ ತಂದು ಕೊಟ್ಟಿತ್ತು. ಈ ಸಿನೆಮಾದ ಬಳಿಕ ಅದೇ ಜೋಷ್ ನಲ್ಲಿ ವೀರಾಸಿಂಹಾರೆಡ್ಡಿ ಸಹ ಈ ವರ್ಷದ ಆರಂಭದಲ್ಲೇ ತೆರೆಕಂಡು ಈ ಸಿನೆಮಾ ಸಹ 100 ಕೋಟಿ ಕ್ಲಬ್ ಸೇರಿಕೊಂಡಿದೆ. ಇದೀಗ ಬಾಲಕೃಷ್ಣ ಮುಂದಿನ ಸಿನೆಮಾಗಳ ಮೇಲೂ ಭಾರಿ ನಿರೀಕ್ಷೆ ಹುಟ್ಟಿದೆ. ಇನ್ನೂ ಬಾಲಕೃಷ್ಣ ರವರ ಜೊತೆ ಸಿನೆಮಾ ಮಾಡಲು ನಿರ್ದೇಶಕರೂ ಸಹ ಸಿದ್ದವಾಗುತ್ತಿದ್ದಾರೆ. ಡೈನಾಮಿಕ್ ಡೈರೆಕ್ಟರ್‍ ಪೂರಿ ಜಗನ್ನಾಧ್ ಹಾಗೂ ಬಾಲಕೃಷ್ಣ ಕಾಂಬಿನೇಷನ್ ನಲ್ಲೂ ಸಹ ಸಿನೆಮಾ ಒಂದು ಬರಲಿದೆ.